ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ

Updated on: Aug 18, 2025 | 7:51 PM

ಪರಪ್ಪನ ಅಗ್ರಹಾರದಲ್ಲಿ ಇರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಬಂದಿದ್ದಾರೆ. ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್ ಅವರ ಕಾರನ್ನು ಜೈಲು ಸಿಬ್ಬಂದಿ ತಡೆದಿದ್ದಾರೆ. ಮನವಿ ಮಾಡಿದರೂ ಕೂಡ ಪೊಲೀಸ್ ಠಾಣೆವರೆಗು ಬರಲು ಬಿಟ್ಟಿಲ್ಲ. ಕೊನೆಗೆ ಜೈಲು ಚೆಕ್ ಪೋಸ್ಟ್ ತನಕ ವಿಜಯಲಕ್ಷ್ಮಿ ನಡೆದು ಬಂದರು.

ಪರಪ್ಪನ ಅಗ್ರಹಾರದಲ್ಲಿ (Parappana Agrahara) ಇರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಬಂದಿದ್ದಾರೆ. ಸಾಮಾನ್ಯ ಎಂಟ್ರಿ ಹಿನ್ನೆಲೆಯಲ್ಲಿ ಅರ್ಧ ತಾಸು ಮಾತ್ರ ಭೇಟಿಗೆ ಅವಕಾಶ ನೀಡಲಾಯಿತು. ಹಣ್ಣು ನೀಡಿದ ವಿಜಯಲಕ್ಷ್ಮೀ ಅವರು ಕುಶಲೋಪರಿ ವಿಚಾರಿಸಿದ್ದಾರೆ. ಪತ್ನಿ ಬಳಿ ಮಗನ ಬಗ್ಗೆ ದರ್ಶನ್ (Darshan) ವಿಚಾರಿಸಿದ್ದಾರೆ. ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್ ಅವರ ಕಾರನ್ನು ಜೈಲು ಸಿಬ್ಬಂದಿ ತಡೆದಿದ್ದಾರೆ. ಮನವಿ ಮಾಡಿದರೂ ಕೂಡ ಪೊಲೀಸ್ ಠಾಣೆವರೆಗು ಬರಲು ಬಿಟ್ಟಿಲ್ಲ. ಕೊನೆಗೆ ಜೈಲು ಚೆಕ್ ಪೋಸ್ಟ್ ತನಕ ವಿಜಯಲಕ್ಷ್ಮಿ (Vijayalakshmi Darshan) ನಡೆದು ಬಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.