ಕಿಸ್ ಕೊಟ್ರೆ ಫೋನ್​: ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಚಾಲಕನಿಗೆ ಬಿತ್ತು ಗುಸಾ

Updated on: Sep 11, 2025 | 4:02 PM

ಬಸ್​​ ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.  ಖಾಸಗಿ ಸ್ಲೀಪರ್ ಕೋಚ್ ಬಸ್​ ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಅಪ್ರಾಪ್ತೆಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಬಾಲಕಿಯ ಕುಟುಂಬಸ್ಥರು ಬೆಂಗಳೂರಿನ ಚಾಲುಕ್ಯ ಸರ್ಕಲ್‌ ಬಳಿ ಬಸ್​ ನಿಲ್ಲಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 11): ಬಸ್​​ ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.  ಖಾಸಗಿ ಸ್ಲೀಪರ್ ಕೋಚ್ ಬಸ್​ ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಅಪ್ರಾಪ್ತೆಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಬಾಲಕಿಯ ಕುಟುಂಬಸ್ಥರು ಬೆಂಗಳೂರಿನ ಚಾಲುಕ್ಯ ಸರ್ಕಲ್‌ ಬಳಿ ಬಸ್​ ನಿಲ್ಲಿಸಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

15 ವರ್ಷದ ಬಾಲಕಿ ಬಸ್​ ನಲ್ಲಿ ಡ್ರೈವರ್ ಬಳಿ ತನ್ನ ಮೊಬೈಲ್ ಚಾರ್ಜ್ ​ ಹಾಕಿದ್ದಳು. ಚಾರ್ಜ್ ಬಳಿಕ ಮೊಬೈಲ್ ಹಿಂಪಡೆಯುವಾಗ ಸ್ಪೇರ್ ಚಾಲಕ ಆರೀಫ್​,  ಕಿಸ್ ಕೊಡುವಂತೆ ಒತ್ತಾಯಿಸಿದ್ದಾನೆ. ಮೊಬೈಲ್ ಬೇಕಂದ್ರೆ ಒಂದು ಮುತ್ತು ಕೊಡಬೇಕೆಂದು ಬಾಲಕಿಗೆ ಪೀಡಿಸಿದ್ದು, ಕೊನೆಗೆ ಬಾಲಕಿ ಹೇಗೋ ಫೋನ್ ಇಸ್ಕೊಂಡು ತನ್ನ ಅಣ್ಣನಿಗೆ ಕರೆ ಮಾಡಿ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪೋಷಕರು ಬಸ್ ಚಾಲುಕ್ಯ ಸರ್ಕಲ್ ಬಳಿ ಬರುತ್ತಿದ್ದಂತೆಯೇ ನಿಲ್ಲಿಸಿ ಚಾಲಕ ಆರೀಫ್​​ ನ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Published on: Sep 11, 2025 04:00 PM