ಕಂಚು ಗೆದ್ದ ಹಾಕಿ ತಂಡದಲ್ಲಿ ಇಬ್ಬರು ಕನ್ನಡಿಗರು; ಟಿವಿ9 ಜೊತೆ ಅನುಭವವನ್ನು ಹಂಚಿಕೊಂಡಿದ್ದು ಹೀಗೆ
Paris Olympics 2024: ಹಾಕಿ ತಂಡದ ಈ ಐತಿಹಾಸಿಕ ಯಶಸ್ಸಿನಲ್ಲಿ ಇಬ್ಬರು ಕನ್ನಡಿಗರ ಪಾತ್ರವೂ ಅಪಾರವಾಗಿದೆ. ವಾಸ್ತವವಾಗಿ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಹಾಕಿ ತಂಡದ ಸಹಾಯಕ ಸಿಬ್ಬಂದಿಗಳಲ್ಲಿ ಇಬ್ಬರು ಕನ್ನಡಿಗರು ಸಹ ಸೇರಿದ್ದಾರೆ. ಬೆಂಗಳೂರು ಮೂಲದ ಹರ್ಶಿತ್ ಎಂ.ಎಲ್ ಹಾಗೂ ರಂಗನಾಥ್ ಹಾಕಿ ತಂಡದ ಸಹಾಯಕ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ಹಾಕಿ ತಂಡ ಸೆಮಿಫೈನಲ್ ತಲುಪಿತ್ತು. ಆದರೆ ಸೆಮೀಸ್ನಲ್ಲಿ ಜರ್ಮನಿ ವಿರುದ್ಧ ತಂಡ ಸೋಲನ್ನು ಎದುರಿಸಬೇಕಾಯಿತು. ಇದಾದ ಬಳಿಕ ತಂಡವು ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿ ಪದಕವನ್ನು ಗೆದ್ದುಕೊಂಡಿತು. ಇದರೊಂದಿಗೆ ಸತತ ಎರಡು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸಾಧನೆಯನ್ನು ಭಾರತ ಹಾಕಿ ತಂಡ ಮಾಡಿದೆ. ಹಾಕಿ ತಂಡದ ಈ ಐತಿಹಾಸಿಕ ಯಶಸ್ಸಿನಲ್ಲಿ ಇಬ್ಬರು ಕನ್ನಡಿಗರ ಪಾತ್ರವೂ ಅಪಾರವಾಗಿದೆ. ವಾಸ್ತವವಾಗಿ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಹಾಕಿ ತಂಡದ ಸಹಾಯಕ ಸಿಬ್ಬಂದಿಗಳಲ್ಲಿ ಇಬ್ಬರು ಕನ್ನಡಿಗರು ಸಹ ಸೇರಿದ್ದಾರೆ. ಬೆಂಗಳೂರು ಮೂಲದ ಹರ್ಶಿತ್ ಎಂ.ಎಲ್ ಹಾಗೂ ರಂಗನಾಥ್ ಹಾಕಿ ತಂಡದ ಸಹಾಯಕ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಭಾರತ ಹಾಕಿ ತಂಡದ ಅನಾಲಿಟಿಕಲ್ ಕೋಚ್ ಆಗಿ ಹರ್ಶಿತ್ ಸೇವೆ ಸಲ್ಲಿಸುತ್ತಿದ್ದರೆ, ರಂಗನಾಥ್ ತಂಡದ ಮುಖ್ಯ ಫಿಜಿಯೋಥೆರೆಫಿಸ್ಟ್ ಆಗಿದ್ದಾರೆ. ತಂಡ ದಾಖಲೆಯ ಪದಕ ಗೆಲ್ಲುವಲ್ಲಿ ಈ ಇಬ್ಬರ ಪಾತ್ರ ಅಪಾರವಾಗಿದ್ದು, ಇದೀಗ ಈ ಇಬ್ಬರು ಕನ್ನಡಿಗರು ಟಿವಿ9 ಡಿಜಿಟಲ್ ಜೊತೆ ತಮ್ಮ ಒಲಿಂಪಿಕ್ಸ್ ಪ್ರಯಾಣವನ್ನು ಹಂಚಿಕೊಂಡಿದ್ದಾರೆ.