ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ

ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ

ಮಂಜುನಾಥ ಸಿ.
|

Updated on: Oct 23, 2024 | 6:18 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರಲ್ಲಿ ಈಗ ಪಕ್ಷ ರಾಜಕೀಯ ಪ್ರಾರಂಭವಾಗಿದೆ. ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯ ಮಾಡಲಾಗುತ್ತಿದೆ. ಎರಡೂ ಪಕ್ಷದವರು ಗಲಾಟೆ ಮಾಡಿದ್ದು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ರಾಜಕೀಯ ಸಾಮಾನ್ಯ. ಆದರೆ ಈಗ ಬಿಗ್​ಬಾಸ್ ಮನೆಯಲ್ಲಿ ಪಕ್ಷ ರಾಜಕೀಯ ಪ್ರಾರಂಭ ಆಗಿದೆ. ಬಿಗ್​ಬಾಸ್ ಮನೆಯ ಸ್ಪರ್ಧಿಗಳನ್ನು ಎರಡು ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯ ಮಾಡುವ ಟಾಸ್ಕ್ ನೀಡಲಾಗಿದೆ. ಎರಡೂ ಪಕ್ಷಗಳವರು ಥೇಟ್ ರಾಜಕಾರಣಿಗಳಂತೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಸಹಜವಾಗಿಯೇ ಎರಡೂ ಪಕ್ಷಗಳ ನಡುವೆ ಮನೆಯಲ್ಲಿ ಗಲಾಟೆ ಶುರುವಾಗಿದೆ. ಪಕ್ಷದ ಪೋಸ್ಟರ್ ಅನ್ನು ನಮ್ಮ ಮನೆಯ ಬಳಿ ಅಂಟಿಸಿದ್ದೀರಿ ಎಂದು ಇನ್ನೊಂದು ಪಕ್ಷದವರು ಗಲಾಟೆ ಮಾಡಿದ್ದಾರೆ. ಪಕ್ಷದ ಪೋಸ್ಟರ್​ಗಳನ್ನು ಹರಿದು ಹಾಕಿ ಥೇಟ್ ‘ರಾಜಕೀಯ ರೌಡಿ’ಗಳಂತೆ ವರ್ತನೆ ಮಾಡಿದ್ದಾರೆ. ಪಾಪ ಕ್ಯಾಪ್ಟನ್ ಹನುಮಂತು ಮಾತ್ರ ಎರಡು ಗುಂಪಿನ ನಡುವೆ ಸಿಕ್ಕಿಕೊಂಡು ಬಡವಾಗಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ