Loading video

ಜನಹಿತ ಮರೆತು ಸ್ವಾರ್ಥಕ್ಕಾಗಿ ಹೋರಾಟ ಮಾಡಿದರೆ ಪಕ್ಷ ಯಾವತ್ತೂ ಗಟ್ಟಿಯಾಗಲಾರದು: ಸಿಟಿ ರವಿ

|

Updated on: Mar 08, 2025 | 1:31 PM

ಜನಹಿತವನ್ನು ಆಧಾರವಾಗಿಟ್ಟುಕೊಂಡು ಹೋರಾಟ ನಡೆಸಿದರೆ ಮಾತ್ರ ಅದಕ್ಕೊಂದು ಅರ್ಥವಿರುತ್ತದೆ ಮತ್ತು ಪಕ್ಷ ಗಟ್ಟಿಗೊಳ್ಳುತ್ತದೆ, ಜನಹಿತ ಮರೆತು ಕೇವಲ ಸ್ವಾರ್ಥಕ್ಕಾಗಿ ಬಡಿದಾಡಿದರೆ ಅದಕ್ಕೆ ಯಾವ ಬೆಲೆಯೂ ಇರಲ್ಲ, ಅದರಿಂದ ನಮಗೆ ಮತ್ತು ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಹಿರಿಯ ಬಿಜೆಪಿ ನಾಯಕ ಸಿಟಿ ರವಿ ಹೇಳಿದರು.

ಬೆಳಗಾವಿ, ಮಾರ್ಚ್ 8: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ತಿಕ್ಕಾಟಗಳ ಬಗ್ಗೆ ಅಸಮಾಧಾನದಿಂದ ಮಾತಾಡಿದರು. ಪಕ್ಷದ ಮುಖಂಡರೆಲ್ಲ ತಾವು ಮೂಲತಃ ಕಾರ್ಯಕರ್ತರು (party workers) ಅನ್ನೋದನ್ನು ಮರೆಯಬಾರದು, ಎಲ್ಲರೂ ಸಮಾನರು ಎಂಬ ಭಾವನೆ ಮನದಲ್ಲಿದ್ದರೆ ಸಂಘರ್ಷಕ್ಕೆ ದಾರಿ ಇರೋದಿಲ್ಲ ಎಂದು ಹೇಳಿದ ರವಿ, ಪಕ್ಷದ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಮಾತಾಡೋದು ತನಗಿಷ್ಟವಿಲ್ಲ ಎಂದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅವಾಚ್ಯ ಶಬ್ಧ ಬಳಕೆ ಕೇಸ್: ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ ಸಿಟಿ ರವಿ ಕೋರ್ಟ್​ ಬಿಗ್ ಶಾಕ್!

Published on: Mar 08, 2025 12:43 PM