ರಸ್ತೆ, ಕುಡಿಯುವ ನೀರು ಕೇಳಿದ ಯುವಕನ ಕಪಾಳಕ್ಕೆ ಹೊಡೆದ ಶಾಸಕ ವೆಂಕಟರಮಣಪ್ಪ

Edited By: sandhya thejappa

Updated on: Apr 20, 2022 | 5:20 PM

ತುಮಕೂರು ಜಿಲ್ಲೆಯ ಪಾವಗಡ ಶಾಸಕ ವೆಂಕಟರಮಣಪ್ಪ ಪಾವಗಡ ತಾಲೂಕು ಕಚೇರಿ ಬಳಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಾಗೇನಹಳ್ಳಿಗೆ ರಸ್ತೆ, ನೀರು, ಸಾರಿಗೆ ವ್ಯವಸ್ಥೆ ಕೇಳಲು ಯುವಕ ಹೋಗಿದ್ದ.

ಗ್ರಾಮಕ್ಕೆ ರಸ್ತೆ (Road), ಕುಡಿಯುವ ನೀರು (Water) ಕೇಳಿದ್ದಕ್ಕೆ ಯುವಕನಿಗೆ ಶಾಸಕ ವೆಂಕಟರಮಣಪ್ಪ ಕಪಾಳಕ್ಕೆ ಹೊಡೆದಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ಶಾಸಕ ವೆಂಕಟರಮಣಪ್ಪ ಪಾವಗಡ ತಾಲೂಕು ಕಚೇರಿ ಬಳಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಾಗೇನಹಳ್ಳಿಗೆ ರಸ್ತೆ, ನೀರು, ಸಾರಿಗೆ ವ್ಯವಸ್ಥೆ ಕೇಳಲು ಯುವಕ ಹೋಗಿದ್ದ. ಈ ವೇಳೆ ಶಾಸಕ ನರೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ. 70 ವರ್ಷವಾದ್ರೂ ಮೂಲ ಸೌಲಭ್ಯ ಒದಗಿಸಿಲ್ಲವೆಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೆ ಹಾಕಿಸುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ. ಈ ದೃಶ್ಯವನ್ನು ಅಲ್ಲಿ ಸೇರಿದ್ದ ಜನರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಊರಿನ ರಸ್ತೆಗಳೆಲ್ಲ ಕಿತ್ತು ಹೋಗಿದೆ, ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಶಾಸಕರಿಗೆ ದೂರು ನೀಡುವ ವೇಳೆ ಕೋಪಗೊಂಡ ಶಾಸಕ ವೆಂಕಟರಮಣಪ್ಪ ಆ ಯುವಕನ ಕೆನ್ನೆಗೆ ಬಾರಿಸಿದ್ದಾರೆ.

ಇದನ್ನೂ ಓದಿ

ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?

ಗ್ರಾಮಕ್ಕೆ ರಸ್ತೆ, ನೀರಿನ ಸೌಲಭ್ಯ ಕೇಳಿದ ಯುವಕನಿಗೆ ಪಾವಗಡದ ಕಾಂಗ್ರೆಸ್ ಶಾಸಕರಿಂದ ಕಪಾಳಮೋಕ್ಷ

Published on: Apr 20, 2022 05:19 PM
Follow Us
Web contact

TV9 Kannada

Read More