ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?

Hubballi Constables: ಇಬ್ಬರು ಕಾನ್ಸ್‌ಟೇಬಲ್​ ಗಳು ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿರುವುದು ಕಂಡುಬಂದಿದೆ. ಸೈಜಗಲ್ಲು ಎತ್ತಿಹಾಕಿ ಆ ಪೇದೆಗಳಿಬ್ಬರ ಹತ್ಯೆಗೆ ಗಲಭೆಕೋರರು ಯತ್ನಿಸಿದ್ದಾರೆ. ಕಸಬಾ ಪೇಟೆ ಠಾಣೆ ಕಾನ್ಸ್‌ಟೇಬಲ್ಸ್‌ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಹತ್ಯೆಗೆ ಕಿಡಿಗೇಡಿಗಳು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ದಿಡ್ಡಿ ಹನುಮಂತ ದೇಗುಲ ಬಳಿ ಇವರಿಬ್ಬರನ್ನೂ ತಡೆದು, ಹತ್ಯೆಗೆ ಯತ್ನಿಸಿದ್ದಾರೆ.

ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?
ಹುಬ್ಬಳ್ಳಿ ಹಿಂಸಾಚಾರದ ಮತ್ತೊಂದು ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 20, 2022 | 4:59 PM

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಕಳೆದ ವಾರಂತ್ಯ ದಿಢೀರನೆ ಭುಗಿಲೆದ್ದ ಹಿಂಸಾಚಾರ (Hubballi violence) ಕುರಿತು ಮತ್ತೊಂದು ಭೀಕರ ವಿಡಿಯೋ ಟಿವಿ 9 ಗೆ ಲಭ್ಯವಾಗಿದೆ. ಈ ವಿಡಿಯೋ ನೊಡಿದ್ರೆ ಎಂತಹವರೂ ಬೆಚ್ವಿಬಿಳೋದು ಗ್ಯಾರೆಂಟಿ. ಗಲಭೆಯ ಟಾಪ್ ಆ್ಯಂಗಲ್ ವಿಡಿಯೋ ಇದಾಗಿದ್ದು ವೈರಲ್ ಆಗಿದೆ. ಪೊಲೀಸರು ಲಾಠಿ ಚಾರ್ಜ್​ ಮಾಡಿದರೂ ಬಗ್ಗದ ಕಿಡಿಗೇಡಿಗಳು ಪೊಲೀಸರ ಮೇಲೆಯೇ (Hubballi Constables) ಅಟ್ಯಾಕ್ ಮಾಡಲು ಗುಂಪು ಗುಂಪಾಗಿ ನುಗ್ಗಿ ಬರುತ್ತಿರುವುದು ವಿಡಿಯೋದಲ್ಲಿ ನಿಚ್ಚಳವಾಗಿ ಕಾಣಬರುತ್ತದೆ. ಇನ್ನು ಹುಬ್ಬಳ್ಳಿ ಗಲಭೆಯಲ್ಲಿ ರಕ್ತಚರಿತ್ರೆ ಬರೆಯಲು ಸಿದ್ದವಾಗಿತ್ತಾ ಸ್ಕೆಚ್ ಎಂಬ ಅನುಮಾನಕ್ಕೆ ಮತ್ತೊಂದು ಪುಷ್ಟಿ ಸಿಕ್ಕಿದೆ. ಅದು ಯಾವ ಪರಿ ಹಿಂಸಾಚಾರವೆಂದರೆ ನೇರವಾಗಿ ಪೊಲೀಸರನ್ನೇ ಟಾರ್ಗೆಟ್ ಮಾಡಿ ನೆತ್ತರೋಕುಳಿಗೆ ಹುನ್ನಾರ ನಡೆದಿತ್ತು ಎನ್ನಲಾಗಿದೆ. ಹುಬ್ಬಳ್ಳಿ ಗಲಭೆಯಲ್ಲಿ ಇಬ್ಬರ ಪೊಲೀಸರ ಹತ್ಯೆಗೆ ಸಂಚು ನಡೆದಿತ್ತಾ? ಎಂಬ ಅನುಮಾನ ಕಾಡುತ್ತಿದೆ. ಘಟನೆಯ ಭೀಕರತೆಯನ್ನು ಸ್ವತಃ ಪೊಲೀಸ್ ಸಿಬ್ಬಂದಿಯೊಬ್ಬರು ಬಿಚ್ಚಿಟ್ಟಿದ್ದಾರೆ (Diddi Hanumantha Temple).

ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿದ್ದ ಕಾನ್ಸ್‌ಟೇಬಲ್ಸ್‌: ಇಬ್ಬರು ಕಾನ್ಸ್‌ಟೇಬಲ್​ ಗಳು ಕೂದಲೆಳೆ ಅಂತರದಲ್ಲಿ ಬಚಾವ್‌ ಆಗಿರುವುದು ಕಂಡುಬಂದಿದೆ. ಸೈಜಗಲ್ಲು ಎತ್ತಿಹಾಕಿ ಆ ಪೇದೆಗಳಿಬ್ಬರ ಹತ್ಯೆಗೆ ಗಲಭೆಕೋರರು ಯತ್ನಿಸಿದ್ದಾರೆ. ಕಸಬಾ ಪೇಟೆ ಠಾಣೆ ಕಾನ್ಸ್‌ಟೇಬಲ್ಸ್‌ ಅನಿಲ್ ಕಾಂಡೇಕರ್ ಮತ್ತು ಮಂಜುನಾಥ ನಾಮರಡ್ಡಿ ಹತ್ಯೆಗೆ ಕಿಡಿಗೇಡಿಗಳು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ದಿಡ್ಡಿ ಹನುಮಂತ ದೇಗುಲ ಬಳಿ ಇವರಿಬ್ಬರನ್ನೂ ತಡೆದು, ಹತ್ಯೆಗೆ ಯತ್ನಿಸಿದ್ದಾರೆ. 10-15 ಗಲಭೆಕೋರರು ಸುತ್ತುವರಿದು ಪೊಲೀಸರಿಬ್ಬರ ಹತ್ಯೆಗೆ ಯತ್ನಿಸಿದ್ದರು. ಆ ವೇಳೆ, ಬೈಕ್ ಬಿಟ್ಟು ತಪ್ಪಿಸಿಕೊಂಡು, ಪ್ರಾಣ ಉಳಿಸಿಕೊಂಡಿದ್ದಾರೆ ಇಬ್ಬರೂ ಕಾನ್ಸ್‌ಟೇಬಲ್​ ಗಳು. ಈ ಬಗ್ಗೆ ಇಬ್ಬರೂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಕಿಡಿಗೇಡಿಗಳ ಕರಾಳತೆಯನ್ನು ಇಂಚಿಂಚೂ ಬಿಚ್ಚಿಟ್ಟಿದ್ದಾರೆ ಈ ಪೊಲೀಸ್ ಸಿಬ್ಬಂದಿ.

Also Read: GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್‌ ಹಂಸವೇಣಿ, ಎಸಿಬಿ ಬಲೆಗೆ ಬಿದ್ದು ವಿಲವಿಲ

Also Read: ಆರ್ಮಿಯಲ್ಲಿ ಹವಾಲ್ದಾರನಾಗಿರುವ ಬಾಗಲಕೋಟೆ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ

Published On - 4:51 pm, Wed, 20 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ