AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್‌ ಹಂಸವೇಣಿ, ಎಸಿಬಿ ಬಲೆಗೆ ಬಿದ್ದು ವಿಲವಿಲ

Chikkajala Traffic Inspector Hamsaveni: ಗ್ಯಾಸ್ ಪೈಪ್ ಲೈನ್ ಗೆ ರಸ್ತೆ ಬದಿಯಲ್ಲಿ ಕೆಲಸ ಮಾಡಲು ಯೋಜನೆ ಮಂಜೂರಾಗಿತ್ತು. ಈ ವೇಳೆ ರಸ್ತೆ ಬದಿ ಅಗೆಯಲು GAIL ಕಂಪನಿ ಅಧಿಕಾರಿಗಳು/ ಸಿಬ್ಬಂದಿ ಮುಂದಾಗಿದ್ದರು. ಆದರೆ ರಸ್ತೆ ಬದಿ ಅಗೆದು ಕೆಲಸ ಮಾಡಲು ಸಂಚಾರಿ ಪೊಲೀಸರ ಅನುಮತಿ ಸಹ ಪಡೆಯಬೇಕಿತ್ತು. ಅದಕ್ಕೆ ಅನುಮತಿ ನೀಡಲು ಇಪ್ಪತ್ತು ಸಾವಿರ ಲಂಚ ಕೇಳಿದ್ದರು ಮಹಿಳಾ ಇನ್ಸ್ಪೆಕ್ಟರ್ ಹಂಸವೇಣಿ.

GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್‌ ಹಂಸವೇಣಿ, ಎಸಿಬಿ ಬಲೆಗೆ ಬಿದ್ದು ವಿಲವಿಲ
GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್‌ ಹಂಸವೇಣಿ ಎಸಿಬಿ ಬಲೆಗೆ ಬಿದ್ದು ವಿಲವಿಲ
TV9 Web
| Updated By: ಸಾಧು ಶ್ರೀನಾಥ್​|

Updated on:Apr 20, 2022 | 9:02 PM

Share

ಬೆಂಗಳೂರು: ಗ್ಯಾಸ್‌ ಪೈಪ್‌ಲೈನ್‌ಗೆ ರಸ್ತೆ ಅಗೆಯುವುದಕ್ಕೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್‌ ಲಂಚ ಸ್ವೀಕರಿಸುತ್ತಿದ್ದಾಗಲೆ ಎಸಿಬಿ (Anti Corruption Bureau -ACB) ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಸಂಚಾರಿ ಇನ್ಸ್‌ಪೆಕ್ಟರ್‌ ಹಂಸವೇಣಿ (Chikkajala Traffic Inspector Hamsaveni) 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಸರ್ಕಾರಿ ಸ್ವಾಮ್ಯದ GAIL ಕಂಪನಿ ಅಧಿಕಾರಿಗಳಿಂದ (GAIL authorities) ಹಂಸವೇಣಿ ಲಂಚ ಸ್ವೀಕರಿಸ್ತಿದ್ದರು. ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ಯಾಸ್ ಪೈಪ್ ಲೈನ್ ಗೆ ರಸ್ತೆ ಬದಿಯಲ್ಲಿ ಕೆಲಸ ಮಾಡಲು ಯೋಜನೆ ಮಂಜೂರಾಗಿತ್ತು. ಈ ವೇಳೆ ರಸ್ತೆ ಬದಿ ಅಗೆಯಲು GAIL ಕಂಪನಿ ಅಧಿಕಾರಿಗಳು/ ಸಿಬ್ಬಂದಿ ಮುಂದಾಗಿದ್ದರು. ಆದರೆ ರಸ್ತೆ ಬದಿ ಅಗೆದು ಕೆಲಸ ಮಾಡಲು ಸಂಚಾರಿ ಪೊಲೀಸರ ಅನುಮತಿ ಸಹ ಪಡೆಯಬೇಕಿತ್ತು. ಅದಕ್ಕೆ ಅನುಮತಿ ನೀಡಲು ಇಪ್ಪತ್ತು ಸಾವಿರ ಲಂಚ ಕೇಳಿದ್ದರು ಮಹಿಳಾ ಇನ್ಸ್ಪೆಕ್ಟರ್ ಹಂಸವೇಣಿ. ಇದರಿಂದ ರೋಸಿದ GAIL ಕಂಪನಿ ಅಧಿಕಾರಿಗಳು ಪೊಲೀಸರ ಲಂಚದ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಇಂದು ಬುಧವಾರ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಂಚಾರಿ ಇನ್ಸ್ ಪೆಕ್ಟರ್ ಹಂಸವೇಣಿ ಅವರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಅಗಿ ಲಾಕ್ ಮಾಡಿದರು.

ಭೂ ಪರಿಹಾರ ನೀಡಲು ಶೇ 1 ರಷ್ಟು ಲಂಚ: ಭೂಸ್ವಾಧೀನ ಇಲಾಖೆಯ ವ್ಯವಸ್ಥಾಪಕ ಅರೆಸ್ಟ್ ಕಲಬುರಗಿ: ಕಲಬುರಗಿ ಭೂಸ್ವಾಧೀನ ಇಲಾಖೆ ಕಚೇರಿಯ SLAO ವ್ಯವಸ್ಥಾಪಕ ಶರಣ ಬಸಪ್ಪ ಜಾಲಹಳ್ಳಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಭೂಸ್ವಾಧೀನದ ಪರಿಹಾರ ಚೆಕ್ ನೀಡಲು 14,850 ರೂ. ಲಂಚ ಕೇಳಿದ್ದರು. 14,85,000 ರೂ. ಚೆಕ್​ ನೀಡಲು ಸುರಪೂರದ ರೈತ ರಾಜಾ ನಾಯಕ ಎಂಬುವವರಿಂದ 14,850 ರೂ. ಲಂಚ (ಶೇ 1 ರಷ್ಟು ಲಂಚ) ಸ್ವೀಕರಿಸುವಾಗ ಎಸಿಬಿ ನಡೆಸಿದ ಮಿಂಚಿನ ಕಾರ್ಯಾಚರಣೆ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವ್ಯವಸ್ಥಾಪಕ ಶರಣಸಪ್ಪ ಜಾಲಹಳ್ಳಿ ಅರೆಸ್ಟ್ ಆಗಿದ್ದಾರೆ.

ಹೊಸದುರ್ಗ: ಲಂಚ ಸ್ವೀಕರಿಸುತ್ತಿದ್ದ ಉಪ ನೋಂದಣಾಧಿಕಾರಿ ಎಸಿಬಿ ಬಲೆಗೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕಚೇರಿಯಲ್ಲಿ 4 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಉಪ ನೋಂದಣಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಆಸ್ತಿ ಮಾರ್ಟ್​ಗೇಜ್ ವಿಚಾರವಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗುರುಪ್ರಸಾದ್​, ಲಂಚ ಸ್ವೀಕಾರ ವೇಳೆ ಎಸಿಬಿ ಇನ್ಸ್​ಪೆಕ್ಟರ್​ ಪ್ರವೀಣ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಇದನ್ನೂ ಓದಿ: ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ವಿಚಾರಣೆಗೆ ಐವರು ಅಭ್ಯರ್ಥಿಗಳು ಗೈರು

ಇದನ್ನೂ ಓದಿ: 7 ತಿಂಗಳ ಹಿಂದೆ ಯುವತಿಯೊಂದಿಗೆ ಓಡಿಹೋಗಿದ್ದ ವಿವಾಹಿತನಿಗೆ 55,000 ರೂ. ದಂಡ; ಕಾರಣವೇನು ಗೊತ್ತಾ?

Published On - 3:36 pm, Wed, 20 April 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!