ಬೇಸಿಗೆ ರಜೆಯಲ್ಲಿರುವ ಮಕ್ಕಳೇ ಶಾಲೆಗೆ ಹೋಗೋಕೆ ಸಿದ್ಧರಾಗಿ; ಶಿಕ್ಷಣ ಇಲಾಖೆಯಿಂದ 22-23ನೇ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆ
ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದವರು. ಈ ವೇಳೆ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಕಲಿಕೆ ಗುಣಮಟ್ಟದಾಗಿರಲಿಲ್ಲ. ಹೀಗಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಕಲಿಕೆಯಲ್ಲಿ ಹಿನ್ನೆಡೆ ಉಂಟಾಗಿದೆ.
ಬೆಂಗಳೂರು: ಪರೀಕ್ಷೆ ಬರೆದು ಪ್ರಾಥಮಿಕ (Primary) ಮತ್ತು ಪ್ರೌಢ ಶಾಲೆ (High School) ಮಕ್ಕಳು ಸದ್ಯ ಬೇಸಿಗೆ ರಜೆಯಲ್ಲಿದ್ದಾರೆ. ಮೇ 15ರವರೆಗೆ ಬೇಸಿಗೆ ರಜೆಯಿದ್ದು, ಮೇ 16ರಿಂದ ಶಾಲೆ ಮತ್ತೆ ಆರಂಭವಾಗಲಿದೆ. ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಮಾರ್ಗಸೂಚಿ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಕಳೆದ 3 ವರ್ಷಗಳ ಚಟುವಟಿಕೆ ಅವಲೋಕಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕಳೆದ 3 ವರ್ಷ ಫೂರ್ಣ ಪ್ರಮಾಣದ ಕಲಿಕೆಯಾಗಿಲ್ಲ. ಕೇವಲ ಶೇ.50-60 ಮಕ್ಕಳಿಗೆ ಮಾತ್ರ ಭೌತಿಕ ಕಲಿಕೆ ನೀಡಲಾಗಿದೆ. ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆಯೇ ಆಗಿಲ್ಲ. ಹೀಗಾಗಿ ಎಲ್ಲಾ ಶಾಲೆಗಳಲ್ಲಿ ಮಾರ್ಗಸೂಚಿಯನ್ನ ಅನುಷ್ಠಾನಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕಟಿಸಿದೆ.
ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿದ್ದವರು. ಈ ವೇಳೆ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಕಲಿಕೆ ಗುಣಮಟ್ಟದಾಗಿರಲಿಲ್ಲ. ಹೀಗಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಕಲಿಕೆಯಲ್ಲಿ ಹಿನ್ನೆಡೆ ಉಂಟಾಗಿದೆ.
2022-23ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು: ಮೊದಲ ಅವಧಿಯಲ್ಲಿ ಮೇ 16ರಿಂದ ಅಕ್ಟೋಬರ್ 2ರವರೆಗೆ ಶಾಲಾ ತರಗತಿಗಳು ನಡೆಯುತ್ತವೆ. ಎರಡನೇ ಅವಧಿಯಲ್ಲಿ ಅಕ್ಟೋಬರ್ 17ರಿಂದ 2023 ರ ಏಪ್ರಿಲ್ 10ರವರೆಗೆ ತರಗತಿಗಳು ನಡೆಯುತ್ತವೆ. ಅಕ್ಟೋಬರ್ 3ರಿಂದ ಅಕ್ಟೋಬರ್ 16ರವರೆಗೆ ದಸರಾ ರಜೆ ಇರುತ್ತದೆ. 2022 ಏಪ್ರಿಲ್ 11ರಿಂದ 2023 ಮೇ 28ರವರೆಗೆ ಬೇಸಿಗೆ ರಜೆ ಇರುತ್ತದೆ. ಈ ಕ್ಯಾಲೆಂಡರ್ ರಾಜ್ಯದ ಎಲ್ಲ ಶಾಲೆಗಳಲ್ಲಿ ಅನ್ವಯವಾಗುತ್ತದೆ.
ಇದನ್ನೂ ಓದಿ
ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ, ಸಿಎಂ ಬೊಮ್ಮಾಯಿಯವರಿಂದ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ
Yuzvendra Chahal: ಚಹಲ್ ಪತ್ನಿ ಧನಶ್ರೀ ವರ್ಮಾ ವಿಡಿಯೋಗೆ ಜಾಸ್ ಬಟ್ಲರ್ ಮಾಡಿದ ಕಮೆಂಟ್ ಏನು ನೋಡಿ
Published On - 12:19 pm, Thu, 21 April 22