Uber Price Hike: ಬೆಂಗಳೂರಿನಲ್ಲಿನ್ನು ಕ್ಯಾಬ್ ಪ್ರಯಾಣ ದುಬಾರಿ; ಉಬರ್ನಿಂದ ಶೇ. 10ರಷ್ಟು ಬೆಲೆ ಏರಿಕೆ
ಉಬರ್ ಬೆನ್ನಲ್ಲೇ ಓಲಾ ಕೂಡ ತನ್ನ ಪ್ರಯಾಣದ ದರಗಳನ್ನು ಪರಿಷ್ಕರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಓಲಾದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.
ಬೆಂಗಳೂರು: ಈ ಟ್ರಾಫಿಕ್ನಲ್ಲಿ ಗಾಡಿ ಓಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ (Bangalore Traffic) ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಸ್ವಂತ ವಾಹನಗಳಿಗಿಂತಲೂ ಆಟೋ, ಕ್ಯಾಬ್ಗಳ ಮೇಲೆ ಅವಲಂಬಿತರಾದವರೇ ಹೆಚ್ಚು. ಆದರೆ, ಇನ್ನುಮುಂದೆ ಬೆಂಗಳೂರಿನಲ್ಲಿ ಕ್ಯಾಬ್ ಪ್ರಯಾಣ ದುಬಾರಿಯಾಗಲಿದೆ. ಏರುತ್ತಿರುವ ಪೆಟ್ರೋಲ್ (Petrol Price), ಡೀಸೆಲ್ ಬೆಲೆಯನ್ನು (Diesel Price) ನಿಭಾಯಿಸಲು ತನ್ನ ಚಾಲಕ-ಪಾಲುದಾರರಿಗೆ ಸಹಾಯ ಮಾಡಲು ಉಬರ್ (Uber Price) ಟ್ರಿಪ್ ದರವನ್ನು ಹೆಚ್ಚಿಸಿದೆ.
ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರ ಕಾರ್ಯಾಚರಣೆಯ ಮುಖ್ಯಸ್ಥ ನಿತೀಶ್ ಭೂಷಣ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ಕ್ಯಾಬ್ಗಳ ಚಾಲಕರು ಇಂಧನದ ಬೆಲೆಗಳ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಅವರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು, ಉಬರ್ ರೈಡ್ನ ಬೆಲೆ ಏರಿಕೆ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ನಾವು ಬೆಂಗಳೂರಿನಲ್ಲಿ ಉಬರ್ ದರವನ್ನು 10% ಹೆಚ್ಚಿಸಿದ್ದೇವೆ. ಮುಂಬರುವ ವಾರಗಳಲ್ಲಿ ನಾವು ಇಂಧನ ಬೆಲೆ ಚಲನೆಯನ್ನು ಟ್ರ್ಯಾಕ್ ಮಾಡುವುದನ್ನು ಮುಂದುವರಿಸುತ್ತೇವೆ. ಅಗತ್ಯವಿದ್ದರೆ ಮುಂದೆ ಮತ್ತೆ ಬೆಲೆಯೇರಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಉಬರ್ ಬೆನ್ನಲ್ಲೇ ಓಲಾ ಕೂಡ ತನ್ನ ಪ್ರಯಾಣದ ದರಗಳನ್ನು ಪರಿಷ್ಕರಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಓಲಾದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 112 ರೂ. ತಲುಪಿದೆ. ಡೀಸೆಲ್ ದರ ಲೀಟರ್‌ಗೆ 95 ರೂ. ದಾಟುವ ಸನ್ನಾಹದಲ್ಲಿದೆ. ಸಾರಿಗೆ ಇಲಾಖೆಯ ದರ ರಚನೆಯ ಪ್ರಕಾರ, ಪ್ರಯಾಣಿಕರು ಮೊದಲ 4 ಕಿಮೀಗೆ ಸಣ್ಣ ಕ್ಯಾಬ್‌ಗಳಿಗೆ ಕನಿಷ್ಠ 75 ರೂ ಮತ್ತು ಐಷಾರಾಮಿ ಟ್ಯಾಕ್ಸಿಗಳಿಗೆ 150 ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: GST: ಹೊಸ ವರ್ಷದ ಆರಂಭದಲ್ಲೇ ಶಾಕಿಂಗ್ ನ್ಯೂಸ್: ಜ. 1 ರಿಂದ ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ
ಅಮೆರಿಕದಲ್ಲಿ ಉಬರ್ ಚಾಲಕನಾಗಿರುವ ಅಫ್ಘಾನ್ ಮಾಜಿ ಹಣಕಾಸು ಸಚಿವ; ಜೀವನೋಪಾಯಕ್ಕಾಗಿ ಈ ಕೆಲಸ
Published On - 1:58 pm, Thu, 21 April 22