ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಕಾರು ಚಾಲಕ!

ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಕಾರು ಚಾಲಕ!
ನಾಯಿ ಮೇಲೆ ಕಾರು ಹತ್ತಿಸುತ್ತಿರುವ ದೃಶ್ಯ

ಏಪ್ರಿಲ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ನಾಯಿ ಮೇಲೆ ಕಾರು ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ ನಿಲ್ಲಿಸದೆ ಹೋಗಿದ್ದಾನೆ.

TV9kannada Web Team

| Edited By: sandhya thejappa

Apr 21, 2022 | 2:52 PM

ಬೆಂಗಳೂರು: ಬೀದಿ ನಾಯಿ (Dog) ಮೇಲೆ ಕಾರು (Car) ಹತ್ತಿಸಿ ವಿಕೃತಿ ಮೆರೆದ ಘಟನೆ ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ನಾಯಿ ಮೇಲೆ ಕಾರು ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ ನಿಲ್ಲಿಸದೆ ಹೋಗಿದ್ದಾನೆ. ಅಪಘಾತಕ್ಕೊಳಗಾದ ನಾಯಿ ನಡು ರಸ್ತೆಯಲ್ಲೇ ವಿಲವಿಲ ಒದ್ದಾಡಿ ಮೃತಪಟ್ಟಿದೆ. ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ದೂರುದಾರ ರಾಮಚಂದ್ರ ಭಟ್ಟ, 19ರಂದು ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ಆದರೆ ನಂಗೆ ಅವತ್ತು ಸಂಜೆ ವಿಷಯ ತಿಳಿಯಿತು. ಘಟನೆ ನಡೆದ ಸ್ಥಳದಲ್ಲಿದ್ದ ಮಾರ್ಟ್ಗೆ ಬಂದಿದ್ದೆ. ಕಾರು 20-25 kmps ವೇಗದಲ್ಲಷ್ಟೇ ಇತ್ತು. ಆ ಕಾರು ಚಾಲಕ ಮನಸ್ಸು ಮಾಡಿದರೆ ನಾಯಿನ ಬದುಕು ಉಳಿಸಬಹುದಿತ್ತು. ಆದರೆ ಬೇಕು ಬೇಕಂತಲೇ ನಾಯಿಯನ್ನು ಸಾಯಿಸಿದ್ದಾರೆ. ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ದೂರು ತಗೊಂಡಿರಲಿಲ್ಲ. ಆಮೇಲೆ ಕೆಲ ಜನರ ಸಹಾಯದಿಂದ ದೂರು ದಾಖಲಿಸಿದ್ದಾರೆ. ಇದೇ ರೀತಿ ಬೆಂಗಳೂರಿನಲ್ಲಿ ಹಲವು ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

ಉತ್ತರಕನ್ನಡದಲ್ಲಿ ಟಾಟಾ ಎಸ್ ವಾಹನ ಪಲ್ಟಿ: ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡಲ್ಲಿ ಟಾಟಾ ಎಸ್ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದ ಓರ್ವ  ಸಾವನ್ನಪ್ಪಿದ್ದಾರೆ. ಐವರು ಗಂಭೀರ ಗಾಯಗೊಂಡಿದ್ದಾರೆ. ವಾಹನ ಗೌಳಿವಾಡಾದಿಂದ ಕುಸೂರು ಗ್ರಾಮದ ಕಡೆ ತೆರಳುತ್ತಿತ್ತು. ಈ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮಳ್ಳು ಗಾವಡೆ (20) ಎಂಬಾತ ಸ್ಥಳದಲ್ಲಿ ‌ಸಾವನ್ನಪ್ಪಿದ್ದಾರೆ. ಕಾಮಿ೯ಕರು ಕಬ್ಬಿನ ಗದ್ದೆಯ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಗಾಯಾಳುಗಳು‌ ಮುಂಡಗೋಡು ಮತ್ತು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದನ್ನೂ ಓದಿ

Aadhaar Card: ಆಧಾರ್ ಕಾರ್ಡ್‌ನ ವಿವಿಧ ರೂಪಗಳ ಜತೆಗೆ ಅವುಗಳ ವೈಶಿಷ್ಟ್ಯದ ಬಗ್ಗೆ ತಿಳಿಯಿರಿ

Russian Oil: ರಷ್ಯಾದಿಂದ ತೈಲ ಖರೀದಿಸುತ್ತಿರುವ ಹಾಗೂ ಖರೀದಿ ನಿಲ್ಲಿಸಿದ ದೇಶಗಳ ಪಟ್ಟಿ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada