ಎಎಪಿಯ ಮೂರನೇ ಸರ್ಕಾರ ಕರ್ನಾಟಕದಲ್ಲಿ ರಚಿಸಲಿದ್ದೇವೆ: ಅರವಿಂದ ಕೇಜ್ರಿವಾಲ್

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಉಲ್ಲೇಖಿಸಿ ಶೇ 40 ಸರ್ಕಾರ ಉರುಳಿಸಲು ರೈತ ಸಂಘಟನೆಗಳ ಬೆಂಬಲವನ್ನು ಕೋರಿದರು.

ಎಎಪಿಯ ಮೂರನೇ ಸರ್ಕಾರ ಕರ್ನಾಟಕದಲ್ಲಿ ರಚಿಸಲಿದ್ದೇವೆ: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 21, 2022 | 4:42 PM

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಗುರುವಾರ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದ (AAP) ಪ್ರಚಾರವನ್ನು ಪ್ರಾರಂಭಿಸಿದರು. ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರಕ್ಕೇರಿದ ನಂತರ ತಮ್ಮ ಪಕ್ಷವು ಕರ್ನಾಟಕದಲ್ಲಿ ತನ್ನ ಮೂರನೇ ಸರ್ಕಾರವನ್ನು ರಚಿಸಲಿದೆ ಎಂದು ಅವರು ಹೇಳಿದರು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಬಿಜೆಪಿ (BJP) ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಉಲ್ಲೇಖಿಸಿ ಶೇ 40 ಸರ್ಕಾರ ಉರುಳಿಸಲು ರೈತ ಸಂಘಟನೆಗಳ ಬೆಂಬಲವನ್ನು ಕೋರಿದರು. “ನಾವು ಈ ಸರ್ಕಾರಗಳ ಶೇ 20ಮತ್ತು ಶೇ 40 ಕಮಿಷನ್ ಖಾತೆಗಳನ್ನು ಮುಚ್ಚಬೇಕಾಗಿದೆ” ಭ್ರಷ್ಟಾಚಾರ ಮುಕ್ತ ಸರ್ಕಾರವು ಜನರಿಗೆ ಹಲವಾರು ಸೇವೆಗಳನ್ನು ಉಚಿತವಾಗಿ ನೀಡಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. “ಕಳೆದ ಕೆಲವು ವರ್ಷಗಳಲ್ಲಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಹೊರತಾಗಿಯೂ, ದೆಹಲಿಯ ಜನರಿಗೆ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಮತ್ತು ಮಹಿಳೆಯರಿಗೆ ಸಾರಿಗೆ -ಇವುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. “ನಾವು ಅದನ್ನು ಹೇಗೆ ಮಾಡಿದ್ದೇವೆ? ನಾವು ಪ್ರಾಮಾಣಿಕರಾಗಿರುವುದರಿಂದ ನಾವು ಹಣವನ್ನು ಉಳಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಲಖಿಂಪುರ ಹಿಂಸಾಚಾರ ಮತ್ತು ನವದೆಹಲಿಯಲ್ಲಿರುವ ಅವರ ಅಧಿಕೃತ ನಿವಾಸದ ಮೇಲಿನ ದಾಳಿ ಕಳೆದ ಕೆಲವು ದಿನಗಳಿಂದ “ತನಗೆ ನೋವುಂಟು ಮಾಡಿದ” ಘಟನೆಗಳಾಗಿವೆ ಎಂದು ಅವರು ನೆನಪಿಸಿಕೊಂಡರು. ಈ ಗೂಂಡಾಗಳು ನಂತರ ಒಂದು ಪಕ್ಷಕ್ಕೆ ಸೇರಿದರು. ಎಲ್ಲಾ ಗೂಂಡಾಗಳು ಒಂದೇ ಪಕ್ಷಕ್ಕೆ ಹೋಗುತ್ತಾರೆ,” ಎಂದು ಅವರು ಹೇಳಿದಾಗ ಸಭಿಕರು ‘ಬಿಜೆಪಿ’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯು ಅತ್ಯಾಚಾರಿಗಳು ಮತ್ತು ಗೂಂಡಾಗಳನ್ನು ತಮ್ಮ ತೆಕ್ಕೆಗೆ ಸ್ವಾಗತಿಸುತ್ತದೆ ಎಂದು ಹೇಳಿದರು. “ಆದಾಗ್ಯೂ, ಎಎಪಿ ಸಜ್ಜನರು, ದೇಶಭಕ್ತರು ಮತ್ತು ಪ್ರಾಮಾಣಿಕ ಜನರ ಪಕ್ಷವಾಗಿದೆ” ಎಂದು ಅವರು ಹೇಳಿದರು. ದೇಶದ ವಿವಿಧ ಭಾಗಗಳಲ್ಲಿ ವರದಿಯಾಗಿರುವ ಗಲಭೆಗಳ ನಿದರ್ಶನಗಳನ್ನು ಟೀಕಿಸಿದ ಎಎಪಿ ನಾಯಕ, ಜನರು ಶಾಂತಿಯಿಂದ ಬದುಕಲು ಬಯಸುತ್ತಾರೆ. ನಿಮಗೆ ಗಲಭೆ ಬೇಕಿದ್ದರೆ ಅವರಿಗೆ ಮತ ನೀಡಿ, ಶಾಲೆಗಳು ಬೇಕಾದರೆ ನನಗೆ ಮತ ನೀಡಿ ಎಂದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರ್ಯಾಲಿಯಲ್ಲಿ ಎಎಪಿಗೆ ಸೇರ್ಪಡೆಯಾದರು. ಮುಂದಿನ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಲು ಕರ್ನಾಟಕ ರಾಜ್ಯ ರೈತ ಸಂಘ ಶ್ರಮಿಸಲಿದೆ ಎಂದು ಅವರು ಈ ಹಿಂದೆ ಘೋಷಿಸಿದ್ದರು. ಈ ತಿಂಗಳ ಆರಂಭದಲ್ಲಿ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೂಡ ಆಪ್ ಸೇರಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದಾಗ 20 %, ಈಗ 40% ಸರ್ಕಾರ ಇದೆ, ದೆಹಲಿಯಲ್ಲಿ 0% ಸರ್ಕಾರವಿದೆ: ಆಯ್ಕೆ ನಿಮ್ಮದು ಎಂದ ಅರವಿಂದ್ ಕೇಜ್ರಿವಾಲ್

Published On - 4:23 pm, Thu, 21 April 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್