ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆ, ಮೋದಿ ಸರ್ಕಾರ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ: ಅಮಿತ್ ಶಾ

2018-19ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಐಎ ದಾಖಲಿಸಿದ ಭಯೋತ್ಪಾದಕ ನಿಧಿ ಪ್ರಕರಣಗಳು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಸಹಾಯ ಮಾಡಿದೆ. ಇಲ್ಲಿಯವರೆಗೆ, ನಮ್ಮ ಏಜೆನ್ಸಿಗಳು ನಿರುಪದ್ರವಿಯಾಗಿ ಕಾಣುವ ಈ ಭಯೋತ್ಪಾದಕ-ಧನಸಹಾಯದ ವಿಧಾನಗಳ ಮೇಲೆ ದಾಳಿ ಮಾಡಿರಲಿಲ್ಲ

ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆ, ಮೋದಿ ಸರ್ಕಾರ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ: ಅಮಿತ್ ಶಾ
ಅಮಿತ್ ಶಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 21, 2022 | 5:41 PM

ದೆಹಲಿ: ಭಯೋತ್ಪಾದನೆಯು (Terrorism) ಮಾನವ ಹಕ್ಕುಗಳ (human rights) ಉಲ್ಲಂಘನೆಯಾಗಿದ್ದು,ಭಯೋತ್ಪಾದನೆ ವಿರುದ್ಧ ಹೋರಾಡುವುದು ಮಾನವ ಹಕ್ಕುಗಳಿಗಾಗಿರುವ ಹೋರಾಟವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗುರುವಾರ ಹೇಳಿದ್ದಾರೆ. ಭಯೋತ್ಪಾದನೆಯು ಯಾವುದೇ ಸುಸಂಸ್ಕೃತ ಸಮಾಜಕ್ಕೆ ಶಾಪ ನಮ್ಮ ದೇಶದಷ್ಟು ಯಾರೂ ಅದರಿಂದ ತೊಂದರೆಗೀಡಾಗಿಲ್ಲ. ಮಾನವ ಹಕ್ಕುಗಳ ಸಂಸ್ಥೆಗಳೊಂದಿಗೆ ಅವರು ಈ ವಿಷಯದ ಬಗ್ಗೆ ತೆಗೆದುಕೊಳ್ಳುವ ಕೋನದ ಬಗ್ಗೆ ನನಗೆ ಭಿನ್ನಾಭಿಪ್ರಾಯಗಳಿವೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆದಾಗಲೆಲ್ಲಾ ಈ ಸಂಘಟನೆಗಳು ಮಾನವ ಹಕ್ಕುಗಳ ವಿಚಾರವನ್ನು ಮಂಡಿಸುತ್ತವೆ. ಭಯೋತ್ಪಾದನೆಯಷ್ಟು ಮಾನವ ಹಕ್ಕುಗಳನ್ನು ಉಲ್ಲಂಘಿಸುವಂಥದ್ದು ಮತ್ತೊಂದಿಲ್ಲ ಎಂದು ನಾನು ನಂಬುತ್ತೇನೆ. ಆದ್ದರಿಂದ ಭಯೋತ್ಪಾದನೆ ವಿರುದ್ಧ ಹೋರಾಡುವುದು ಮಾನವ ಹಕ್ಕುಗಳ ರಕ್ಷಣೆಗೆ ವಿರೋಧಾಭಾಸವಾಗಲಾರದು. ಭಯೋತ್ಪಾದನೆಯನ್ನು ಅದರ ಮೂಲದಿಂದ ಕೊನೆಗೊಳಿಸುವುದು ಮಾನವ ಹಕ್ಕುಗಳ ರಕ್ಷಣೆಯ ಅಗತ್ಯವಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ 13 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ಹೇಳಿದರು.  ಮೋದಿ ಸರ್ಕಾರ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ ಎಂದ ಶಾ, ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಲು ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. “ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವುದು ಒಂದು ವಿಷಯ ಮತ್ತು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ಇನ್ನೊಂದು ವಿಷಯ. ನಾವು ಅದನ್ನು ಮಾಡಲು ಬಯಸಿದರೆ ನಾವು ಭಯೋತ್ಪಾದಕ-ಧನಸಹಾಯ ಮೂಲಸೌಕರ್ಯವನ್ನು ನಾಶಪಡಿಸಬೇಕಾಗುತ್ತದೆ.

2018-19ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಐಎ ದಾಖಲಿಸಿದ ಭಯೋತ್ಪಾದಕ ನಿಧಿ ಪ್ರಕರಣಗಳು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಸಹಾಯ ಮಾಡಿದೆ. ಇಲ್ಲಿಯವರೆಗೆ, ನಮ್ಮ ಏಜೆನ್ಸಿಗಳು ನಿರುಪದ್ರವಿಯಾಗಿ ಕಾಣುವ ಈ ಭಯೋತ್ಪಾದಕ-ಧನಸಹಾಯದ ವಿಧಾನಗಳ ಮೇಲೆ ದಾಳಿ ಮಾಡಿರಲಿಲ್ಲ. ಎನ್ಐಎ ಪ್ರಕರಣಗಳನ್ನು ದಾಖಲಿಸಿದ ನಂತರ, ಭಯೋತ್ಪಾದಕ ಗುಂಪುಗಳಿಗೆ ಭಯೋತ್ಪಾದನೆ ನಿಧಿಯ ಸುಲಭ ಮಾರ್ಗಗಳು ಲಭ್ಯವಿಲ್ಲ. ನಾವು ಅದನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಸಾಧ್ಯವಾಗದಿರಬಹುದು, ಆದರೆ ನಾವು ಅದನ್ನು ನಿಯಂತ್ರಿಸಬಹುದು”ಎಂದು ಅವರು ಹೇಳಿದರು.

2020-21 ರಲ್ಲಿ ಎನ್ಐಎಯು ಭಯೋತ್ಪಾದಕ ಗುಂಪುಗಳ ಕಾರ್ಮಿಕರ (OGWs) ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದೆ ಮತ್ತು ಅನೇಕ ಸ್ಲೀಪರ್ ಸೆಲ್‌ಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿದೆ. “ಇದು ಭಯೋತ್ಪಾದಕ ಗುಂಪುಗಳ ಲಾಜಿಸ್ಟಿಕ್ಸ್ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಗೆ ತೀವ್ರ ಹೊಡೆತವನ್ನು ನೀಡಿದೆ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದರೂ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದವರನ್ನು ಎನ್‌ಐಎ ಬಹಿರಂಗಪಡಿಸಿದೆ ಮತ್ತು ಕಾನೂನಿನ ಮುಂದೆ ಹಾಜರುಪಡಿಸಿದೆ ಎಂದು ಶಾ ಹೇಳಿದರು.

ಮಾವೋವಾದಿ ಆಂದೋಲನಕ್ಕೆ ಹಣಕಾಸಿನ ನೆರವು ನೀಡಿದ ಕೆಲವು ಪ್ರಕರಣಗಳನ್ನು ಎನ್‌ಐಎ ಈಗ ಕೈಗೆತ್ತಿಕೊಂಡಿದೆ ಎಂದು ಒತ್ತಿ ಹೇಳಿದ ಶಾ, ಕಾಶ್ಮೀರದಲ್ಲಿ ಸಾಧಿಸಲು ಯಶಸ್ವಿಯಾಗಿರುವ ಅದೇ ಯಶಸ್ಸನ್ನು ಸಂಸ್ಥೆ ಸಾಧಿಸುತ್ತದೆ ಎಂದು ಆಶಿಸುತ್ತೇನೆ ಎಂದು ಹೇಳಿದರು. ಗೃಹ ಸಚಿವಾಲಯದ ಪ್ರಕಾರ ಭಯೋತ್ಪಾದಕ ನಿಧಿಯ ವಿಷಯಗಳಲ್ಲಿ ಎನ್ಐಎ ಒಟ್ಟು 105 ಪ್ರಕರಣಗಳನ್ನು ದಾಖಲಿಸಿದೆ. 876 ಆರೋಪಿಗಳನ್ನು ಒಳಗೊಂಡ 94 ಪ್ರಕರಣಗಳನ್ನು ಚಾರ್ಜ್‌ಶೀಟ್ ಮಾಡಲಾಗಿದೆ. ಸುಮಾರು 100 ಆರೋಪಿಗಳಿಗೆ ಶಿಕ್ಷೆಯಾಗಿದೆ.

ದೇಶದ ತನಿಖಾ ಸಂಪ್ರದಾಯಗಳಲ್ಲಿ ಸುಧಾರಣೆ ತರಲು ಸರ್ಕಾರ ಬದ್ಧವಾಗಿದೆ ಎಂದು ಶಾ ಹೇಳಿದರು. “ತನಿಖೆಗಳು ಇನ್ನು ಮುಂದೆ ಮೂರನೇ ಹಂತದ (ಶಂಕಿತರ ಚಿತ್ರಹಿಂಸೆ) ಮೇಲೆ ಅವಲಂಬಿತವಾಗಿರುವುದಿಲ್ಲ. ತನಿಖೆಯು ತಂತ್ರ, ಡೇಟಾ ಮತ್ತು ಮಾಹಿತಿಯ ಮೇಲೆ ಅವಲಂಬಿತವಾಗಿರಬೇಕು. ನಾವು ಈ ಸುಧಾರಣೆಯನ್ನು ತರಲು ಬಯಸಿದರೆ, ನಾವು ಡೇಟಾಬೇಸ್‌ಗಳನ್ನು ರಚಿಸಬೇಕು ಮತ್ತು ಡಿಜಿಟಲ್ ಫೋರೆನ್ಸಿಕ್ಸ್‌ನಲ್ಲಿ ಪರಿಣತಿಯನ್ನು ಹೊಂದಿರಬೇಕು, ”ಎಂದು ಶಾ ಹೇಳಿದರು.

ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಸೈಕೋಟ್ರೋಪಿಕ್ ವಸ್ತುಗಳು, ಹವಾಲಾ ವಹಿವಾಟುಗಳು, ಶಸ್ತ್ರಾಸ್ತ್ರ ಕಳ್ಳಸಾಗಣೆ, ನಕಲಿ ಕರೆನ್ಸಿ, ಬಾಂಬ್ ಸ್ಫೋಟಗಳು, ಭಯೋತ್ಪಾದಕ ನಿಧಿ ಮತ್ತು ಭಯೋತ್ಪಾದನೆ ಕುರಿತು ಡೇಟಾಬೇಸ್ ರಚಿಸುವ ಕಾರ್ಯವನ್ನು ಎನ್‌ಐಎಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಎಎಪಿಯ ಮೂರನೇ ಸರ್ಕಾರ ಕರ್ನಾಟಕದಲ್ಲಿ ರಚಿಸಲಿದ್ದೇವೆ: ಅರವಿಂದ ಕೇಜ್ರಿವಾಲ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್