AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maggi Price: ಮ್ಯಾಗಿ, ನೆಸ್ಕೆಫೆ ಕಾಫಿ, ಕಿಟ್ ಕ್ಯಾಟ್ ಬೆಲೆ ಮತ್ತೆ ಹೆಚ್ಚಳ?; ನೆಸ್ಲೆ ಕಂಪನಿ ಹೇಳಿದ್ದೇನು?

ಮ್ಯಾಗಿ, ಕಿಟ್​ಕ್ಯಾಟ್​ನಲ್ಲಿ ಬಳಸುವ ಕಚ್ಚಾ ವಸ್ತುಗಳು ಹಾಗೂ ಪ್ಯಾಕೇಜಿಂಗ್ ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದೆ. ಹೀಗಾಗಿ, ಮ್ಯಾಗಿ ಬೆಲೆಯನ್ನು ಶೇ. 9ರಿಂದ 16ರಷ್ಟು ಹೆಚ್ಚಿಸಲಾಗಿದೆ.

Maggi Price: ಮ್ಯಾಗಿ, ನೆಸ್ಕೆಫೆ ಕಾಫಿ, ಕಿಟ್ ಕ್ಯಾಟ್ ಬೆಲೆ ಮತ್ತೆ ಹೆಚ್ಚಳ?; ನೆಸ್ಲೆ ಕಂಪನಿ ಹೇಳಿದ್ದೇನು?
ಮ್ಯಾಗಿ
TV9 Web
| Edited By: |

Updated on: Apr 21, 2022 | 6:13 PM

Share

ಈಗಾಗಲೇ ತರಕಾರಿ, ಪೆಟ್ರೋಲ್, ಡೀಸೆಲ್, ಎಲ್​ಪಿಜಿ ಸಿಲಿಂಡರ್ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇದರ ನಡುವೆ ಇನ್ನೂ ಹಲವು ಪದಾರ್ಥಗಳ ಬೆಲೆಯೇರಿಕೆ ಮುಂದುವರೆದಿದೆ. ನೀವು ಮ್ಯಾಗಿ (Maggi), ಕಿಟ್​ಕ್ಯಾಟ್​ (KitKat) ಪ್ರಿಯರಾಗಿದ್ದರೆ ನಿಮ್ಮ ಜೇಬಿಗೆ ಮತ್ತೆ ಕತ್ತರಿ ಬೀಳುವುದು ಖಂಡಿತ. ನೆಸ್ಲೆ ( Nestle) ಕಂಪನಿಯು ತನ್ನ ಜನಪ್ರಿಯ ಬ್ರ್ಯಾಂಡ್‌ಗಳಾದ ಮ್ಯಾಗಿ, ಕಿಟ್‌ಕ್ಯಾಟ್ ಮತ್ತು ನೆಸ್ಕೆಫೆ ಕಾಫಿಯ ಬೆಲೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಮ್ಯಾಗಿ, ಕಿಟ್​ಕ್ಯಾಟ್​ನಲ್ಲಿ ಬಳಸುವ ಕಚ್ಚಾ ವಸ್ತುಗಳು ಹಾಗೂ ಪ್ಯಾಕೇಜಿಂಗ್ ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದೆ. ಹೀಗಾಗಿ, ಮ್ಯಾಗಿ ಬೆಲೆಯನ್ನು ಶೇ. 9ರಿಂದ 16ರಷ್ಟು ಹೆಚ್ಚಿಸಲಾಗಿದೆ. ನೆಸ್ಕೆಫೆ ಹಾಲಿನ ಪುಡಿ ಮತ್ತು ಕಾಫಿ ಪುಡಿಯ ಬೆಲೆ ಕೂಡ ಹೆಚ್ಚಾಗಿದೆ.

ಹಿಂದಿನ ತ್ರೈಮಾಸಿಕಗಳಲ್ಲಿ ತಿಳಿಸಿದಂತೆ ಪ್ರಮುಖ ಕಚ್ಚಾ ಮತ್ತು ಪ್ಯಾಕೇಜಿಂಗ್ ವಸ್ತುಗಳ ವೆಚ್ಚವು ಕಳೆದ 10 ವರ್ಷದಲ್ಲೇ ಅತಿ ಹೆಚ್ಚಾಗಿದೆ. ಈ ತ್ರೈಮಾಸಿಕದಲ್ಲಿ ವೆಚ್ಚಗಳು ಏರಿಕೆಯಾಗುತ್ತಲೇ ಇವೆ. ಇದು ಕಾರ್ಯಾಚರಣೆಗಳಿಂದ ಲಾಭದ ಮೇಲೆ ಪರಿಣಾಮ ಬೀರಿದೆ. ಮುಂದುವರಿದ ಹಣದುಬ್ಬರವು ಅಲ್ಪಾವಧಿಯಿಂದ ಮಧ್ಯಮ ಅವಧಿಯವರೆಗೆ ಪ್ರಮುಖ ಅಂಶವಾಗಿದೆ ಎಂದು ನೆಸ್ಲೆ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಕಿಟ್‌ಕಾಟ್ ಮತ್ತು ನೆಸ್ಲೆ ಮಂಚ್ ತ್ರೈಮಾಸಿಕದಲ್ಲಿ ತಲಾ ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿವೆ. ಪಾನೀಯಗಳಲ್ಲಿ, ನೆಸ್ಕೆಫ್ ಕ್ಲಾಸಿಕ್ ಮತ್ತು ಸನ್‌ರೈಸ್ ಎರಡಂಕಿಯ ಬೆಳವಣಿಗೆಯನ್ನು ತಲುಪಿಸಿದೆ ಎಂದು ಕಂಪನಿ ಹೇಳಿದೆ. ನೆಸ್ಲೆ ಇಂದು ತ್ರೈಮಾಸಿಕದಲ್ಲಿ 595 ಕೋಟಿ ರೂ. ನಿವ್ವಳ ಲಾಭವನ್ನು ಪಡೆದಿರುವುದಾಗಿ ತಿಳಿಸಿದೆ. ಇದರ ಒಟ್ಟು ಮಾರಾಟ 3,951 ಕೋಟಿ ರೂ. ಕಂಪನಿಯ ಒಟ್ಟು ಮಾರಾಟದ ಬೆಳವಣಿಗೆ ಮತ್ತು ದೇಶೀಯ ಮಾರಾಟದ ಬೆಳವಣಿಗೆಯು ಶೇ.9.7 ಮತ್ತು ಶೇ.10.2 ರಷ್ಟಿದೆ. ಕಾರ್ಯಾಚರಣೆಯ ಲಾಭವು ಮಾರಾಟದ ಶೇ. 21ರಷ್ಟಿತ್ತು.

ಕಳೆದ ತಿಂಗಳು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಮತ್ತು ನೆಸ್ಲೆ ಚಹಾ, ಕಾಫಿ, ಹಾಲು ಮತ್ತು ನೂಡಲ್ಸ್‌ನಂತಹ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲಾಗಿತ್ತು. HUL ಬ್ರೂ ಕಾಫಿ ಪುಡಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಹೆಚ್ಚಿಸಲಾಗಿತ್ತು. ಬ್ರೂ ಗೋಲ್ಡ್ ಕಾಫಿ ಜಾರ್‌ಗಳನ್ನು ಶೇ. 3ರಿಂದ 4ರಷ್ಟು ದುಬಾರಿಯಾಗಿ ಮಾಡಲಾಗಿತ್ತು. ಬ್ರೂ ಇನ್‌ಸ್ಟಂಟ್ ಕಾಫಿ ಪೌಚ್‌ಗಳ ಬೆಲೆ ಶೇ. 3ರಿಂದ 6.66ರಷ್ಟು ಹೆಚ್ಚಾಗಿತ್ತು. ಅದೇ ಸಮಯದಲ್ಲಿ, ತಾಜ್ ಮಹಲ್ ಚಹಾದ ಬೆಲೆ ಕೂಡ ಶೇ. 3.7ರಿಂದ 5.8ರಷ್ಟು ಜಿಗಿದಿತ್ತು.

ಇದನ್ನೂ ಓದಿ: Maggi ಇನ್ನು ದುಬಾರಿ; HUL, ನೆಸ್ಲೆಯಿಂದ ಮ್ಯಾಗಿ, ಕಾಫಿ, ಟೀ ಬೆಲೆ ಹೆಚ್ಚಳ

viral news: ವಿಶ್ವದ ಅಗ್ಗದ ಆಮ್ಲೆಟ್ ಮ್ಯಾಗಿಗಿಂತ ಕಡಿಮೆ ಸಮಯದಲ್ಲಿ ತಯಾರಾಗುತ್ತೆ! ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್