AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದಾಗ 20 %, ಈಗ 40% ಸರ್ಕಾರ ಇದೆ, ದೆಹಲಿಯಲ್ಲಿ 0% ಸರ್ಕಾರವಿದೆ: ಆಯ್ಕೆ ನಿಮ್ಮದು ಎಂದ ಅರವಿಂದ್ ಕೇಜ್ರಿವಾಲ್

Arvind kejriwal: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 20 % ಸರ್ಕಾರ ಇತ್ತು. ಈಗ 40% ಸರ್ಕಾರ ಇದೆ ಇಲ್ಲಿ. ಅದೇ ದೆಹಲಿಯಲ್ಲಿ 0% ಸರ್ಕಾರ ಇದೆ ಎಂದು ಕೇಜ್ರಿವಾಲ್ ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳಿದರು. ಕರ್ನಾಟಕದಲ್ಲಿ ಆಪ್ ಅಧಿಕಾರಕ್ಕೆ ಬರ್ಬೇಕು. ನಾವು ಇಲ್ಲಿ ಸರ್ಕಾರ ರಚನೆ ಮಾಡೋಣ. 20%, 40% ದಂಧೆಗಳಿಗೆ ಕಡಿವಾಣ ಹಾಕೋಣ ಎಂದು ಕರೆ ನೀಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದಾಗ 20 %, ಈಗ 40% ಸರ್ಕಾರ ಇದೆ, ದೆಹಲಿಯಲ್ಲಿ 0% ಸರ್ಕಾರವಿದೆ: ಆಯ್ಕೆ ನಿಮ್ಮದು ಎಂದ ಅರವಿಂದ್ ಕೇಜ್ರಿವಾಲ್
ಕರ್ನಾಟಕದಲ್ಲಿ ಕಾಂಗ್ರೆಸ್ ಇದ್ದಾಗ 20 %, ಈಗ 40% ಸರ್ಕಾರ ಇದೆ; ದೆಹಲಿಯಲ್ಲಿ 0% ಸರ್ಕಾರ ಇದೆ -ಅರವಿಂದ್ ಕೇಜ್ರಿವಾಲ್
TV9 Web
| Edited By: |

Updated on:Apr 21, 2022 | 4:03 PM

Share

ಬೆಂಗಳೂರು: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಬೆಂಗಳೂರು ಸಮಾವೇಶದಲ್ಲಿ ಪಾಲ್ಗೊಂಡು, ಭಾಷಣ ಮಾಡಿದ್ದಾರೆ. ಕನ್ನಡ ಬರಲ್ಲ, ಕ್ಷಮಿಸಿ‌ ಹಿಂದಿಯಲ್ಲಿ ಮಾತಾಡ್ತೀನಿ ಎಂದು ಮಾತು ಆರಂಭಿಸಿದ ಕೇಜ್ರಿವಾಲ್ ಅವರು ಎರಡು ದಿನಗಳಿಂದ ನನಗೆ ತೀವ್ರ ಹಲ್ಲು ನೋವು. ನಾನು ಪೇನ್ ಕಿಲ್ಲರ್ ಸೇವಿಸಿ ಇಲ್ಲಿಗೆ ಬಂದಿದ್ದೇನೆ. ಆಪ್ ಪಕ್ಷಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಮನುಷ್ಯ ಅಹಂಕಾರ ಪಡಬಾರದು. ರಾವಣನೂ ಅಹಂಕಾರ‌ ಮೆರೆದಿದ್ದ. ಸೀತೆ ಅಪಹರಣ ವೇಳೆ ರಾಮನ ಜತೆ ಸಂಘರ್ಷ ಬೇಡ ಅಂದ ವಿಭೀಷಣ. ರಾವಣ ಒಪ್ಪಲಿಲ್ಲ, ಅಂತ್ಯ ಏನಾಯಿತು ಅಂತಾ ಎಲ್ರಿಗೂ ಗೊತ್ತಿದೆ. ಇದೇ ಥರ ಕೇಂದ್ರಕ್ಕೂ ಅಹಂಕಾರ ಇತ್ತು. ಮೂರು ರೈತ ವಿರೋಧಿ ಕಾನೂನು‌ ತಂದ್ರು. ಎಷ್ಟೇ ಹೇಳಿದ್ರೂ‌ ಕೇಂದ್ರ ಕೇಳಲಿಲ್ಲ. ರೈತ ವಿರೋಧಿ ನಡೆ ಬೇಡ ಅಂದ್ರೂ‌ ಕೇಂದ್ರ‌ ಕೇಳಿರಲಿಲ್ಲ. ಕೊನೆಗೂ 13 ತಿಂಗಳ ಬಳಿಕ‌ ಕೇಂದ್ರದ ಅಹಂಕಾರ ಭಂಗವಾಯ್ತು. ಮೂರೂ ಕಾಯ್ದೆಗಳನ್ನು ಕೇಂದ್ರ ವಾಪಸ್ ಪಡೀತು ಎಂದು ವಿಶ್ಲೇಷಿಸಿದರು.

ಸ್ವಾತಂತ್ರ್ಯ ಬಂದಾಗಿಂದಲೂ ರೈತರ ಸ್ಥಿತಿ ಉತ್ತಮ ಆಗಿಲ್ಲ. ನಾನು ಅಣ್ಣಾ ಹಜಾರೆ ಜೊತೆ ಹೋರಾಟ ಮಾಡ್ಕೊಂಡಿದ್ದೆ. ಭ್ರಷ್ಟಾಚಾರ ‌ತೊಲಗಿಸಿ ಅಂತಾ ಅಣ್ಣಾಗೆ ಹೇಳಿದೆ ನಾನು. ಆಗ ಅವ್ರು ನೀನು ಚುನಾವಣೆ ಗೆದ್ದು ಭ್ರಷ್ಟಾಚಾರ ಓಡಿಸು ಅಂದ್ರು, ನಾನು, ಸಾಮಾನ್ಯ ಮನುಷ್ಯನನ್ನ ಕೆಣಕಬೇಡಿ ಅಂದೆ. ಅದರ ಪರಿಣಾಮ ಮೊದಲು ದೆಹಲಿಯಲ್ಲಿ ನಂತರ ಪಂಜಾಬ್ ನಲ್ಲಿ ಆಪ್ ಸರ್ಕಾರ ರಚಿಸ್ತು. ಈಗ ನಮ್ಮ‌ ಆದ್ಯತೆ ಕರ್ನಾಟಕ ಎಂದು ಪಕ್ಷದ ಮುಂದಿನ ಗುರಿಯನ್ನು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 20 % ಸರ್ಕಾರ ಇತ್ತು. ಈಗ 40% ಸರ್ಕಾರ ಇದೆ ಇಲ್ಲಿ. ಅದೇ ದೆಹಲಿಯಲ್ಲಿ 0% ಸರ್ಕಾರ ಇದೆ ಎಂದು ಕೇಜ್ರಿವಾಲ್ ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳಿದರು. ಕರ್ನಾಟಕದಲ್ಲಿ ಆಪ್ ಅಧಿಕಾರಕ್ಕೆ ಬರ್ಬೇಕು. ನಾವು ಇಲ್ಲಿ ಸರ್ಕಾರ ರಚನೆ ಮಾಡೋಣ. 20%, 40% ದಂಧೆಗಳಿಗೆ ಕಡಿವಾಣ ಹಾಕೋಣ. ಇಡೀ ದೇಶದಲ್ಲಿ ಸರ್ಕಾರಿ‌ ಶಾಲೆಗಳ ಸ್ಥಿತಿ ಚೆನ್ನಾಗಿಲ್ಲ. ದೆಹಲಿಯಲ್ಲಿ ಮಾತ್ರ ಉತ್ತಮ ಸರ್ಕಾರಿ ಶಾಲೆಗಳಿವೆ. ಇಂಥ ಸರ್ಕಾರಿ ಶಾಲೆಗಳನ್ನು ಕರ್ನಾಟಕದಲ್ಲೂ ಮಾಡೋಣ. ದೆಹಲಿಯಲ್ಲಿ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ಸೇವೆಗಳನ್ನ ಕೊಡ್ತಿದ್ದೇವೆ. ಆಸ್ಪತ್ರೆಯಲ್ಲಿ ಹೈಟೆಕ್ ಸೇವೆ ಸಿಗ್ತಿದೆ. ವಿದ್ಯುತ್ ದೆಹಲಿಯಲ್ಲಿ ಉಚಿತವಾಗಿದೆ. ಸರ್ಕಾರಿ ಶಾಲೆ, ವಿದ್ಯುತ್, ಆರೋಗ್ಯ, ನೀರು, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿದೆ. ಇದು ಒಂದು ಪ್ರಾಮಾಣಿಕ ರಾಜಕೀಯ ಪಕ್ಷ ಆಪ್ ನಿಂದ ಸಾಧ್ಯವಾಗಿದೆ ಎಂದು ಆಪ್ ನಾಯಕ ಕೇಜ್ರಿವಾಲ್ ವಿವರಿಸಿದರು.

ಲುಚ್ಚಾಗಳು, ಗೂಂಡಾಗಳು, ಭ್ರಷ್ಟಾಚಾರಿಗಳು, ಬಲಾತ್ಕಾರಿಗಳು ಬಿಜೆಪಿ ಸೇರ್ತಿದ್ದಾರೆ: ಯುಪಿಯ ಲಖೀಂಪುರದಲ್ಲಿ ರೈತರ ಮೇಲೆ ಸಚಿವರೊಬ್ಬರ ಮಗ ವಾಹನ ಹರಿಸಿದ. ಆ ಯುವಕನಿಗೆ ಬಹುಮಾನ ಕೊಡಲಾಯ್ತು, ಆತನ ತಂದೆ ಮಂತ್ರಿ. ಇಂಥ ರಾಜ್ಯ ಹೇಗೆ ಮುಂದೆ ಬರಲು ಸಾಧ್ಯ? ಲುಚ್ಚಾಗಳು, ಗೂಂಡಾಗಳು, ಭ್ರಷ್ಟಾಚಾರಿಗಳು, ಬಲಾತ್ಕಾರಿಗಳು ಬಿಜೆಪಿ ಸೇರ್ತಿದ್ದಾರೆ. ಬಲಾತ್ಕಾರಿಗಳ ಪರ ಆ ಪಕ್ಷದವರೆಲ್ಲ ಬೆಂಬಲಕ್ಕೆ ನಿಲ್ತಾರೆ. ಇಡೀ ದೇಶದಲ್ಲಿ ದಂಗೆ ಆಗ್ತಿದೆ, ದೆಹಲಿಯಲ್ಲಿ ಆಗ್ತಿಲ್ಲ. ದಂಗೆ ಮಾಡಿಸ್ತಿರೋರು ಬಿಜೆಪಿಯವ್ರು. ನಿಮಗೆ ಶಾಲೆ, ಆಸ್ಪತ್ರೆ, ವಿದ್ಯುತ್, ನೀರು ಬೇಕು ಅಂದ್ರೆ ನಮಗೆ ಮತ ಕೊಡಿ. ನಿಮಗೆ ಗೂಂಡಾಗಿರಿ‌ ಬೇಕು ಅಂದ್ರೆ ಬಿಜೆಪಿಗೆ ಮತ‌ ಕೊಡಿ. ಇಡೀ ದೇಶದ ರೈತರು ಆಪ್ ಸೇರಿ. ರೈತ ನೆಮ್ಮದಿ ಆಗುವವರೆಗೂ ದೇಶಕ್ಕೆ ನೆಮ್ಮದಿ ಇಲ್ಲ ಎಂದು ಆಪ್ ನಾಯಕ ಕೇಜ್ರಿವಾಲ್ ಹೇಳಿದರು.

Published On - 3:58 pm, Thu, 21 April 22