Sign In

By signing in or creating an account, you agree with Associated Broadcasting Company's Terms & Conditions and Privacy Policy.

GST: ಹೊಸ ವರ್ಷದ ಆರಂಭದಲ್ಲೇ ಶಾಕಿಂಗ್ ನ್ಯೂಸ್: ಜ. 1 ರಿಂದ ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ

ಜನವರಿ 1 ರಿಂದ ದುನಿಯಾ ದುಬಾರಿಯಾಗಲಿದ್ದು, ಇ-ಕಾಮರ್ಸ್ ಸೇವೆಗಳ ಮೇಲಿನ ಜಿಎಸ್ಟಿ ಹೊಸ ವರ್ಷದಿಂದ ಏರಿಕೆಯಾಗಲಿದೆ. ಇದರೊಂದಿಗೆ ದಿನಬಳಕೆ ವಸ್ತುಗಳ ಬೆಲೆ ಕೂಡ ಏರಿಕೆಯಾಗಲಿದೆಯಂತೆ. ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ, ಎಲೆಕ್ಟ್ರಾನಿಕ್, ಆಟೋಮೊಬೈಲ್, ಪಾದರಕ್ಷೆ, ಬಟ್ಟೆಗಳ ಮೇಲೆ ದುಬಾರಿ ಜಿಎಸ್ಟಿ ಹಾಕಲಾಗುತ್ತದೆ.

GST: ಹೊಸ ವರ್ಷದ ಆರಂಭದಲ್ಲೇ ಶಾಕಿಂಗ್ ನ್ಯೂಸ್: ಜ. 1 ರಿಂದ ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ
GST New Law
Follow us
TV9 Web
| Updated By: Digi Tech Desk

Updated on:Dec 31, 2021 | 10:46 AM

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ (Price Hike) ಕಂಗಾಲಾಗಿರುವ ಜನಸಾಮಾನ್ಯರಿಗೆ  ಮತ್ತೊಂದು ಆಘಾತ ಎದುರಾಗಿದೆ. ಹೊಸ ವರ್ಷದಿಂದ (New Year) ಜೀವನ ಮತ್ತಷ್ಟು ದುಬಾರಿಯಾಗಲಿದೆ. ಜನವರಿ 1 ರಿಂದ ದಿನಬಳಕೆ ವಸ್ತುಗಳು, ಎಲೆಕ್ಟ್ರಾನಿಕ್‌, ಆಟೋಮೊಬೈಲ್‌ ಸರಕುಗಳು ದುಬಾರಿಯಾಗಲಿವೆ ಎಂಬ ಸುದ್ದಿಯ ಬೆನ್ನಲ್ಲೇ ಇನ್ನಷ್ಟುಸೇವೆಗಳು ಹಾಗೂ ಸರಕುಗಳ ಬೆಲೆ ಹೆಚ್ಚಳವಾಗಲಿದೆ. ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯು ಜನವರಿ 1, 2022ರಿಂದ ಪ್ರಮುಖ ಬದಲಾವಣೆಗಳಿಗೆ ಒಳಗಾಗಲಿದೆ. ಇವುಗಳಲ್ಲಿ ರೆಸ್ಟೋರೆಂಟ್ ವಲಯದಲ್ಲಿ ಒದಗಿಸಲಾದ ಸಾರಿಗೆ ಮತ್ತು ಸೇವೆಗಳ ಮೇಲೆ ಇ-ಕಾಮರ್ಸ್ ಸೇವಾ ಆಪರೇಟರ್(E-commerce service operator)ಗಳ ಮೇಲಿನ ತೆರಿಗೆ ಹೊಣೆಗಾರಿಕೆಯೂ ಸೇರಿದೆ. ಆ್ಯಪ್ ಮೂಲಕ ಆಟೋ, ಕಾರ್, ಬುಕಿಂಗ್ ಮಾಡಲು ಶೇಕಡ 5 ರಷ್ಟು ಜಿಎಸ್‌ಟಿ ಪಾವತಿಸಬೇಕಿದೆ. ಪಾದರಕ್ಷೆಗಳ ಮೇಲೆ ಶೇ. 12 ರಷ್ಟು, ರೆಡಿಮೇಡ್ ಬಟ್ಟೆ ಸೇರಿ ಎಲ್ಲಾ ಮಾದರಿ ಬಟ್ಟೆಗಳ ಮೇಲೆ ಶೇ. 12 ರಷ್ಟು ಜಿಎಸ್‌ಟಿ ಕಟ್ಟಬೇಕಿದೆ. ಹತ್ತಿಬಟ್ಟೆ ಬಿಟ್ಟು ಉಳಿದ ಬಟ್ಟೆಗಳ ಬೆಲೆ ಏರಿಕೆ ಆಗಲಿದೆ.

ಹೌದು, ಜನವರಿ ಒಂದರಿಂದ ದುನಿಯಾ ದುಬಾರಿಯಾಗಲಿದ್ದು, ಇ-ಕಾಮರ್ಸ್ ಸೇವೆಗಳ ಮೇಲಿನ ಜಿಎಸ್‌ಟಿ ಹೊಸ ವರ್ಷದಿಂದ ಏರಿಕೆಯಾಗಲಿದೆ. ಇದರೊಂದಿಗೆ ದಿನಬಳಕೆ ವಸ್ತುಗಳ ಬೆಲೆ ಕೂಡ ಏರಿಕೆಯಾಗಲಿದೆಯಂತೆ. ಓಲಾ, ಉಬರ್, ಸ್ವಿಗ್ಗಿ, ಜೊಮ್ಯಾಟೋ ಸೇವೆ, ಎಲೆಕ್ಟ್ರಾನಿಕ್, ಆಟೋಮೊಬೈಲ್, ಪಾದರಕ್ಷೆ, ಬಟ್ಟೆಗಳ ಮೇಲೆ ದುಬಾರಿ ಜಿಎಸ್‌ಟಿ ಹಾಕಲಾಗುತ್ತದೆ. ಆಟೋ ರಿಕ್ಷಾ ಚಾಲಕರಿಗೆ ಮ್ಯಾನುಯಲ್ ಮೋಡ್ ಅಥವಾ ಆಫ್ಲೈನ್​​ನಲ್ಲಿ ಸಾರಿಗೆ ಸೇವೆಗಳಿಂದ ವಿನಾಯಿತಿ ನೀಡುವುದನ್ನ ಮುಂದುವರಿಸಲಾಗುತ್ತದೆ. ಆದರೆ, ಈ ಸೇವೆಗಳನ್ನ ಇ-ಕಾಮರ್ಸ್ ಪ್ಲಾಟ್ ಫಾರ್ಮ್​​ನಿಂದ ನೀಡಿದಾಗ, ಅವರಿಗೆ ಹೊಸ ವರ್ಷದಿಂದ ಶೇಕಡಾ 5ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಇ-ಕಾಮರ್ಸ್‌ ಆಪರೇಟರ್‌ಗಳಾದ ಸ್ವಿಗ್ಗಿ, ಜೊಮ್ಯಾಟೋದಂಥ ತಿಂಡಿ-ತಿನಿಸು ಪೂರೈಕೆ ಸೇವೆಗಳ ಮೇಲೆ ಕೂಡ ಜಿಎಸ್‌ಟಿ ಹಾಕಲಾಗುತ್ತದೆ. ಆದರೆ ಇದು ಗ್ರಾಹಕರಿಗೆ ಹೊರೆ ಆಗುವುದಿಲ್ಲ. ಏಕೆಂದರೆ ತಿಂಡಿ-ತಿನಿಸಿಗೆ ಗ್ರಾಹಕರಿಂದ ಹೋಟೆಲ್‌ಗಳು ಜಿಎಸ್‌ಟಿ ಸಂಗ್ರಹಿಸುತ್ತಿದ್ದವು. ಇದರ ಬದಲು ಇನ್ನು ಸ್ವಿಗ್ವಿ, ಝೊಮ್ಯಾಟೋಗಳು ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಆದರೆ ಜಿಎಸ್‌ಟಿ ನೆಪದಲ್ಲಿ ಈ ಕಂಪನಿಗಳು ಶುಲ್ಕದ ನೆಪದಲ್ಲಿ ಮತ್ತಷ್ಟು ವಸೂಲಿ ಮಾಡಬಹುದು.

ತೆರಿಗೆ ಎಷ್ಟು ಹೆಚ್ಚಳ?:

  • ಆ್ಯಪ್‌ ಮೂಲಕ ಆಟೋ ಕಾರು ಬುಕಿಂಗ್‌ ಶೇ. 5
  • ಸ್ವಿಗ್ಗಿ, ಜೊಮ್ಯಾಟೋದಲ್ಲಿ ಆಹಾರ ಬುಕಿಂಗ್‌ ಶೇ. 5
  • ಎಲ್ಲಾ ಮಾದರಿಯ ಪಾದರಕ್ಷೆಗಳು ಶೇ. 12
  • ರೆಡಿಮೇಡ್‌ ಸೇರಿ ಎಲ್ಲಾ ಬಟ್ಟೆಗಳು (ಕಾಟನ್‌ ಬಟ್ಟೆಬಿಟ್ಟು) ಶೇ. 12

ತೆರಿಗೆ ವಂಚನೆ ತಡೆಯಲು ಹೊಸ ವರ್ಷದಲ್ಲಿ ಇನ್ನೂ ಕೆಲವು ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಜಿಎಸ್ಟಿ ಮರುಪಾವತಿ ಪಡೆಯಲು ಕಡ್ಡಾಯ ಆಧಾರ್ ದೃಢೀಕರಣ, ತೆರಿಗೆ ಪಾವತಿಸದ ವ್ಯವಹಾರಗಳ ಜಿಎಸ್ಟಿಆರ್-1 ಫೈಲಿಂಗ್ ಸೌಲಭ್ಯವನ್ನ ನಿಷೇಧಿಸುವುದು ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

Petrol Rate: ಕಚ್ಚಾ ತೈಲ ಬೆಲೆಯಲ್ಲಿ ಮುಂದುವರಿದ ಏರಿಳಿತ; ನಿಮ್ಮೂರಿನಲ್ಲಿ ಇಂಧನದ ಬೆಲೆ ಎಷ್ಟಿದೆ ಪರಿಶೀಲಿಸಿ

(GST regime will see a host of tax rate and procedural changes from January 1 2022)

Published On - 11:24 am, Mon, 27 December 21

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ