ಮೇ 9ರೊಳಗೆ ಮಸೀದಿ ಮೇಲಿನ ಮೈಕ್ ಕಿರಿಕಿರಿ ನಿಲ್ಲಬೇಕು. ಇಲ್ಲದಿದ್ದರೆ ನಾವು ಭಾರಿ ಶಬ್ದ ಬರುವ ಮೈಕ್‌ಗಳನ್ನ ಹಾಕುತ್ತೇವೆ -ಪ್ರಮೋದ್ ಮುತಾಲಿಕ್
ಮೇ 9ರೊಳಗೆ ಮಸೀದಿ ಮೇಲಿನ ಮೈಕ್ ಕಿರಿಕಿರಿ ನಿಲ್ಲಬೇಕು. ಇಲ್ಲದಿದ್ದರೆ ನಾವು ಭಾರಿ ಶಬ್ದ ಬರುವ ಮೈಕ್‌ಗಳನ್ನ ಹಾಕುತ್ತೇವೆ ಎಂದು ಬೆಂಗಳೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರು: ಮೇ 9ರೊಳಗೆ ಮಸೀದಿ ಮೇಲಿನ ಮೈಕ್ ಕಿರಿಕಿರಿ ನಿಲ್ಲಬೇಕು. ಇಲ್ಲದಿದ್ದರೆ ನಾವು ಭಾರಿ ಶಬ್ದ ಬರುವ ಮೈಕ್‌ಗಳನ್ನ ಹಾಕುತ್ತೇವೆ ಎಂದು ಬೆಂಗಳೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ. ಎಂಎನ್ಎಸ್ ನಿಂದ ಮಹಾ ಆರತಿಗೆ ಕರೆ ಹಿನ್ನಲೆ ಈ ಬಗ್ಗೆ ಮಾತನಾಡಿರುವ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮೇ 3 ರವರೆಗೆ ರಾಜ್ ಠಾಕ್ರೆ ಅವರಿಗಾಗಿ ಕಾಯ್ತಿವಿ. ನಂತರದಲ್ಲಿ ಭಾರತಿ ಭಜನೆ, ಹನುಮಾನ್ ಚಾಲಿಸ ಪಠನೆ ಮಾಡ್ತಿವಿ. ಮೇ 9ರಿಂದ ನಾವು ದೇಗುಲಗಳಲ್ಲಿ ಭಜನೆ ಆರಂಭಿಸುತ್ತೇವೆ. ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೆ ಮೊದಲ ಭಜನೆ ಆರಂಭವಾಗುತ್ತದೆ. ಪ್ರತಿನಿತ್ಯ ಐದು ಬಾರಿ ಭಜನೆ ಮಾಡಲು ನಿರ್ಧಾರ ಮಾಡಿದ್ದೇವೆ. ಮೊದಲು ಮಸೀದಿ ಮೇಲಿನ ಮೈಕ್ ಕಿರಿಕಿರಿ ನಿಲ್ಲಿಸಲು ಮನವಿ ಮಾಡ್ತೀವಿ. ಆ ಕಿರಿಕಿರಿ ತಪ್ಪದಿದ್ದರೆ ನಾವು ಕೂಡ ಮೈಕ್ ಅಳವಡಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ವಾರ್ನ್ ಮಾಡಿದ್ರು.
ಸರ್ಕಾರದಿಂದ ನೋಟಿಸ್ ಕೊಡುತ್ತಿರುವುದು ಸಾಕಷ್ಟು ಕಿರಿಕಿರಿ ಆಗ್ತಾಯಿದೆ. ಭಜನೆಯಲ್ಲಿ ಎಲ್ಲಾ ಹಿಂದು ಸಂಘಟನೆ, ಮಠಾಧಿಪತಿಗಳು ಭಾಗಿಯಾಗಲಿದ್ದಾರೆ. ಈ ವಿಚಾರವಾಗಿ ನೂರು ದೇವಸ್ಥಾನ, 50 ಮಠಾಧಿಪತಿಗಳನ್ನು ಮಾತನಾಡಿದ್ದೇವೆ. ಮತ್ತಷ್ಟು ದೇವಸ್ಥಾನಗಳಲ್ಲಿ ರಿಕ್ವೆಸ್ಟ್ ಮಾಡಿಕೊಳ್ಳಲಾಗುವುದು. ಸ್ಪೀಕರ್, ಮೈಕ್ ಬಳಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಇದೆ. ಆದನ್ನು ಉಲ್ಲಂಘಿಸಿದ್ದಾರೆ. ಶಬ್ಧದ ಕಿರಿಕಿರಿ ಅಷ್ಟೇ ಅಲ್ಲ ಬೆಳಗಿನ ಜಾವ 5 ಗಂಟೆಗೆ ಹಾಕುವುದು ಕಾನೂನು ಬಾಹಿರ. ಅವರಿಂದ ನಿಶಬ್ಧವಲಯದಲ್ಲೂ ಮೈಕ್ ಗಳನ್ನು ಹಾಕಿ ಶಬ್ಧ ಮಾಲಿನ್ಯ ಆಗುತ್ತಿದೆ. ನಿರಂತರ 15 ದಿನಕ್ಕಿಂತ ಹೆಚ್ಚು ದಿನ ಮೈಕ್ ಬಳಸುವಂತೆ ಅನುಮತಿ ಇಲ್ಲ. ಆದ್ರೆ ಇವರು ವರ್ಷದ 365 ದಿನವೂ ಮೈಕ್ ಹಾಕಿಕೊಂಡು ನಮಾಜ್ ಮಾಡಿ ಕಿರಿಕಿರಿ ಮಾಡುತಿದ್ದಾರೆ. ಪ್ರಾರ್ಥನೆಗೆ ವಿರೋಧ ಇಲ್ಲ. ಆದ್ರೆ ಇವರ ಮೈಕ್ ನಿಂದ ಶಬ್ಧ ಮಾಲಿನ್ಯ ಕಂಟ್ರೋಲ್ ಆಗಲಿಲ್ಲ ಅಂದ್ರೆ, ನಮ್ಮದೂ ಶುರುವಾಗತ್ತೆ. ಸರ್ಕಾರ ಕಣ್ಣಮುಚ್ಚಾಲೆ ಆಡಬೇಡಿ. ನೋಟಿಸ್ ಕೊಟ್ಟಿದ್ದೇವೆಂದು ನಾಟಕ ಆಡಬೇಡಿ. ಅಕ್ರಮ ಸ್ಪೀಕರ್ ಗಳ ತೆರವಿಗೆ ಆಗ್ರಹಿಸುತ್ತೇವೆ. ಇಲ್ಲವೆಂದಲ್ಲಿ ನಮ್ಮ ಹೋರಾಟ ಹೆಚ್ಚಾಗತ್ತೆ ಎಂದರು.
ಆಜಾನ್ ಕೂಗುವವರೆಗೆ ಹನುಮಾನ್ ಚಾಲೀಸಾ ಪಠಿಸಲಾಗುತ್ತೆ ಮೇ 9ರೊಳಗೆ ಮಸೀದಿಗಳ ಮೇಲಿನ ಮೈಕ್ ತೆರವುಗೊಳಿಸಬೇಕು. ಇಲ್ಲದಿದ್ರೆ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಿಸಲಾಗುತ್ತೆ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ ಹೇಳಿಕೆ ನೀಡಿದ್ದಾರೆ. ಎಷ್ಟು ಸಲ ಅಜಾನ್ ಕೂಗ್ತಾರೋ ಅಷ್ಟು ಸಲ ಹನುಮಾನ್ ಚಾಲೀಸ್ ಪಠಿಸಲಾಗುವುದು. ಮಸೀದಿ ಬಳಿಯಿರುವ ದೇವಸ್ಥಾನದಲ್ಲಿ ಪಠಣೆ ಮಾಡಲಾಗುವುದು. ಆಗ ಏನಾದರು ಅನಾಹುತಗಳಾದ್ರೆ ಅದಕ್ಕೆ ಸರ್ಕಾರವೇ ಹೊಣೆ. ಸರ್ಕಾರ ಜಾಣ ಮೌನವನ್ನು ಬಿಡಬೇಕು. ಕೂಡಲೆ ಸರ್ಕಾರ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸರ್ಕಾರ ಮುಸ್ಲಿಂ ತುಷ್ಟೀಕರಣ ನೀತಿ ಕೈಬಿಡಬೇಕು. ಈ ಹಿಂದೆ ಅನೇಕ ಬಾರಿ ನಾವು ಮೈಕ್ ತೆರವುಗೊಳಿಸಬೇಕು ಅಂತ ಮನವಿ ಮಾಡಿದ್ದೆವು. ಆದ್ರೆ ಇಲ್ಲಿವರಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರದ ವೈಪಲ್ಯತೆಯನ್ನು ಎತ್ತಿ ತೋರಿಸುತ್ತಿದೆ. ಸರ್ಕಾರ ನ್ಯಾಯಾಲಯದ ನಿಂದನೆ ಮಾಡುತ್ತಿದೆ. ಮೇ 9ರ ತನಕ ಸರ್ಕಾರಕ್ಕೆ ಗಡವು ನೀಡುತ್ತಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳದ ಇದ್ದರೆ ಮೇ 9 ಕ್ಕೆ ಹನುಮಾನ ಚಾಲೀಸ್ ಪಠಿಸೋದು ಫಿಕ್ಸ್ ಎಂದು ಸಿದ್ದಲಿಂಗಶ್ರೀ ಹೇಳಿಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಕಲ್ಲಂಗಡಿ ಹಣ್ಣು ಗಲಾಟೆಯಲ್ಲಿ ಪ್ರತಿದೂರು ಇನ್ನು ಮತ್ತೊಂದು ಕಡೆ ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಯ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಸೇನೆ ಕಾರ್ಯಕರ್ತನಿಂದ ಪ್ರತಿದೂರು ದಾಖಲಾಗಿದೆ. ಘಟನೆ ನಡೆದಾಗ ನಬೀಸಾಬ್ ಇರಲಿಲ್ಲ. ಕಲ್ಲಂಗಡಿಗೆ ಎಂಜಲು ಉಗುಳಿ ಮಾರಾಟ ಮಾಡುತ್ತಿದ್ದ. ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಚಾಕು ತೋರಿಸಿ ಹೆದರಿಸಿದ್ದ. ಕಲ್ಲಂಗಡಿ ಕೊಯ್ದಂತೆ ನಿಮ್ಮನ್ನು ಕೊಯ್ಯುತ್ತೇನೆ ಎಂದು ಹೇಳಿದ್ದ. ಈ ವೇಳೆ ಜೊತೆಗಿದ್ದ ಮೈಲಾರಪ್ಪನನ್ನು ಆ ವ್ಯಕ್ತಿ ನೂಕಿದ್ದನು. ಆಗ ಮೈಲಾರಪ್ಪ ಕಲ್ಲಂಗಡಿ ಇಟ್ಟಿದ್ದ ತಳ್ಳುಗಾಡಿ ಮೇಲೆ ಬಿದ್ದಿದ್ದ. ಇದೆಲ್ಲಾ ಆದ ಬಳಿಕ ನಬೀಸಾಬ್ ನಮ್ಮ ವಿರುದ್ಧ ದೂರು ನೀಡಿದ್ದಾನೆ. ಆದರೆ ನಮ್ಮ ಮೇಲೆ ದೌರ್ಜನ್ಯ ಮಾಡಿದ ವ್ಯಕ್ತಿಯೇ ಬೇರೆ ಇದ್ದಾನೆ ಎಂದು ಏಪ್ರಿಲ್ 9ರಂದು ನಡೆದ ಘಟನೆ ಬಗ್ಗೆ ಪ್ರಸ್ತಾಪಿಸಿ ದೂರು ದಾಖಲಾಗಿದೆ.
ಕಲ್ಲಂಗಡಿ ಗಲಾಟೆಯಲ್ಲಿ ಬಂಧಿತನಾಗಿದ್ದ ಮಹಾನಿಂಗಪ್ಪ ಧಾರವಾಡ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ಅಂಗಡಿಗಳ ತೆರವು ಗಲಾಟೆ ವೇಳೆ ಮಹಾನಿಂಗಪ್ಪ ಬಂಧನವಾಗಿತ್ತು. ಇದೀಗ ಮಹಾನಿಂಗಪ್ಪ ಐಗಳಿಯಿಂದ ಪ್ರತಿದೂರು ದಾಖಲಾಗಿದೆ.
ಇದನ್ನೂ ಓದಿ: ‘RRR’ ಚಿತ್ರದ ಹಿಂದಿ ಕಲೆಕ್ಷನ್ ಹಿಂದಿಕ್ಕಲು ‘ಕೆಜಿಎಫ್ 2’ ಸಿನಿಮಾಗೆ ಇನ್ನೆಷ್ಟು ಕೋಟಿ ರೂ. ಬಾಕಿ? ಇಲ್ಲಿದೆ ಲೆಕ್ಕ
Published On - 12:56 pm, Wed, 20 April 22