ಆರ್ಮಿಯಲ್ಲಿ ಹವಾಲ್ದಾರನಾಗಿರುವ ಬಾಗಲಕೋಟೆ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ

ಮಂಗೋಲಿಯಾದಲ್ಲಿ‌ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶೀಪ್ ನಲ್ಲಿ ಅರ್ಜುನ್ ಹಲಕುರ್ಕಿ ಕಂಚಿನ‌ ಪದಕ ಗೆದ್ದು ದೇಶದ ಗಮನ ಸೆಳೆದಿದ್ದಾರೆ. ದಾವಬಂದಿ ಮುಖಾ ವಿರುದ್ಧ 10-7 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಆರ್ಮಿಯಲ್ಲಿ ಹವಾಲ್ದಾರನಾಗಿರುವ ಬಾಗಲಕೋಟೆ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ
ಅರ್ಜುನ್ ಹಲಕುರ್ಕಿ
Follow us
TV9 Web
| Updated By: ಆಯೇಷಾ ಬಾನು

Updated on: Apr 20, 2022 | 3:48 PM

ದಾವಣಗೆರೆ: ಬಾಗಲಕೋಟೆ ಮೂಲದ ಅರ್ಜುನ್ ಹಲಕುರ್ಕಿ ಎಂಬ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದಿದ್ದಾರೆ. ಮಂಗೋಲಿಯಾದಲ್ಲಿ ನಡೆದ 55 ಕೆಜಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಹೆಮ್ಮೆಯ ಕನ್ನಡಿಗರಾಗಿದ್ದಾರೆ. ದಾವಬಂದಿ ಮುಖಾ ವಿರುದ್ಧ 10-7 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅರ್ಜುನ್ ಹಲಕುರ್ಕಿ ಸಾಧನೆಗೆ ತರಬೇತುದಾರ ಶಿವಾನಂದ ಹರ್ಷ ವ್ಯಕ್ತಪಡಿಸಿದ್ದಾರೆ.

ಅರ್ಜುನ್ ಹಲಕುರ್ಕಿ ಅಪ್ಪಟ ಹಳ್ಳಿಯ ಹುಡುಗ. ಉತ್ತರ ಕರ್ನಾಟಕದ ಕೃಷ್ಣೆಯ ಜಲಾನಯನ ಪ್ರದೇಶದಲ್ಲಿ ಕಸರತ್ತು ಮಾಡಿ ಈಗ ದೇಶದ ಗಮನ ಸೆಳೆಯುತ್ತಿದ್ದಾರೆ. ಮೂಲತ ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿ ಗ್ರಾಮದ ಅರ್ಜುನ್, ಏಕಲವ್ಯನಂತೆ ನಿರಂತರ ಪರಿಶ್ರಮ ವಹಿಸಿ ಸುತ್ತ ಹಳ್ಳಿಗಳಲ್ಲಿ ಹತ್ತಾರು ಪೈಲ್ವಾನ್ ರನ್ನ ಸೋಲಿಸಿ ಹೆಸರು ಮಾಡಿದ್ದರು. ಇಂತಹ ಯುವಕನಿಗೆ ಇನ್ನಷ್ಟು ಕೌಶಲ್ಯ ಬೇಕಾಗಿತ್ತು. ಅದಕ್ಕೆ ವೇದಿಕೆ ಆಗಿದ್ದು ದಾವಣಗೆರೆ ಕ್ರೀಡಾ ಹಾಸ್ಟೆಲ್. ಇಲ್ಲಿನ ಅಂತರಾಷ್ಟ್ರೀಯ ಕುಸ್ತಿ ತರಬೇತುದಾರ ಶಿವಾನಂದ ಅವರ ಬಳಿ ಸತತ ಎಂಟು ವರ್ಷಗಳ ಕಾಲ ತರಬೇತಿ ಪಡೆದ ಅರ್ಜುನ್ ಈಗ ದೇಶ – ವಿದೇಶಗಳಲ್ಲಿ ಹೆಸರು ಗಳಿಸುತ್ತಿದ್ದಾರೆ. ಈ ಹಿಂದೆ ಜ್ಯೂನಿಯರ್ ವಿಭಾಗದಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್ ಶೀಪ್ ನಲ್ಲಿ ಸಹ ಕಂಚಿನ‌ ಪದಕ ಗೆದ್ದು ಸುದ್ದಿ ಆಗಿದ್ದರು.

ಸೀನಿಯರ್ ವಿಭಾಗದಲ್ಲೂ ಕಂಚಿನ ಪದಕ ಗೆದ್ದ ಅರ್ಜುನ ಮಂಗೋಲಿಯಾದಲ್ಲಿ‌ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶೀಪ್ ನಲ್ಲಿ ಅರ್ಜುನ್ ಹಲಕುರ್ಕಿ ಕಂಚಿನ‌ ಪದಕ ಗೆದ್ದು ದೇಶದ ಗಮನ ಸೆಳೆದಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ದಾವಬಂದಿ ಮುಖಾ ಅವರ ವಿರುದ್ಧ 10-07 ರಿಂದ ಗೆದ್ದು ಅರ್ಜುನ ಬರುವ ದಿನಗಳಲ್ಲಿ ಓಲಂಪಿಕ್ ನಲ್ಲಿ ದೇಶವನ್ನ ಪ್ರತಿನಿಧಿವ ತಂಡದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರ್ಮಿಯಲ್ಲಿ ನೇಮಕ ಆಗಿರುವ ಅರ್ಜುನ ಸದ್ಯ ಹವಾಲ್ದಾರ ಹುದ್ದೆಯಲ್ಲಿದ್ದಾರೆ‌. ದಿನಕ್ಕೆ ಕನಿಷ್ಟ ಹತ್ತು ಗಂಟೆಗಳ ಕಾಲ ಕಸರತ್ತು ನಡೆಸುವ ಅರ್ಜುನ ದೇಶಕ್ಕೆ ಆಸ್ತಿ ಆಗಲಿದ್ದಾರೆ.

ಇದನ್ನೂ ಓದಿ: ತನ್ನ ಗ್ರಾಮಕ್ಕೆ ರಸ್ತೆ, ನೀರಿನ ಸೌಲಭ್ಯವಿಲ್ಲ ಎಂದ ಯುವಕನಿಗೆ ಪಾವಗಡದ ಕಾಂಗ್ರೆಸ್ ಶಾಸಕರಿಂದ ಕಪಾಳಮೋಕ್ಷ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್