ಬಾಲಿವುಡ್​ಗೆ ಹಾರಿದ ಪವನ್ ಒಡೆಯರ್; ಹೊಸ ಅಪ್​​ಡೇಟ್ ನೀಡಿದ ‘ರೇಮೊ’ ನಿರ್ದೇಶಕ

| Updated By: ರಾಜೇಶ್ ದುಗ್ಗುಮನೆ

Updated on: Nov 19, 2022 | 4:00 PM

‘ರೇಮೊ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡುವಾಗ ಅವರು ತಮ್ಮ ಫ್ಯೂಚರ್ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ.

‘ಗೂಗ್ಲಿ’ (Googly Movie) ಅಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಪವನ್ ಒಡೆಯರ್ ಅವರಿಗೆ ಇದೆ. ಈಗ ಅವರು ‘ರೇಮೊ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡುವಾಗ ಅವರು ತಮ್ಮ ಫ್ಯೂಚರ್ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ‘ಹಿಂದಿಗೆ ನಾನು ಕಾಲಿಡುತ್ತಿದ್ದೇನೆ. ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಐದು ದಿನದ ಶೂಟಿಂಗ್ ಮುಗಿದರೆ ಸಿನಿಮಾದ ಚಿತ್ರೀಕರಣ ಮುಗಿಯುತ್ತದೆ’ ಎಂದಿದ್ದಾರೆ ಪವನ್ ಒಡೆಯರ್(Pawan Wadeyar).