‘ಆಶಿಕಾ ಕುಡಿದು ರಂಪಾಟ ಮಾಡಿಲ್ಲ’; ಸ್ಪಷ್ಟನೆ ನೀಡಿದ ನಿರ್ದೇಶಕ ಪವನ್ ಒಡೆಯರ್

‘ಆಶಿಕಾ ಕುಡಿದು ರಂಪಾಟ ಮಾಡಿಲ್ಲ’; ಸ್ಪಷ್ಟನೆ ನೀಡಿದ ನಿರ್ದೇಶಕ ಪವನ್ ಒಡೆಯರ್

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 19, 2022 | 3:19 PM

ನಟ ಆಶಿಕಾ ರಂಗನಾಥ್ ಕುಡಿದು ರಂಪಾಟ ಮಾಡಿದ್ದಾರೆಂದು ಹೇಳಿ ವಿಡಿಯೋ ಒಂದು ವೈರಲ್​ ಆಗಿತ್ತು. ಈ ಕುರಿತಾಗಿ ನಿರ್ದೇಶಕ ಪವನ್​ ಒಡೆಯರ್​ ಸ್ಪಷ್ಟನೆ ನೀಡಿದ್ದಾರೆ.

ನಟಿ ಆಶಿಕಾ ರಂಗನಾಥ್ (Ashika Ranganath) ಕುಡಿದು ರಂಪಾಟ ಮಾಡಿದ್ದಾರೆಂದು ಹೇಳಿ ಶುಕ್ರವಾರ (ನ. 18) ವಿಡಿಯೋ ಒಂದು ವೈರಲ್​ ಆಗಿತ್ತು. ಹೀಗೆ ಎಲ್ಲೆಡೆ ವೈರಲ್​ ಆದ ವಿಡಿಯೋದಿಂದಾಗಿ ಆಶಿಕಾ ರಂಗನಾಥ್​​ ಅಪ್ಸೆಟ್ ಆಗಿದ್ದಾರೆ. ‘ಹೀಗಾದ್ರೆ ನಾನು ಸಿನಿಮಾ ಪ್ರಮೋಶನ್​​ಗೆ ಬರಲ್ಲ’ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಹರಿದಾಡುತ್ತಿರುವ ವಿಡಿಯೋ ಕುರಿತಾಗಿ ನಿರ್ದೇಶಕ ಪವನ್​ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ‘ಅದು ಆಶಿಕಾ ರಂಗನಾಥ್ ಕುಡಿದು ರಂಪಾಟ ಮಾಡಿರೋದಲ್ಲ. ‘ರೇಮೊ’ ಚಿತ್ರದ ಬಹಳ ಪ್ರಮುಖ ದೃಶ್ಯಕ್ಕಾಗಿ ಅವರು​ ನೈಜವಾಗಿ ಅಭಿನಯಿಸಿರೋದು. ನೀವು ಬೇಕಿದ್ರೆ ವಿಡಿಯೋವನ್ನು ಗಮನಿಸಿದರೆ ಚಿತ್ರೀಕರಣದ ಸಾಮಾಗ್ರಿಗಳನ್ನು ಗಮನಿಸಬಹುದು’ ಎಂದಿದ್ದಾರೆ. ‘ಇದು ನಿಜವಾಗಿಯೂ ಆಶಿಕಾ ರಂಗನಾಥ್ ತಪ್ಪಲ್ಲ, ನಮ್ಮ ಚಿತ್ರದ ಮಾರ್ಕೆಟಿಂಗ್​​ ತಂಡದಿಂದ ತಪ್ಪಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.