ಕಾಂಗ್ರೆಸ್ ನಡೆಸುತ್ತಿರುವ ‘ಪೇ ಸಿಮ್’ ಅಭಿಯಾನ ಮತದಾರರ ಮೇಲೆ ಯಾವುದೇ ಪರಿಣಾಮ ಬೀರದು: ವಿಜಯೇಂದ್ರ
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 2ಜಿ, ಕಾಮನ್ವೆಲ್ತ್ ಗೇಮ್ಸ್ ಮೊದಲಾದವು ಸೇರಿದಂತೆ 12 ಲಕ್ಷ ಕೋಟಿ ರೂ. ಗಳ ಹಗರಣಗಳು ನಡೆದಿದ್ದವು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಒಂದಾದರೂ ಸ್ಕ್ಯಾಮ್ ವರದಿಯಾಗಿದೆಯಾ ಅಂತ ಅವರು ಕೇಳಿದರು.
ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ‘ಪೇ ಸಿಎಮ್’ ಅಭಿಯಾನವನ್ನು ಬಿಜೆಪಿ ಹೆದರಿಕೊಳ್ಳುವಂಥ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಅದನ್ನು ಯಶಸ್ವೀಯಾಗಿ ಎದುರಿಸಲಾಗುತ್ತದೆ ಎಂದು ಬಿಜೆಪಿ ಕರ್ನಾಟಕ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು. ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮನಮೋಹನ್ ಸಿಂಗ್ (Manmohan Singh) ಅವರ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ 2ಜಿ, ಕಾಮನ್ವೆಲ್ತ್ ಗೇಮ್ಸ್ (Commonwealth Games) ಮೊದಲಾದವು ಸೇರಿದಂತೆ 12 ಲಕ್ಷ ಕೋಟಿ ರೂ. ಗಳ ಹಗರಣಗಳು ನಡೆದಿದ್ದವು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ಒಂದಾದರೂ ಸ್ಕ್ಯಾಮ್ ವರದಿಯಾಗಿದೆಯಾ ಅಂತ ಅವರು ಕೇಳಿದರು.