PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಕೆಪಿಎಸ್ಸಿ ಮೇಲೆ ಒಂದಲ್ಲ ಒಂದು ಆರೋಪಗಳು ಬರುತ್ತಲೇ ಇವೆ. ಸರಿಯಾಗಿ ಪ್ರಶ್ನೆ ಪತ್ರಿಕೆ ತಯಾರಿಸುತ್ತಿಲ್ಲ ಎನ್ನುವ ಆರೋಪಗಳು ಪದೇ ಪದೇ ಕೇಳಿಬರುತ್ತಲೇ ಇವೆ. ಇದೀಗ ಪಿಡಿಒ ಪರೀಕ್ಷೆಯಲ್ಲೂ ಸಹ ಕೆಪಿಎಸ್ಇ ಎಡವಟ್ಟು ಮಾಡಿಕೊಂಡಿದೆ.
ರಾಯಚೂರು, (ನವೆಂಬರ್ 17): ಪಿಡಿಒ ಪರೀಕ್ಷೆಯಲ್ಲೂ ಸಹ ಕೆಪಿಎಸ್ಇ ಎಡವಟ್ಟು ಮಾಡಿಕೊಂಡಿದೆ. ಅರ್ಧಂಬರ್ಧ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿದೆ. ಇದರಿಂದ ಪರೀಕ್ಷೆ ಬರೆಯಲು ಬಂದಿರುವ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಸಿಗದೇ ಕಂಗಾಲಾಗಿದ್ದಾರೆ. ಹೌದು….ಪರೀಕ್ಷೆಯಲ್ಲಿ 24ರ ಬದಲು 12 ಪ್ರಶ್ನೆ ಪತ್ರಿಕೆ ಹಂಚಿದ ಆರೋಪ ರಾಯಚೂರಿನಲ್ಲಿ ಕೇಳಿಬಂದಿದೆ. ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದ್ರೆ, ರಾಯಚೂರು ಜಿಲ್ಲೆಯ ಸಿಂಧನೂರಿನ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ 12 ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ಇದರಿಂದ ಅಭ್ಯರ್ಥಿಗಳು ಕೆಪಿಎಸ್ಸಿ ವಿದ್ಯಾರ್ಥಿ ಸಿಡಿದೆದಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಅಭ್ಯರ್ಥಿ ಸಿಂಧನೂರು-ಕುಷ್ಟಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ತಹಶೀಲ್ದಾರ್ ಅರುಣ್ ಕುಮಾರ್ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಅಲ್ಲದೇ ಪರೀಕ್ಷೆ ಬರೆಯುವರು ಬರೆಯಿರಿ. ಇಷ್ಟವಿಲ್ಲದವರು ಹೋಗಿ ಎಂದು ಅವಾಜ್ ಹಾಕಿದ್ದಾರೆ. ಇದರಿಂದ ಕೆರಳಿದ ಅಭ್ಯರ್ಥಿಗಳು ತಹಶೀಲ್ದಾರ್ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.