CM Siddaramaiah: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನೋಡಲು ಅವರ ನಿವಾಸದತ್ತ ಈಗಲೂ ಹರಿದುಬರುತ್ತಿದೆ ಜನಸಾಗರ, ಪೊಲೀಸರು ಸುಸ್ತು!
ಕೆಲವರ ಕೈಯಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಪೋಟೋಗಳಿದ್ದವು. ತಮ್ಮ ಶಾಸಕನನ್ನು ಮಂತ್ರಿ ಮಾಡುವಂತೆ ಒತ್ತಡ ಹಾಕುವುದು ಅವರ ಉದ್ದೇಶವಾಗಿರಬಹುದು.
ಬೆಂಗಳೂರು: ಸಿದ್ದರಾಮಯ್ಯನವರು (Siddaramaiah) ಚುನಾವಣೆ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಅವರು ಮುಖ್ಯಮಂತ್ರಿಯಾದರೂ ಅಭಿಮಾನಿಗಳಿಗೆ ಈಗಲೂ ಅವರನ್ನು ನೋಡುವ ತವಕ. ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ನಿವಾಸದ ಎದುರು, ನೂರಾರು ಅಭಿಮಾನಿಗಳು ನೆರೆದಿದ್ದರು ಮತ್ತು ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಭಿಮಾನಿಗಳ ಕೈಗಳಲ್ಲಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಸಂಸದ ರಾಹುಲ್ ಗಾಂಧಿ ಮೊದಲಾದವರ ಪೋಟೋಗಳುಳ್ಳ ಪ್ಲಕಾರ್ಡ್ ಗಳಿದ್ದವು. ಕೆಲವರ ಕೈಯಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಪೋಟೋಗಳಿದ್ದವು. ತಮ್ಮ ಶಾಸಕನನ್ನು ಮಂತ್ರಿ ಮಾಡುವಂತೆ ಒತ್ತಡ ಹಾಕುವುದು ಅವರ ಉದ್ದೇಶವಾಗಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Published on: May 23, 2023 11:19 AM
Latest Videos