Dangerous underpasses: ಅಪಾಯಕಾರಿ ಅಂಡರ್​ಪಾಸ್​ಗಳನ್ನು ಅಧ್ಯಯನ ಮಾಡಿ ಪರಿಹಾರ ಸೂಚಿಸಲು ಐಐಎಸ್​ಸಿ ತಜ್ಞರ ಮೊರೆಹೊಕ್ಕ ಬಿಬಿಎಮ್​ಪಿ

Dangerous underpasses: ಅಪಾಯಕಾರಿ ಅಂಡರ್​ಪಾಸ್​ಗಳನ್ನು ಅಧ್ಯಯನ ಮಾಡಿ ಪರಿಹಾರ ಸೂಚಿಸಲು ಐಐಎಸ್​ಸಿ ತಜ್ಞರ ಮೊರೆಹೊಕ್ಕ ಬಿಬಿಎಮ್​ಪಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 23, 2023 | 10:31 AM

ಪ್ರತಿಬಾರಿ ಅನಾನಹುತ ನಡೆದ ಮೇಲಷ್ಟೇ ಎಚ್ಚೆತ್ತುಕೊಳ್ಳುವ ಬಿಬಿಎಮ್​ಪಿ ಅಪಾಯಕಾರಿ ಅಂಡರ್ ಪಾಸ್ ಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸುವಂತೆ ಐಐಎಸ್​ಸಿ ತಜ್ಞರ ಮೊರೆಹೊಕ್ಕಿದೆ

ಬೆಂಗಳೂರು: ಗಡ್ಡಕ್ಕೆ ಬೆಂಕಿ ಬಿದ್ದಾಗಲೇ ಬಾವಿ ತೋಡುವ ಜಾಯಮಾನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಅಧಿಕಾರಿಗಳದ್ದು. ಪಾಲಿಕೆಯಲ್ಲಿ ಜನ ಪ್ರತಿನಿಧಿಗಳಿದ್ದಾಗಲೂ ಅದೇ ಸ್ಥಿತಿ. ಪ್ರತಿ ಮಳೆಗಾಲ ಅನಾಹುತ ನಡೆಯುತ್ತವೆ, ಚರಂಡಿ, ರಾಜಾ ಕಾಲುವೆಗಳು (SWD) ಪ್ರವಾಹಕ್ಕೀಡಾದ ನದಿಗಳಂತೆ ಉಕ್ಕಿ ಹರಿದು ಜನವಸತಿ ಪ್ರದೇಶಳಿಗೆ ನುಗ್ಗಿ, ಜನರ ಬದುಕನ್ನು ನರಕಸದೃಶ ಮಾಡುತ್ತವೆ. ಅಂಡರ್​ಪಾಸ್​ಗಳು (underpass) ಕೆರೆಗಳಾಗಿ ಮಾರ್ಪಡುತ್ತವೆ ಮತ್ತು ಅಸಲೀ ಕೆರೆಗಳ ಕೋಡಿ ಒಡೆದು ಸುತ್ತಮುತ್ತಲಿನ ಏರಿಯಾಗಳು ದ್ವೀಪಗಳಾಗಿ ಬಿಡುತ್ತವೆ. ನಗರದಲ್ಲಿ 18 ಅಂಡರ್ ಪಾಸ್​ಗಳಿದ್ದು, ಅವುಗಳ ಪೈಕಿ 3 ಅಕ್ಷರಶಃ ಮೃತ್ಯುಕೂಪಗಳು. ಇವುಗಳನ್ನು ಅದ್ಯಾವ ನಿಷ್ಪ್ರಯೋಜಕ ಇಂಜಿನೀಯರ್​ಗಳು ನಿರ್ಮಿಸಿದ್ದಾರೋ?  ರವಿವಾರ ರಾತ್ರಿ ಇವು ಇಬ್ಬರನ್ನು ಬಲಿ ತೆಗೆದುಕೊಂಡಿದ್ದು ನಿಮಗೆ ಗೊತ್ತಿದೆ. ಪ್ರತಿಬಾರಿ ಅನಾನಹುತ ನಡೆದ ಮೇಲಷ್ಟೇ ಎಚ್ಚೆತ್ತುಕೊಳ್ಳುವ ಬಿಬಿಎಮ್​ಪಿ ಅಧಿಕಾರಿಗಳು, ಅಪಾಯಕಾರಿ ಅಂಡರ್ ಪಾಸ್ ಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸುವಂತೆ ಐಐಎಸ್ ಸಿ ತಜ್ಞರ ಮೊರೆಹೊಕ್ಕಿದ್ದಾರೆ. ಒಬ್ಬ ತಜ್ಞ ನಗರದ ಒಂದು ಅಂಡರ್ ಪಾಸ್ ಪರಿಶೀಲಿಸುತ್ತಿರುವುದನ್ನು ಗಮನಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ