ಕಾಲ್ತುಳಿತದ ಬಳಿಕವೂ ಎಚ್ಚೆತ್ತುಕೊಳ್ಳದ ಜನ: ಆಫರ್ ಬಟ್ಟೆಗಾಗಿ ಹೇಗೆ ಮುಗಿಬಿದ್ರು ನೋಡಿ
ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತದ ನಂತರವೂ ಎಚ್ಚೆತ್ತುಕೊಳ್ಳದ ಯುವಜನತೆ ಆಫರ್ ಬಟ್ಟೆಗಳಿಗಾಗಿ ಮುಗಿಬಿದ್ದಿದ್ದಾರೆ. ಕೊಪ್ಪಳದ ಲೇಬರ್ ಸರ್ಕಲ್ನಲ್ಲಿ ಆಫರ್ ಟ್ರೆಂಡ್ಸ್ ಎನ್ನುವ ಬಟ್ಟೆ ಅಂಗಡಿ ಪ್ರಾರಂಭವಾಗಿದೆ. ಹೊಸ ಆಫರ್ಗಾಗಿ ಯುವಕ ಯುವತಿಯರು ಮುಗಿಬಿದ್ದಿದ್ದಾರೆ. ಪ್ರಾರಂಭದ ಮೊದಲನೇ ದಿನದಲ್ಲಿ1 ಸಾವಿರ ರೂಪಾಯಿಗೆ 8 ಶರ್ಟ್, 1 ಸಾವಿರ ರೂಪಾಯಿಗೆ 4 ಪ್ಯಾಂಟ್, 1 ಸಾವಿರ ರೂಪಾಯಿಗೆ ಎರಡು ಜೊತೆ ಶೂ ಎಂದು ಭರ್ಜರಿ ಆಫರ್ ಕಂಡ ಜನ ಅಂಗಡಿಯೊಳಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಯುವಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.
ಕೊಪ್ಪಳ, ಸೆಪ್ಟೆಂಬರ್ 28: ತಮಿಳುನಾಡಿನಲ್ಲಿ ಸಂಭವಿಸಿರುವ ಕಾಲ್ತುಳಿತದ ನಂತರವೂ ಜನರು ಎಚ್ಚೆತ್ತುಕೊಂಡಿಲ್ಲ ಎನ್ನಬಹುದು. ಏಕೆಂದರೆ ಕೊಪ್ಪಳದ ಲೇಬರ್ ಸರ್ಕಲ್ನಲ್ಲಿ ಆಫರ್ ಟ್ರೆಂಡ್ಸ್ ಎಂಬ ಬಟ್ಟೆ ಅಂಗಡಿ ಪ್ರಾರಂಭವಾಗಿದ್ದು, ಆಫರ್ ಹಿನ್ನಲೆ ಯುವಕ, ಯುವತಿಯರು ಮುಗಿಬಿದ್ದಿದ್ದರು. ಅಂಗಡಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವೇ ಪಟ್ಟರು. ವಿಡಿಯೋ ನೋಡಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.