ಚಿಕ್ಕಬಳ್ಳಾಪುರ: 112 ಅಡಿ ಎತ್ತರದ ಆದಿಯೋಗಿ ನೋಡಲು ವೀಕೆಂಡ್​ನಲ್ಲಿ ಹರಿದು ಬಂದ ಜನಸಾಗರ

ಚಿಕ್ಕಬಳ್ಳಾಪುರ: 112 ಅಡಿ ಎತ್ತರದ ಆದಿಯೋಗಿ ನೋಡಲು ವೀಕೆಂಡ್​ನಲ್ಲಿ ಹರಿದು ಬಂದ ಜನಸಾಗರ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Rakesh Nayak Manchi

Updated on: Jul 02, 2023 | 6:43 PM

ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಬಳಿಯ ಆದಿಯೋಗಿ ಪ್ರತಿಮೆ ವೀಕ್ಷಿಸಲು ವಾರಾಂತ್ಯದಲ್ಲಿ ಜನಸಾಗರವೇ ಹರಿದುಬಂದಿದೆ.

ಚಿಕ್ಕಬಳ್ಳಾಪುರ: ತಾಲೂಕಿನ ಅವಲಗುರ್ಕಿ ಬಳಿ ಈಶಾ ಫೌಂಡೇಶನ್ (Isha Foundation) ಸ್ಥಾಪಿಸಿರುವ 112 ಅಡಿ ಎತ್ತರದ ಆದಿಯೋಗಿ (Adiyogi) ಪ್ರತಿಮೆ ವೀಕ್ಷಿಸಲು ವಾರಾಂತ್ಯದಲ್ಲಿ ಜನಸಾಗರವೇ ಹರಿದುಬಂದಿದೆ. ಖಾಸಗಿ ಬಸ್, ಕಾರು ಹಾಗೂ ಬೈಕ್​​ಗಳ ಮೂಲಕ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಉಚಿತ ಪ್ರಯಾಣ ಹಿನ್ನೆಲೆ ಸರ್ಕಾರಿ ಬಸ್​ಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದಾರೆ. ಜನಸಂದಣಿ ನಿಭಾಯಿಸಲು ಸ್ವಯಂ ಸೇವಕರು ಹರಸಾಹಸ ಪಡಬೇಕಾಯಿತು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ