ಉತ್ತರ ಕುಮಾರ ಯಾರು ಅಂತ ಜನ ಈಗಾಗಲೇ ನಿರ್ಧರಿಸಿದ್ದಾರೆ, ನಾನು ನಾಪತ್ತೆಯಾಗಿಲ್ಲ: ಶಿವಾನಂದ ಪಾಟೀಲ್
ತಾನು ಸಲ್ಲಿಸಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲವಾದರೆ, ಸಹಿ ಮಾಡಿದ ಲೆಟರ್ ಹೆಡ್ ಅನ್ನು ಬ್ಲ್ಯಾಂಕ್ ಆಗಿ ಅವರಿಗೆ ಕೊಡುತ್ತೇನೆ, ಏನು ಮತ್ತು ಹೇಗೆ ಬರೆಯಬೇಕು ಅಂತ ಅವರು ನಿರ್ಧರಿಸಲಿ, ತನ್ನ ಪತ್ರದೊಂದಿಗೆ ಯತ್ನಾಳ್ ಸಹ ರಾಜೀನಾಮೆ ಸಲ್ಲಿಸಬೇಕು, ವಿಧಾನಸಭಾಧ್ಯಕ್ಷರು ಮೊದಲು ತನ್ನ ರಾಜೀನಾಮೆ ಪತ್ರ ಅಂಗೀಕರಿಸಿದ ಬಳಿಕ ಅವರ ಪತ್ರವನ್ನು ಅಂಗೀಕರಿಸಲಿ ಎಂದು ಶಿವಾನಂದ ಪಾಟೀಲ್ ಹೇಳಿದರು.
ವಿಜಯಪುರ, ಮೇ 6: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್ ಅವರ ನಿರ್ಧಾರ ಅಚಲರಾಗಿರುವಂತಿದೆ. ನಮ್ಮ ವಿಜಯಪುರ ವರದಿಗಾರನೊಂದಿಗೆ ಮಾತಾಡಿರುವ ಅವರು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಟ್ವೀಟ್ಗೆ ಉತ್ತರಿಸುತ್ತ, ಉತ್ತರ ಕುಮಾರ ಯಾರು ಅನ್ನೋದು ರಾಜ್ಯದ ಜನಕ್ಕೆ ಗೊತ್ತಾಗಿದೆ, ಅದನ್ನು ನಿರ್ಣಯಿಸಿದವನು ನಾನಲ್ಲ, ಜನ ನಿರ್ಣಯಿಸಿದ್ದಾರೆ, ರಾಜೀನಾಮೆ ಸಲ್ಲಿಸಿದಂದಿನಿಂದ ತಾನೇನೂ ಸಾರ್ವಜನಿಕ ಬದುಕಿನಿಂದ ದೂರ ಹೋಗಿಲ್ಲ ಅವರ ನಡುವೆಯೇ ಇದ್ದೇನೆ ಎಂದು ಹೇಳಿದರು. ತನ್ನ ಸವಾಲನ್ನು ಯತ್ನಾಳ್ ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು ಎಂದು ಅವರು ಹೇಳಿದರು.
ಇದನ್ನೂ ಓದಿ: ನನ್ನ ತಂದೆಯ ಸವಾಲನ್ನು ಯತ್ನಾಳ್ ಸ್ವೀಕರಿಸಲಿಲ್ಲವೆಂದು ನನ್ನ ಮಕ್ಕಳಿಗೆ ಹೇಳುತ್ತೇನೆ: ಶಿವಾನಂದ ಪಾಟೀಲ್ ಮಗ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನ್ಯೂ ಇಯರ್: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್
ಬೆಳಗಾವಿಯಲ್ಲಿ ನ್ಯೂಇಯರ್ ಕಿಕ್; ಭರ್ಜರಿ ಸ್ಟೆಪ್ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ

