Ramalinga Reddy; ಜನ ಮಾತುಗಾರರನ್ನು ಮನೆಗೆ ಕಳಿಸಿ ಕೆಲಸಗಾರರನ್ನು ವಿಧಾನಸಭೆಗೆ ಆರಿಸಿದ್ದಾರೆ: ರಾಮಲಿಂಗಾರೆಡ್ಡಿ, ಸಚಿವರು

Ramalinga Reddy; ಜನ ಮಾತುಗಾರರನ್ನು ಮನೆಗೆ ಕಳಿಸಿ ಕೆಲಸಗಾರರನ್ನು ವಿಧಾನಸಭೆಗೆ ಆರಿಸಿದ್ದಾರೆ: ರಾಮಲಿಂಗಾರೆಡ್ಡಿ, ಸಚಿವರು

ಅರುಣ್​ ಕುಮಾರ್​ ಬೆಳ್ಳಿ
|

Updated on:May 26, 2023 | 12:30 PM

ಕಾಂಗ್ರೆಸ್ ಸರ್ಕಾರ ನಗರದ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಕಟಿಬದ್ಧವಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಬೆಂಗಳೂರು: ವಿರೋಧ ಪಕ್ಷದ ನಾಯಕರ್ಯಾರೂ ಪ್ರತಿಭಟನೆ ಮಾಡುವ ಅಗತ್ಯವಿಲ್ಲ, ಕಾಂಗ್ರೆಸ್ ಪಕ್ಷ ನೀಡಿದ 5 ಗ್ಯಾರಂಟಿಗಳಿಗೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ (approval) ಪಡೆದುಕೊಳ್ಳಲಾಗಿದೆ, ಎರಡನೇ ಸಭೆಯಲ್ಲಿ ಅವುಗಳ ಜಾರಿಗೆ ಆದೇಶ (order) ಹೊರಡಿಸುವ ಸಾಧ್ಯತೆ ಇದೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಇಂದು ಬೆಂಗಳೂರಲ್ಲಿ ಹೇಳಿದರು. ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು, ಬಿಜೆಪಿ ಸರ್ಕಾರ ನಗರದ ರಸ್ತೆಗಲಳಲ್ಲಿ ಬಿದ್ದ ಗುಂಡಿಗಳಿಗಾಗಿ ಹೈಕೋರ್ಟ್ ನಿಂದ ತರಾಟೆಗೊಳಗಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ನಗರದ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಕಟಿಬದ್ಧವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದು ಒಂದು ವಾರ ಕೂಡ ಆಗಿಲ್ಲ, ಆಗಲೇ ಬಿಜೆಪಿ ನಾಯಕರು ಮಾತಾಡಲಾರಂಭಿಸಿದ್ದಾರೆ, ಮಾತುಗಾರರಾಗಿದ್ದ ಡಾ ಕೆ ಸುಧಾಕರ್, ಸಿಟಿ ರವಿ, ರಾಜೀವ್ ಕುಡಚಿ ಮೊದಲಾದವರನ್ನೆಲ್ಲ ಜನ ಮನೆಗೆ ಕಳಿಸಿ ಕೆಲಸಗಾರರನ್ನು ವಿಧಾನಸಭೆಗೆ ಆರಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಮಾತಾಡುವ ಭರದಲ್ಲಿ ಸಚಿವರು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 47 ವರ್ಷ ಅನ್ನುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 26, 2023 12:29 PM