Mysore Dasara: ನಗರದ ರಸ್ತೆಗಳಲ್ಲಿ ಅಂಬಾರಿ ಹೊತ್ತ ಅಭಿಮನ್ಯು ಪಡೆಯ ರೋಮಾಂಚಕ ಜಂಬೂ ಸವಾರಿ, ಸಂಭ್ರಮಿಸಿದ ಲಕ್ಷಾಂತರ ಜನ!

|

Updated on: Oct 24, 2023 | 7:49 PM

Mysore Dasara: ಅಭಿಮನ್ಯು ಎಡ ಮತ್ತು ಬಲಭಾಗಲ್ಲಿ ಅವನ ಹಾಗೆ ಸಿಂಗಾರಗೊಂಡಿರುವ ಇಂಟರ್ನ್ ಆನೆಗಳು! ಅವುಗಳ ಹಿಂದೆ ಮೋಟಾರ್ ಕೇಡ್ ಮತ್ತು ಅಶ್ವದಳ. ರಸ್ತೆಬದಿಯ ಕಟ್ಟಡ ಮತ್ತು ಮನೆಗಳ ಮೇಲೂ ಜನ. ರೋಮಾಂಚಿತ ಜನರ ಚೀತ್ಕಾರ, ಕೇಕೆ, ಕೂಗಾಟ ಮತ್ತು ಅರಚಾಟದಿಂದ ಅಭಿಮನ್ಯು ವಿಚಲಿತನಾಗಿಲ್ಲ. ಅದೇ ಗಾಂಭೀರ್ಯದ ನಡಿಗೆಯಿಂದ ಜನರಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತಿದ್ದಾನೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂತಿಮ ಚರಣ ತಲುಪಿದೆ. ಜಂಬೂ ಸವಾರಿ (Jumbo Savari) ಬನ್ನಿಮಂಟಪ ತಲುಪಿದ ಬಳಿಕ ಅಲ್ಲಿ ನಡೆಯುವ ಟಾರ್ಚ್ ಲೈಟ್ ಪರೇಡ್ ನೊಂದಿಗೆ (torchlight parade) ಮೈಸೂರು ದಸರಾ ಮಹೋತ್ವವ-2023 (Dasara Mahaotsav-2023) ಸಂಪನ್ನಗೊಳ್ಳುತ್ತದೆ. ಅದು ಆಮೇಲೆ, ಈಗ ಈ ದೃಶ್ಯ ವೈಭವವಮನ್ನು ಕಣ್ಣು ತುಂಬಿಕೊಳ್ಳಿ ಮಾರಾಯ್ರೇ. ಸತತವಾಗಿ ನಾಲ್ಕನೇ ವರ್ಷ ಅಂಬಾರಿ ಹೊತ್ತು ನಗರದ ರಸ್ತೆಗಳಲ್ಲಿ ಅದೇ ಗಾಂಭೀರ್ಯದೊಂದಿಗೆ ಸಾಗುತ್ತಿರುವ ಅಭಿಮನ್ಯುನನ್ನು ನೋಡಿ. ಎಲ್ಲ ಕಡೆ ಜನಸಾಗರ. ವರ್ಷಕ್ಕೊಮ್ಮೆ ಮಾತ್ರ ಕಾಣಸಿಗುವ ಈ ಸಂಭ್ರಮವನ್ನು ಜನ ರೋಮಾಂಚನ ಮತ್ತು ಉತ್ಸಾಹದೊಂದಿಗೆ ವೀಕ್ಷಿಸುತ್ತಿದ್ದಾರೆ. ದೃಶ್ಯಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದಾರೆ. ಅಭಿಮನ್ಯು ಎಡ ಮತ್ತು ಬಲಭಾಗಲ್ಲಿ ಅವನ ಹಾಗೆ ಸಿಂಗಾರಗೊಂಡಿರುವ ಇಂಟರ್ನ್ ಆನೆಗಳು! ಅವುಗಳ ಹಿಂದೆ ಮೋಟಾರ್ ಕೇಡ್ ಮತ್ತು ಅಶ್ವದಳ. ರಸ್ತೆಬದಿಯ ಕಟ್ಟಡ ಮತ್ತು ಮನೆಗಳ ಮೇಲೂ ಜನ. ರೋಮಾಂಚಿತ ಜನರ ಚೀತ್ಕಾರ, ಕೇಕೆ, ಕೂಗಾಟ ಮತ್ತು ಅರಚಾಟದಿಂದ ಅಭಿಮನ್ಯು ವಿಚಲಿತನಾಗಿಲ್ಲ. ಅದೇ ಗಾಂಭೀರ್ಯದ ನಡಿಗೆಯಿಂದ ಜನರಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Tue, 24 October 23

Follow us on