ಮನೆ ಅಥವಾ ಸೈಟು ನೋಂದಣಿ ಮಾಡಿಸಿಕೊಳ್ಳಲು ಇನ್ನು ಉಪ-ನೋಂದಾಣಿಧಿಕಾರಿ ಕಚೇರಿಗೆ ಹೋಗುವ ಅಗತ್ಯವಿಲ್ಲ: ಆರ್ ಅಶೋಕ, ಕಂದಾಯ ಸಚಿವ
ಕಾವೇರಿ-2 ತಂತ್ರಾಶವನ್ನ ಆಳವಡಿಸುವ ಮೂಲಕ ನೋಂದಣಿ ಕೆಲಸ ಸುಲಭ ಮತ್ತು ಸರಳ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಬೆಂಗಳೂರು: ಸೈಟು ಮತ್ತು ಮನೆಗಳನ್ನು ಉಪ-ನೋಂದಣಾಧಿಕಾರಿ ಕಚೇರಿಗೆ ಹೋಗಿ ನೋಂದಾಯಿಸಿಕೊಂಡು ಸಂಬಂಧಪಟ್ಟ ದಾಖಲೆಗಳನ್ನು ಪಡೆದುಕೊಳ್ಳುವುದು ಬಹಳ ತ್ರಾಸದಾಯಕ ಮತ್ತು ಅಷ್ಟೇ ಗೋಜಿನ ಕೆಲಸ. ಮಧ್ಯವರ್ತಿಗಳಿಲ್ಲದೆ (brokers) ಕಚೇರಿಯಲ್ಲಿ ನಿಮ್ಮ ಕೆಲಸವಾಗದು. ದಶಕಗಳಿಂದ ಇದು ಹಾಗೆ ನಡೆದುಕೊಂಡು ಬಂದಿದೆ. ಆದರೆ ಈ ಪದ್ಧತಿ, ವ್ಯವಸ್ಥೆಯನ್ನೇ ಬದಲಾಯಿಸುವ ಕ್ತಾಂತಿಕಾರಿ ವಿಧಾನವನ್ನು ಜಾರಿಗೊಳಿಸುವ ಪ್ರಯತ್ನ ಜಾರಿಯಲ್ಲಿದೆ ಎಂದು ಕಂದಾಯ ಸಚಿವ ಆರ್ ಆಶೋಕ (R Ashoka) ಇಂದು ಬೆಂಗಳೂರಲ್ಲಿ ಹೇಳಿದರು. ಪತ್ರಿಕಾ ಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಸಚಿವರು ಕಾವೇರಿ-2 ತಂತ್ರಾಶವನ್ನು (Kaveri-2 software) ಆಳವಡಿಸುವ ಮೂಲಕ ನೋಂದಣಿ ಕೆಲಸ ಸುಲಭ ಮತ್ತು ಸರಳ ಮಾಡಲಾಗುವುದು. ಈ ಪದ್ಧತಿ ನವೀನ ಜನಸ್ನೇಹಿ, ವಂಚನೆರಹಿತ ವಾಗಿದೆ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ಕ್ರಮೇಣ ದೂರಮಾಡಲಿದೆ ಎಂದು ಹೇಳಿದರು. ತಮ್ಮ ನಿವೇಶನ ಅಥವಾ ಮನೆ ನೋಂದಣಿ ಮಾಡಿಸಬೇಕೆನ್ನುವವರು ಮನೆಯಲ್ಲೇ ಕೂತು ತಮ್ಮ ಕೆಲಸ ಮಾಡಿಕೊಳ್ಳಬಹುದು ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ