ತುಂಗಭದ್ರಾ ಹಿನ್ನೀರಿನ ಹರಿವು ಹೆಚ್ಚಾಗಿರುವುದನ್ನು ಹರಿಹರದ ಜನ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ!

ತುಂಗಭದ್ರಾ ಹಿನ್ನೀರಿನ ಹರಿವು ಹೆಚ್ಚಾಗಿರುವುದನ್ನು ಹರಿಹರದ ಜನ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 09, 2022 | 10:57 AM

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ತುಂಗಭದ್ರಾ ಹಿನ್ನೀರಿನ ಹರಿವು ಹೆಚ್ಚಾಗಿರುವುದರಿಂದ ಉಕ್ಕಡಗಾತ್ರಿಗೆ ತೆರಳುವ ಮಾರ್ಗ ಜಲಾವೃತಗೊಂಡಿದೆ. ಅದರೆ ಉಕ್ಕಿಹರಿಯುತ್ತಿರುವ ನದಿ ನೀರಲ್ಲಿ ಜನ ತಮ್ಮ ವಾಹನಗಳನ್ನು ತೊಳೆದು ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಜನ ಮಳೆಗಾಗಿ ಹಗಲಿರುಳು ಪ್ರಾರ್ಥಿಸುತ್ತಿದ್ದರೆ ಬೆಂಗಳೂರು ಸೇರಿದಂತೆ ಮಲೆನಾಡು (Malnad) ಪ್ರಾಂತ್ಯದಲ್ಲಿ ಒಂದು ವಾರದಿಂದ ಎಡೆಬಿಡದೆ ಮಳೆಯಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಭಾಗದ ನದಿಗಳಲ್ಲಿ ಪ್ರವಾಹದಂಥ ಸ್ಥಿತಿ ತಲೆದೋರಿದೆ. ಉಕ್ಕಿ ಹರಿಯುತ್ತಿರುವ ನದಿಗಳು ಬಯಲು ಸೀಮೆಯ ಪ್ರದೇಶಗಳನ್ನೂ ಒಳಪಡಿಸಿವೆ ಮಾರಾಯ್ರೇ. ದಾವಣಗೆರೆ ಜಿಲ್ಲೆಯ ಹರಿಹರ (Harihara) ತಾಲ್ಲೂಕಿನಲ್ಲಿ ತುಂಗಭದ್ರಾ (Tungabhadra) ಹಿನ್ನೀರಿನ ಹರಿವು ಹೆಚ್ಚಾಗಿರುವುದರಿಂದ ಉಕ್ಕಡಗಾತ್ರಿಗೆ ತೆರಳುವ ಮಾರ್ಗ ಜಲಾವೃತಗೊಂಡಿದೆ. ಅದರೆ ಉಕ್ಕಿಹರಿಯುತ್ತಿರುವ ನದಿ ನೀರಲ್ಲಿ ಜನ ತಮ್ಮ ವಾಹನಗಳನ್ನು ತೊಳೆದು ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Viral Video: ‘ಥಟ್ ಥಟ್’ ಎಂಬ ಹೊಸ ಹಾಡಿನೊಂದಿಗೆ ಬಂದ ಗಂಗ್ನಮ್ ಸ್ಟೈಲ್ ಖ್ಯಾತಿಯ Psy, ವೈರಲ್ ವಿಡಿಯೋ ಇಲ್ಲಿದೆ