ತುಮಕೂರು: ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಪಾವಗಡ ಎಸ್ ಬಿಐ ಶಾಖೆಯೆದುರು ಜನಜಂಗುಳಿ!

ತುಮಕೂರು: ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಪಾವಗಡ ಎಸ್ ಬಿಐ ಶಾಖೆಯೆದುರು ಜನಜಂಗುಳಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 03, 2023 | 11:35 AM

ಯುವನಿಧಿಯೊಂದನ್ನು ಬಿಟ್ಟು ಉಳಿದ 4 ಗ್ಯಾರಂಟಿಗಳು ಒಂದೋ ಜಾರಿಗೊಂಡಿವೆ ಇಲ್ಲವೇ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ, ಅನ್ನ ಭಾಗ್ಯ ಯೋಜನೆಯಡಿ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿದೆ.

ತುಮಕೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು (guarantees) ಜನರನ್ನು ಸೇವಾ ಸಿಂಧು ಕೇಂದ್ರ, ವಿವಿಧ ಜಿಲ್ಲೆಗಳ ವನ್ ಕೇಂದ್ರಗಳು ಮತ್ತು ಬ್ಯಾಂಕ್ ಗಳ ಮುಂದೆ ಸಾಲುಗಟ್ಟುವಂತೆ ಮಾಡುತ್ತಿವೆ. ಯುವನಿಧಿಯೊಂದನ್ನು ಬಿಟ್ಟು ಉಳಿದ 4 ಗ್ಯಾರಂಟಿಗಳು ಒಂದೋ ಜಾರಿಗೊಂಡಿವೆ ಇಲ್ಲವೇ ನೋಂದಣಿ ಪ್ರಕ್ರಿಯೆ (registration process) ಜಾರಿಯಲ್ಲಿದೆ. ತುಮಕೂರಿನ ಪಾವಗಡದಿಂದ (Pavagada) ಲಭ್ಯವಾಗಿರುವ ಈ ದೃಶ್ಯ ನೋಡಿ. ಗ್ಯಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆನಗಳ ಅಡಿ ಫಲಾನುಭವಿಗಳಾಗಲು ಬ್ಯಾಂಕ್ ಖಾತೆ ಹೊಂದಿರಬೇಕು ಮತ್ತು ಖಾತೆಗಳಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್​ಗಳ ಸಂಖ್ಯೆ, ಮೊಬೈಲ್ ನಂಬರ್ ಗಳು ಲಿಂಕ್ ಆಗಬೇಕಿರುವುದು ಅತ್ಯವಶ್ಯಕವಾಗಿದೆ. ಪಾವಗಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುಂದೆ ಜನ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಜಾತ್ರೆಯಂತೆ ನೆರೆದಿದ್ದಾರೆ. ತಳ್ಳಾಟ-ನೂಕಾಟದ ನಡುವೆ ಕೆಲವರು ಬ್ಯಾಂಕಿನ ಕಂಪೌಂಡ್ ಹಾರುತ್ತಿದ್ದಾರೆ.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ