Karnataka Assembly Polls: ಜನರನ್ನು ಸೇರಿಸುವ ಅಗತ್ಯವಿಲ್ಲ, ಗ್ಲೋಬಲ್ ಲೀಡರ್ ಮೋದಿ ನೋಡಲು ಸ್ವಪ್ರೇರಣೆಯಿಂದ ಬರುತ್ತಿದ್ದಾರೆ: ಪಿಸಿ ಮೋಹನ್, ಸಂಸದ
ಪ್ರಧಾನಿ ಮೋದಿಯನ್ನು ನೋಡಲು ಜನ ಆಫೀಸುಗಳಿಗೆ ರಜೆ ಹಾಕಿದ್ದಾರೆ ಮತ್ತು ತಮ್ಮ ನಿಗದಿತ ದಿನಚರಿಗಳನ್ನು ಮುಂದೂಡಿದ್ದಾರೆ ಎಂದು ಮೋಹನ್ ಹೇಳಿದರು.
ಬೆಂಗಳೂರು: ನಗರದ 13 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದುಹೋಗುವ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ರೋಡ್ ಶೋ ಆರಂಭವಾಗಿದೆ. ರೋಡ್ ಶೋ ಅರಂಭಗೊಳ್ಳುವ ಕೆಲ ನಿಮಿಷ ಮೊದಲು ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ರೋಡ್ ಶೋ ಅಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ (PC Mohan) ಜೊತೆ ಮಾತುಕತೆ ನಡೆಸಿದ್ದಾರೆ. ಸಂಸದರು ಹೇಳುವ ಪ್ರಕಾರ, ಬಿಜೆಪಿ ಕಾರ್ಯಕರ್ತರಿಗೆ ಜನರನ್ನು ಸೇರಿಸುವ ಪ್ರಮೇಯವೇ ಉದ್ಭವಿಸಿಲ್ಲ, ಅವರೆಲ್ಲ ಸ್ವಪ್ರೇರಣೆಯಿಂದ (voluntarily) ಪ್ರಧಾನಿಯವರನ್ನು ನೋಡಲು ಆಗಮಿಸುತ್ತಿದ್ದಾರೆ. ಅಪಾರ್ಟ್ಮೆಂಟ್ ಗಳಲ್ಲಿ ವಾಸವಾಗಿರುವ ಜನ ಅವರು ಬರುವ ಸಮಯ ತಿಳಿಸಿ ಅವರನ್ನು ಕಣ್ಣಾರೆ ನೋಡಬೇಕು ಎಂದಿದ್ದಾರಂತೆ. ಪ್ರಧಾನಿ ಮೋದಿ ಒಬ್ಬ ಗ್ಲೋಬಲ್ ಲೀಡರ್, ಅವರನ್ನು ನೋಡಲು ಜನ ಆಫೀಸುಗಳಿಗೆ ರಜೆ ಹಾಕಿದ್ದಾರೆ ಮತ್ತು ತಮ್ಮ ನಿಗದಿತ ದಿನಚರಿಗಳನ್ನು ಮುಂದೂಡಿದ್ದಾರೆ ಎಂದು ಮೋಹನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ