Narendra Modi: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಆ್ಯಪಲ್ ಸಿಇಒ ಟಿಮ್ ಕುಕ್
ಮುಂಬೈನಲ್ಲಿ ಆಪಲ್‌ನ ಮೊದಲ ಇಂಡಿಯಾ ಸ್ಟೋರ್‌ನ ಅದ್ಧೂರಿ ಉದ್ಘಾಟನೆಯಂತೆಯೇ, ನಾಳೆ ಸಾಕೇತ್‌ನ ಸೆಲೆಕ್ಟ್ ಸಿಟಿ ಮಾಲ್‌ನಲ್ಲಿ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಟಿಮ್ ಕುಕ್ ಗ್ರಾಹಕರನ್ನು ಸ್ವಾಗತಿಸಲಿದ್ದಾರೆ.
ನವದೆಹಲಿ: ಆ್ಯಪಲ್‌ನ (Apple) ಎರಡನೇ ಮಳಿಗೆಯನ್ನು ದೆಹಲಿಯಲ್ಲಿ ಪ್ರಾರಂಭಿಸುವ ಮುನ್ನ, ಸಿಇಒ ಟಿಮ್ ಕುಕ್ (Tim Cook) ಅವರು ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದರು. ಕಂಪನಿಯು ಪಾಸಿಟಿವ್ ಇಂಪ್ಯಾಕ್ಟ್ ಟೆಕ್ನಾಲಜಿ ಎಂಬ ನಿಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ದೇಶಾದ್ಯಂತ ಹೂಡಿಕೆ ಮಾಡಲು ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಟಿಮ್ ಕುಕ್, ನಿಮ್ಮನ್ನು ಭೇಟಿಯಾಗಿದ್ದರಿಂದ ಖುಷಿಯಾಗಿದೆ. ವೈವಿಧ್ಯಮಯ ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಮತ್ತು ಭಾರತದಲ್ಲಿ ನಡೆಯುತ್ತಿರುವ ತಂತ್ರಜ್ಞಾನ-ಚಾಲಿತ ರೂಪಾಂತರಗಳನ್ನು ಪ್ರಸ್ತುತಪಡಿಸಲು ಸಂತೋಷವಾಗಿದೆ ಎಂದು ಆ್ಯಪಲ್ ಸಿಇಒ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Thank you Prime Minister @narendramodi for the warm welcome. We share your vision of the positive impact technology can make on India’s future — from education and developers to manufacturing and the environment, we’re committed to growing and investing across the country. pic.twitter.com/xRSjc7u5Ip
— Tim Cook (@tim_cook) April 19, 2023
ಆತ್ಮೀಯ ಸ್ವಾಗತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ತಂತ್ರಜ್ಞಾನವು ಭಾರತದ ಭವಿಷ್ಯದ ಮೇಲೆ ಮಾಡಬಹುದಾದ ಸಕಾರಾತ್ಮಕ ಪರಿಣಾಮದ ಬಗ್ಗೆ ನೀವು ಹೊಂದಿರುವ ದೃಷ್ಟಿಕೋನವನ್ನು ನಾವು ಹಂಚಿಕೊಳ್ಳುತ್ತೇವೆ. ಶಿಕ್ಷಣ ಮತ್ತು ಡೆವಲಪರ್‌ಗಳಿಂದ ತೊಡಗಿ ಉತ್ಪಾದನೆ ಮತ್ತು ಪರಿಸರದವರೆಗೆ, ದೇಶಾದ್ಯಂತ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ ಎಂದು ಟಿಮ್ ಕುಕ್ ಟ್ವೀಟ್ ಮಾಡಿದ್ದಾರೆ.
Thank you Prime Minister @narendramodi for the warm welcome. We share your vision of the positive impact technology can make on India’s future — from education and developers to manufacturing and the environment, we’re committed to growing and investing across the country. pic.twitter.com/xRSjc7u5Ip
— Tim Cook (@tim_cook) April 19, 2023
ಆ್ಯಪಲ್ ಸಿಇಒ ಅವರು ಪ್ರಧಾನಿ ಭೇಟಿಗೂ ಮುನ್ನ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದಾರೆ.
ಟಿಮ್ ಕುಕ್ ಅವರನ್ನು ಭೇಟಿಯಾದೆ. ಉತ್ಪಾದನೆ, ಎಲೆಕ್ಟ್ರಾನಿಕ್ಸ್ ರಫ್ತು ವಿಚಾರದಲ್ಲಿ ಭಾರತದಲ್ಲಿ ಆ್ಯಪಲ್‌ನ ಪಾತ್ರದ ಬಗ್ಗೆ ಆಳವಾಗಿ ಚರ್ಚಿಸಲಾಗಿದೆ. ಅಪ್ಲಿಕೇಶನ್, ಆರ್ಥಿಕತೆ, ಕೌಶಲ, ಸುಸ್ಥಿರತೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿ ವಿಚಾರವಾಗಿ ಚರ್ಚಿಸಿದೆವು. ದೀರ್ಘಾವಧಿಯ ಮತ್ತು ಬಲವಾದ ಸಂಬಂಧ ಹೊಂದುವ ಬಗ್ಗೆ ಬಲವಾದ ಪ್ರತಿಪಾದನೆ ಮಾಡಿದೆವು ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ.
Met with @tim_cook, CEO, Apple. Discussed deepening Apple’s engagement in India across manufacturing, electronics exports, app economy, skilling, sustainability and job creation especially for women. Jointly charting a long-term and strong relationship. pic.twitter.com/L7KVPjq8fk
— Ashwini Vaishnaw (@AshwiniVaishnaw) April 19, 2023
ಮುಂಬೈನಲ್ಲಿ ಆಪಲ್‌ನ ಮೊದಲ ಇಂಡಿಯಾ ಸ್ಟೋರ್‌ನ ಅದ್ಧೂರಿ ಉದ್ಘಾಟನೆಯಂತೆಯೇ, ನಾಳೆ ಸಾಕೇತ್‌ನ ಸೆಲೆಕ್ಟ್ ಸಿಟಿ ಮಾಲ್‌ನಲ್ಲಿ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಟಿಮ್ ಕುಕ್ ಗ್ರಾಹಕರನ್ನು ಸ್ವಾಗತಿಸಲಿದ್ದಾರೆ.
ಆ್ಯಪಲ್ ಸ್ಟೋರ್ನಲ್ಲಿ ಏನೇನು ಸಿಗುತ್ತದೆ?
ಈ ಆ್ಯಪಲ್ ಸ್ಟೋರ್ ಬೇರೆ ಸ್ಮಾರ್ಟ್ಫೋನ್ಗಳ ಸ್ಟೋರ್ಗಿಂತ ಬಹಳ ವಿಭಿನ್ನ ಮತ್ತು ವೈಭವಯುತವಾಗಿದೆ. ಇಲ್ಲಿ ಆ್ಯಪಲ್‌ನ ಐಫೋನ್, ಐಪ್ಯಾಡ್, ಐಪಾಡ್, ಮ್ಯಾಕ್ ಕಂಪ್ಯೂಟರ್, ಮ್ಯಾಕ್ ಲ್ಯಾಪ್ಟಾಪ್, ಮ್ಯಾಕ್ ಟಿವಿ ಇತ್ಯಾದಿ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಇಲ್ಲಿ ಸೇಲ್ಸ್ ಜೊತೆಗೆ ಆಫ್ಟರ್ ಸೇಲ್ಸ್ ಸರ್ವಿಸ್ ಕೂಡ ಇರುತ್ತದೆ. ಆದರೂ ಕೂಡ ಆ್ಯಪಲ್ ಸ್ಟೋರ್ ಉದ್ಘಾಟನೆಗೆ ಈ ಪರಿ ಬ್ಯುಲ್ಡಪ್ ಬೇಕಾ ಎಂದು ಕೆಲವರಿಗೆ ಅನಿಸದೇ ಇರದು. ಮುಂಬೈನಲ್ಲಿರುವ ಆ್ಯಪಲ್ ಬಿಕೆಸಿ ಸ್ಟೋರ್ಗೆ ಹೋಲಿಸಿದರೆ ದೆಹಲಿಯ ಸಾಕೇತ್ನಲ್ಲಿರುವ ಆ್ಯಪಲ್ ಸ್ಟೋರ್ ಅರ್ಧದಷ್ಟು ಮಾತ್ರ ಇದೆ. ಆದರೆ, ಬಾಡಿಗೆ ಹೆಚ್ಚು. ಸಾಕೇತ್ನಲ್ಲಿರುವ ಸ್ಟೋರ್ ಗಾತ್ರದಲ್ಲಿ ಚಿಕ್ಕದಾದರೂ ವಿನ್ಯಾಸ ಇತ್ಯಾದಿ ಎಲ್ಲವೂ ಬಹುತೇಕ ಇದೇ ರೀತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 20ರಂದು ದೆಹಲಿಯ ಅ್ಯಪಲ್ ಸ್ಟೋರ್ ಉದ್ಘಾಟನೆಗೆ ಅಣಿಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:03 pm, Wed, 19 April 23