Apple Store: ಒಂದು ಆ್ಯಪಲ್ ಸ್ಟೋರ್ ಉದ್ಘಾಟನೆಗೆ ಇಷ್ಟೊಂದು ಬಿಲ್ಡಪ್ಪಾ? ಭಾರತಕ್ಕೆ ಬಂದಿರುವ ಸಿಇಒ ಟಿಮ್ ಕುಕ್ ತಲೆಯಲ್ಲಿ ಬೇರಿನ್ನೇನಾದರೂ ಇದೆಯಾ?

Tim Cook in India: ಆ್ಯಪಲ್​ನ ಮೊಬೈಲ್ ಶೋರೂಮ್​ಗೆ ಇಷ್ಟೊಂದು ಬ್ಯುಲ್ಡಪ್ ಕೊಡುತ್ತಿರುವುದು ಯಾಕೆ? ಸಮಯ ಬಹಳ ಅಮೂಲ್ಯ ಎಂದು ಭಾವಿಸುವ ಸ್ವತಃ ಸಿಇಒ ಅವರೇ ಈ ಆ್ಯಪಲ್ ಸ್ಟೋರ್​ಗಳ ಉದ್ಘಾಟನೆಗೆ ಬರುತ್ತಾರೆಂದರೆ ಅದು ಸಾಮಾನ್ಯ ಸಂಗತಿಯಂತೂ ಅಲ್ಲ. ಟಿಕ್ ಕುಕ್ ತಲೆಯಲ್ಲಿ ಏನು ಆಲೋಚನೆ ಇದೆ?

Apple Store: ಒಂದು ಆ್ಯಪಲ್ ಸ್ಟೋರ್ ಉದ್ಘಾಟನೆಗೆ ಇಷ್ಟೊಂದು ಬಿಲ್ಡಪ್ಪಾ? ಭಾರತಕ್ಕೆ ಬಂದಿರುವ ಸಿಇಒ ಟಿಮ್ ಕುಕ್ ತಲೆಯಲ್ಲಿ ಬೇರಿನ್ನೇನಾದರೂ ಇದೆಯಾ?
ಆ್ಯಪಲ್ ಬಿಕೆಸಿ ಸ್ಟೋರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 18, 2023 | 11:00 AM

ಮುಂಬೈ: ಏಪ್ರಿಲ್ 18, ಇಂದು ಮುಂಬೈನಲ್ಲಿ ಭಾರತದ ಮೊದಲ ಆ್ಯಪಲ್ ಸ್ಟೋರ್ (Apple Store) ಉದ್ಘಾಟನೆ ಆಗುತ್ತಿದೆ. ಸಮಯವೇ ದುಡ್ಡು ಅನ್ನುವಷ್ಟು ವ್ಯವಹಾರಗಳಲ್ಲಿ ಪೂರ್ಣ ತೊಡಗಿಸಿಕೊಳ್ಳುವ ಟಿಮ್ ಕುಕ್ ಮೂರು ದಿನಗಳ ಕಾಲ ಭಾರತದಲ್ಲಿ ಇರುತ್ತಾರೆಂದರೆ ಕೆಲವರಿಗಾದರೂ ಅಚ್ಚರಿ ಎನಿಸಬಹುದು. ಭಾರತದಲ್ಲಿ ಟಿಮ್ ಕುಕ್ ಎರಡು ಆ್ಯಪಲ್ ಸ್ಟೋರ್​ಗಳ ಉದ್ಘಾಟನೆ ಮಾಡಲಿದ್ದಾರೆ. ಇಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ವರ್ಲ್ಡ್ ಡ್ರೈವ್​ನಲ್ಲಿ ಸ್ಥಾಪಿಸಲಾಗಿರುವ ಆ್ಯಪಲ್ ಬಿಕೆಸಿ ಸ್ಟೋರ್ (Apple BKC Store) ಅನಾವರಣಗೊಳಿಸಲಿದ್ದಾರೆ. ಏಪ್ರಿಲ್ 20, ಗುರುವಾರದಂದು ದೆಹಲಿಯ ಸಾಕೇತ್ ಪ್ರದೇಶದಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್​ನಲ್ಲಿ ಇನ್ನೊಂದು ಆ್ಯಪಲ್ ಸ್ಟೋರ್ ಉದ್ಘಾಟನೆ ಮಾಡಲಿದ್ದಾರೆ. ಭಾರತದಲ್ಲಿ ಸ್ಯಾಮ್ಸಂಗ್, ಒಪ್ಪೋ ಇತ್ಯಾದಿ ಅನೇಕ ಸ್ಮಾರ್ಟ್​ಫೋನ್ ಕಂಪನಿಗಳ ಲೆಕ್ಕವಿಲ್ಲದಷ್ಟು ಮೊಬೈಲ್ ಶೋರೂಮ್​ಗಳಿವೆ. ಅಂಥದ್ದರಲ್ಲಿ ಆ್ಯಪಲ್​ನ ಮೊಬೈಲ್ ಶೋರೂಮ್​ಗೆ ಇಷ್ಟೊಂದು ಬ್ಯುಲ್ಡಪ್ ಕೊಡುತ್ತಿರುವುದು ಯಾಕೆ? ಸಮಯ ಬಹಳ ಅಮೂಲ್ಯ ಎಂದು ಭಾವಿಸುವ ಸ್ವತಃ ಸಿಇಒ ಅವರೇ ಈ ಆ್ಯಪಲ್ ಸ್ಟೋರ್​ಗಳ ಉದ್ಘಾಟನೆಗೆ ಬರುತ್ತಾರೆಂದರೆ ಅದು ಸಾಮಾನ್ಯ ಸಂಗತಿಯಂತೂ ಅಲ್ಲ. ಟಿಕ್ ಕುಕ್ ತಲೆಯಲ್ಲಿ ಏನು ಆಲೋಚನೆ ಇದೆ?

ಅ್ಯಪಲ್ ಬಿಕೆಸಿ ಸ್ಟೋರ್​ನಲ್ಲಿ ಏನು ವಿಶೇಷತೆ ಇದೆ?

ಆ್ಯಪಲ್ ಕಂಪನಿಯ ಸ್ಟೋರ್​ಗಳು 26 ದೇಶಗಳಲ್ಲಿವೆ. ಇಲ್ಲೆಲ್ಲಾ 500ಕ್ಕೂ ಹೆಚ್ಚು ಸ್ಟೋರ್​ಗಳಿರಬಹುದು. ವಿಶ್ವದ ಅರ್ಧದಷ್ಟು ಆ್ಯಪಲ್ ಸ್ಟೋರ್​ಗಳು ಅಮೆರಿಕವೊಂದರಲ್ಲೇ ಇವೆ. ಅಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಅ್ಯಪಲ್ ಸ್ಟೋರ್ ಇದೆ. ಆ್ಯಪಲ್​ನ ಮುಖ್ಯಕಚೇರಿ ಇರುವ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಅತಿ ಹೆಚ್ಚು ಆ್ಯಪಲ್ ಸ್ಟೋರ್ಸ್ ಇವೆ. ಇಷ್ಟೆಲ್ಲಾ ಆ್ಯಪಲ್ ಸ್ಟೋರ್ ಇದ್ದರೂ ಭಾರತದಲ್ಲಿ ಆರಂಭವಾಗುತ್ತಿರುವ ಆ್ಯಪಲ್ ಸ್ಟೋರ್​ಗೆ ಆ ಕಂಪನಿ ಇಷ್ಟೊಂದು ಪ್ರಚಾರ ಯಾಕೆ ಕೊಡುತ್ತಿದೆ?

ಇದನ್ನೂ ಓದಿInfosys: ಭರ್ಜರಿ ಷೇರು ಡಿವಿಡೆಂಡ್ ಕೊಟ್ಟ ಇನ್ಫೋಸಿಸ್​ಗೆ ಸಂಕಷ್ಟ; ಕೆಲವೇ ಗಂಟೆಯಲ್ಲಿ ಷೇರುಪೇಟೆಯಲ್ಲಿ 75,000 ಕೋಟಿ ರೂ ನಷ್ಟ; ಏನು ಕಾರಣ?

ಮುಂಬೈನಲ್ಲಿರುವ ಆ್ಯಪಲ್ ಬಿಕೆಸಿ ಸ್ಟೋರ್ ಮತ್ತು ವಿಶ್ವದ ಇತರೆಡೆಯಲ್ಲಿರುವ ಆ್ಯಪಲ್ ಸ್ಟೋರ್​ಗೂ ಅಂಥ ದೊಡ್ಡ ವ್ಯತ್ಯಾಸವೇನಿಲ್ಲ. ಆ್ಯಪಲ್ ಬಿಕೆಸಿ ಸ್ಟೋರ್​ನಲ್ಲಿ ಬಿಕೆಸಿ ಎಂದರೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಈ ಸ್ಟೋರ್ ಇರುವುದರಿಂದ ಅದಕ್ಕೆ ಆ್ಯಪಲ್ ಬಿಕೆಸಿ ಸ್ಟೋರ್ ಎಂದು ಹೆಸರಿಸಲಾಗಿದೆ. ವಿಶ್ವದ ಬೇರೆ ಆ್ಯಪಲ್ ಸ್ಟೋರ್​ಗಿಂತ ಬಿಕೆಸಿ ಸ್ಟೋರ್ ಹೆಚ್ಚು ವಿಭಿನ್ನ ಎನಿಸುವುದು ಅದರ ಕಟ್ಟಡ ನಿರ್ಮಾಣಕ್ಕೆ ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡಿರುವ ವಿಚಾರದಲ್ಲಿ. ಸಂಪೂರ್ಣ ಮರುಬಳಕೆ ಶಕ್ತಿ ಬಳಸಿ ಇದನ್ನು ಕಟ್ಟಲಾಗಿದೆ. ನೈಸರ್ಗಿಕ ಬೆಳಕು ಯಥೇಚ್ಛವಾಗಿ ಸಿಗುವ ರೀತಿಯಲ್ಲಿ ಇದರ ವಿನ್ಯಾಸ ಇದೆ. ಇದು ಬಿಟ್ಟರೆ ಒಳ ವಿನ್ಯಾಸವೆಲ್ಲವೂ ಇತರ ಆ್ಯಪಲ್ ಸ್ಟೋರ್​ಗಳಂತೆಯೇ ಇದೆ.

ಆ್ಯಪಲ್ ಬಿಕೆಸಿ ಸ್ಟೋರ್​ನಲ್ಲಿ ಕನ್ನಡದಲ್ಲೂ ವ್ಯವಹಾರ

ಮುಂಬೈನ ಆ್ಯಪಲ್ ಬಿಕೆಸಿ ಸ್ಟೋರ್​ನ ವಿಶೇಷತೆ ಎಂದರೆ ನೀವು ಕನ್ನಡದಲ್ಲೂ ಹೋಗಿ ಶಾಪಿಂಗ್ ಮಾಡಿ ಬರಬಹುದು. ಈ ಶೋರೂಮ್​ನಲ್ಲಿ 100ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಇದ್ದು, ಇವರಲ್ಲಿ 20 ಭಾಷಿಕರು ಇದ್ದಾರೆ. ಇಂಗ್ಲೀಷ್, ಹಿಂದಿಯಷ್ಟೇ ಅಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಪಂಜಾಬಿ, ಬಂಗಾಳಿ ಮೊದಲಾದ ಪ್ರಾದೇಶಿಕ ಭಾಷೆಗಳಲ್ಲಿ ಯಾರಾದರೂ ಹೋಗಿ ಅಲ್ಲಿಯ ಸಿಬ್ಬಂದಿ ಜೊತೆ ಸಂವಾದ ನಡೆಸಬಹುದು.

ಇದನ್ನೂ ಓದಿGold at Home: ಚಿನ್ನ ಪ್ರಿಯರೇ ಇಲ್ನೋಡಿ..! ಮನೆಯಲ್ಲಿ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ? ಸರ್ಕಾರದ ನಿಯಮ ತಿಳಿದಿರಿ

ಆ್ಯಪಲ್ ಸ್ಟೋರ್​ನಲ್ಲಿ ಏನೇನು ಸಿಗುತ್ತದೆ?

ಈ ಆ್ಯಪಲ್ ಸ್ಟೋರ್ ಬೇರೆ ಸ್ಮಾರ್ಟ್​ಫೋನ್​ಗಳ ಸ್ಟೋರ್​ಗಿಂತ ಬಹಳ ವಿಭಿನ್ನ ಮತ್ತು ವೈಭವಯುತವಾಗಿದೆ. ಇಲ್ಲಿ ಆ್ಯಪಲ್​ನ ಐಫೋನ್, ಐಪ್ಯಾಡ್, ಐಪಾಡ್, ಮ್ಯಾಕ್ ಕಂಪ್ಯೂಟರ್, ಮ್ಯಾಕ್ ಲ್ಯಾಪ್​ಟಾಪ್, ಮ್ಯಾಕ್ ಟಿವಿ ಇತ್ಯಾದಿ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಇಲ್ಲಿ ಸೇಲ್ಸ್ ಜೊತೆಗೆ ಆಫ್ಟರ್ ಸೇಲ್ಸ್ ಸರ್ವಿಸ್ ಕೂಡ ಇರುತ್ತದೆ. ಆದರೂ ಕೂಡ ಆ್ಯಪಲ್ ಸ್ಟೋರ್ ಉದ್ಘಾಟನೆಗೆ ಈ ಪರಿ ಬ್ಯುಲ್ಡಪ್ ಬೇಕಾ ಎಂದು ಕೆಲವರಿಗೆ ಅನಿಸದೇ ಇರದು. ಮುಂಬೈನಲ್ಲಿರುವ ಆ್ಯಪಲ್ ಬಿಕೆಸಿ ಸ್ಟೋರ್​ಗೆ ಹೋಲಿಸಿದರೆ ದೆಹಲಿಯ ಸಾಕೇತ್​ನಲ್ಲಿರುವ ಆ್ಯಪಲ್ ಸ್ಟೋರ್ ಅರ್ಧದಷ್ಟು ಮಾತ್ರ ಇದೆ. ಆದರೆ, ಬಾಡಿಗೆ ಹೆಚ್ಚು. ಸಾಕೇತ್​ನಲ್ಲಿರುವ ಸ್ಟೋರ್ ಗಾತ್ರದಲ್ಲಿ ಚಿಕ್ಕದಾದರೂ ವಿನ್ಯಾಸ ಇತ್ಯಾದಿ ಎಲ್ಲವೂ ಬಹುತೇಕ ಇದೇ ರೀತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 20ರಂದು ದೆಹಲಿಯ ಅ್ಯಪಲ್ ಸ್ಟೋರ್ ಉದ್ಘಾಟನೆಗೆ ಅಣಿಯಾಗಿದೆ.

ಆ್ಯಪಲ್ ಸಿಇಒ ಟಿಮ್ ಕುಕ್ ತಲೆಯಲ್ಲಿ ಏನಿದೆ ಆಲೋಚನೆ?

ಆ್ಯಪಲ್ ಕಂಪನಿ ಯಾವತ್ತೂ ಬ್ಯುಲ್ಡಪ್​ಗೆ ಒತ್ತು ಕೊಟ್ಟಿದ್ದಲ್ಲ. ತನ್ನ ಉತ್ಕೃಷ್ಟ ಗುಣಮಟ್ಟದಿಂದಲೇ ಆ್ಯಪಲ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬೆಳೆದಿದೆ. ಆ್ಯಪಲ್ ಉತ್ಪನ್ನ ದುಬಾರಿಯಾದರೂ ಜನರನ್ನು ತಲುಪುತ್ತದೆ. ಒಂದು ಕಾಲದಲ್ಲಿ ಐಫೋನ್ ಹೊಂದಿರುವುದೆಂದರೆ ಜನರ ಪಾಲಿಗೆ ಪ್ರತಿಷ್ಠೆಯ ಸಂಗತಿಯಾಗಿತ್ತು. ಈಗ ಐಫೋನ್​ಗಳ ಬೆಲೆ ಕಡಿಮೆ ಆಗಿದೆ. ಸಾಮಾನ್ಯ ಜನರೂ ಆ್ಯಪಲ್ ಉತ್ಪನ್ನಗಳನ್ನು ಕೊಳ್ಳಲು ಸಾಧ್ಯವಾಗಿದೆ.

ಇದನ್ನೂ ಓದಿSBI Amrit Kalash Scheme: ಉತ್ತಮ ಬಡ್ಡಿ ಕೊಡುವ ಅಮೃತ ಕಳಶ ಯೋಜನೆ ಜೂನ್ 30ರವರೆಗೂ ವಿಸ್ತರಣೆ; ಏನಿದು ಸ್ಕೀಮ್?

ಭಾರತ ಸ್ಮಾರ್ಟ್​ಫೋನ್​ಗೆ ವಿಶ್ವದಲ್ಲೇ ಅತಿದೊಡ್ಡ ಮಾರುಕಟ್ಟೆಯಲ್ಲಿ ಒಂದು. ಅತಿದೊಡ್ಡ ಮಾರುಕಟ್ಟೆ ಎನಿಸಿದ ಚೀನಾದಲ್ಲಿ ಆ್ಯಪಲ್ ಇನ್ನಷ್ಟು ಬೆಳೆಯುವುದು ಕಷ್ಟ. ಈಗ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದ ಭಾರತ ಒಂದು ರೀತಿಯಲ್ಲಿ ಆ್ಯಪಲ್​ಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿದೆ. ಐಫೋನ್​ಗಳ ಮಾರಾಟಕ್ಕೆ ಭಾರತ ವಿಸ್ತೃತ ಮಾರುಕಟ್ಟೆ ಆಗಿದೆ. ಈಗಾಗಲೇ ವಿಸ್ಟ್ರಾನ್, ಫಾಕ್ಸ್​ಕಾನ್, ಪೆಗಾಟ್ರಾನ್ ಕಂಪನಿಗಳು ಭಾರತದ ವಿವಿಧೆಡೆ ಐಫೋನ್ ಹಾಗು ಇತರ ಆ್ಯಪಲ್ ಉತ್ಪನ್ನಗಳನ್ನು ತಯಾರಿಸುತ್ತಿವೆ. ಇನ್ನಷ್ಟು ಕಡಿಮೆ ಬೆಲೆಗೆ ಐಫೋನ್​ಗಳು ಮಾರುಕಟ್ಟೆಗೆ ಅಡಿ ಇಟ್ಟು ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರಧಾನಿ, ಸಚಿವರು ಮತ್ತು ಉದ್ಯಮಿಗಳ ಭೇಟಿ

ಆ್ಯಪಲ್ ಸಿಇಒ ಟಿಮ್ ಕುಕ್ ಏಪ್ರಿಲ್ 17ರಂದು ಮುಂಬೈಗೆ ಬರುತ್ತಲೇ ಸೆಲಬ್ರಿಟಿಗಳನ್ನು ಭೇಟಿ ಮಾಡಿ ಸಾಕಷ್ಟು ಪ್ರಚಾರದ ಬಿಸಿ ಹುಟ್ಟಿಸಿದ್ದಾರೆ. ಹಾಗೆಯೇ, ಅವರು ರಿಲಾಯನ್ಸ್ ಸಾಮ್ರಾಜ್ಯದ ಒಡೆಯ ಮುಕೇಶ್ ಅಂಬಾನಿ ಮತ್ತು ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಅವರನ್ನು ಭೇಟಿ ಮಾಡಿದ್ದಾರೆ. ರಿಲಾಯನ್ಸ್ ಜಿಯೋ ಮತ್ತು ಟಾಟಾ ಜೊತೆ ಆ್ಯಪಲ್ ವ್ಯಾವಹಾರಿಕ ಸಂಬಂಧ ಹೊಂದಿದೆ. ಇಂದು ಆ್ಯಪಲ್ ಬಿಕೆಸಿ ಸ್ಟೋರ್ ಉದ್ಘಾಟನೆ ಬಳಿಕ ನಾಳೆ ಏಪ್ರಿಲ್ 18, ಬುಧವಾರದಂದು ಟಿಮ್ ಕುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಹಾಗೆಯೇ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನೂ ಆ್ಯಪಲ್ ಸಿಇಒ ಭೇಟಿ ಮಾಡುತ್ತಿದ್ದಾರೆ.

ಆ್ಯಪಲ್​ನ ಐಫೋನ್, ಐಪಾಡ್ ಫ್ಯಾಕ್ಟರಿಗಳು ಭಾರತದಲ್ಲಿ ಆರಂಭವಾಗಿರುವುದು ಉಭಯಪಕ್ಷಗಳಿಗೆ ಲಾಭಕಾರಿಯೇ. ಒಂದೆಡೆ, ಆ್ಯಪಲ್​ನ ವ್ಯವಹಾರ ವೃದ್ಧಿಸಿದರೆ, ಇನ್ನೊಂದೆಡೆ ಭಾರತದ ಉದ್ಯಮ ವಾತಾವರಣ, ಉದ್ಯೋಗ ವಾತಾವರಣ ಪ್ರಫುಲ್ಲಗೊಳ್ಳುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ