ಕನ್ನಡ ತನ್ನನ್ನು ನಂಬಿದವರನ್ನು ಯಾವತ್ತೂ ಕೈ ಬಿಡಲ್ಲ ಅನ್ನೋದಿಕ್ಕೆ ನಾನೇ ಸಾಕ್ಷಿ: ಬಾನು ಮುಷ್ತಾಕ್
ನನ್ನಷ್ಟು ಕನ್ನಡವನ್ನು ಪ್ರೀತಿಸಿ, ಬಳಸಿ ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಬೇರೆ ದೇಶಗಳ ಜನರ ಬಾಯಲ್ಲಿ ಕನ್ನಡ ಹೇಳಿಸುವಂತೆ ಮಾಡಿದವರಿಗೆ ಮಾತ್ರ ನನ್ನ ಮೇಲೆ ಕೆಸರೆರಚುವ ಅರ್ಹತೆ ಸಿಗುತ್ತದೆ, ಇದ್ಯಾವುದನ್ನೂ ಮಾಡದೆ ವೃಥಾ ಟೀಕಿಸಿದರೆ ಆ ಮಾತುಗಳಲ್ಲಿ ಯಾವುದೇ ಸ್ಪಷ್ಟತೆ ಇರೋದಿಲ್ಲ, ತನ್ನ ನಂಬಿದವರನ್ನು ಕನ್ನಡ ಕೈ ಬಿಡಲ್ಲ ಅನ್ನೋದಿಕ್ಕೆ ನಾನೇ ಸಾಕ್ಷಿ ಎಂದು ಬಾನು ಮುಷ್ತಾಕ್ ಹೇಳಿದರು.
ಹಾಸನ, ಆಗಸ್ಟ್ 26: ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಪರಿಷತ್ ತಮ್ಮನ್ನು ಸನ್ಮಾನಿಸಿದ ಬಳಿಕ ಮಾತಾಡಿ, ಕನ್ನಡವನ್ನು ಕೇವಲ ಭಾಷೆಯನ್ನಾಗಿ ಪರಿಗಣಿಸಿದಾಗ ಮಾತ್ರ ಅದನ್ನು ಎಲ್ಲರೂ ಓದಲು ಸಾಧ್ಯವಾಗುತ್ತದೆ ಎಂದರು. ಗೋಕಾಕ್ ಸಮಿತಿಯ ವರದಿ (Gokak Committee Report) ಜಾರಿಗೆ ಬಂದಾಗ ಹಾಸನದಲ್ಲಿ ಒಂದು ದೊಡ್ಡ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಅಹ್ವಾನ ಪಡೆಯುವ ಅರ್ಹತೆ ತನಗಿರಲಿಲ್ಲ, ಅನೇಕ ಗಣ್ಯರು ಅದರಲ್ಲಿ ಭಾಗವಹಿಸಿದ್ದರು, ವೇದಿಕೆ ಮೇಲೆ ಮಾತಾಡುವವರಿಗೆ ಒಂದು ನಿಬಂಧನೆ ವಿಧಿಸಲಾಗಿತ್ತು, ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿರುವವರು ಮಾತ್ರ ಮಾತಾಡಲು ಅರ್ಹರು ಎಂಬ ನಿಬಂಧನೆ ಅದಾಗಿತ್ತು, ಅವತ್ತಿನ ದಿನ ಅಲ್ಲಿ ಮಾತಾಡಿದ್ದು ತಾನು ಮಾತ್ರ; ಯಾಕೆಂದರೆ, ತನ್ನ ಮೂರೂ ಹೆಣ್ಣುಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿದ್ದರು ಎಂದು ಬಾನು ಮುಷ್ತಾಕ್ ಹೇಳಿದರು.
ಇದನ್ನೂ ಓದಿ: ಬಾನು ಮುಷ್ತಾಕ್ ಗೆ ಹಿಂದೂ ಸಂಪ್ರದಾಯದಂತೆ ಬಾಗಿನ, ಮೈಸೂರು ದಸರಾ ಉದ್ಘಾಟನೆ ಬಗ್ಗೆ ಲೇಖಕಿ ಹೇಳಿದ್ದಿಷ್ಟು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
