ಕಾರ್ ಷೋರೂಂ ಆವರಣದೊಳಗೆ ನುಗ್ಗಿದ ಕಾಡು ಹಂದಿಯ ಸ್ಪೀಡ್ ನೋಡಿ!

Edited By:

Updated on: Nov 27, 2021 | 2:28 PM

ಲಿಷ್ಠವಾಗಿರುವ ಕಾಡು ಹಂದಿ ಇದಕ್ಕಿದ್ದಂತೆ ಆವರಣದೊಳಗೆ ಬಂದಿದೆ. ಷೋರೂಂ ಪಕ್ಕದಲ್ಲಿ ಬೈಕ್​ಗಳು ಮತ್ತು ಕಾರುಗಳು ನಿಂತಿದ್ದವು. ಆದರೆ ಹಂದಿ ವಾಹನಗಳ ಬಳಿ ಹೋಗದೆ ನೇರವಾಗಿ ಷೋರೂಂ ಸಿಬ್ಬಂದಿಗೆ ಗುದ್ದಲು ಮುಂದಾಗಿದೆ.

ಕಾರ್ ಷೋರೂಂ ಆವರಣದೊಳಗೆ ಕಾಡು ಹಂದಿಯೊಂದು ನುಗ್ಗಿದೆ. ಕಾರ್ ಷೋರೂಂ ಆವರಣದೊಳಗೆ ನುಗ್ಗಿದ ಹಂದಿ ಷೋರೂಂ ಸಿಬ್ಬಂದಿ ಮೇಲೆ ತಿವಿಯಲು ಯತ್ನಿಸಿದೆ. ಮಂಗಳೂರಿನ ಪಡೀಲ್​ನ ಕಾರ್ ಷೋರೂಂನಲ್ಲಿ ನವೆಂಬರ್ 24 ರಂದು ಈ ಘಟನೆ ನಡೆದಿದೆ. ಕಾಡು ಹಂದಿ ನುಗ್ಗುವ ದೃಶ್ಯ ಲಭ್ಯವಾಗಿದ್ದು, ದೃಶ್ಯ ಭಯ ಹುಟ್ಟಿಸುತ್ತದೆ. ಕಾಡು ಹಂದಿ ಷೋರೂಂ ಸಿಬ್ಬಂದಿಯನ್ನು ಬೆನ್ನಟ್ಟಿದ್ದು, ಪವಾಡಸದೃಶವಾಗಿ ಪಾರಾಗಿದ್ದಾರೆ. ಬಲಿಷ್ಠವಾಗಿರುವ ಕಾಡು ಹಂದಿ ಇದಕ್ಕಿದ್ದಂತೆ ಆವರಣದೊಳಗೆ ಬಂದಿದೆ. ಷೋರೂಂ ಪಕ್ಕದಲ್ಲಿ ಬೈಕ್​ಗಳು ಮತ್ತು ಕಾರುಗಳು ನಿಂತಿದ್ದವು. ಆದರೆ ಹಂದಿ ವಾಹನಗಳ ಬಳಿ ಹೋಗದೆ ನೇರವಾಗಿ ಷೋರೂಂ ಸಿಬ್ಬಂದಿಗೆ ಗುದ್ದಲು ಮುಂದಾಗಿದೆ. ಹಂದಿ ವೇಗವಾಗಿ ಬರುತ್ತಿದ್ದಂತೆ ವ್ಯಕ್ತಿ ಓಡಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಹಂದಿ ವ್ಯಕ್ತಿ ಬಳಿಯಿಂದ ಮುಂದೆ ಓಡುತ್ತದೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.