ಆಷಾಢದಲ್ಲಿ ಖಾಲಿಯಾಗಿರುತ್ತಿದ್ದ ತೀರ್ಥಕ್ಷೇತ್ರಗಳು ಫುಲ್ ರಶ್; ವಿಕೇಂಡ್ನಲ್ಲಿ ದೇವಸ್ಥಾನಗಳಿಗೆ ಹರಿದು ಬಂದ ಅಪಾರ ಭಕ್ತರು
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಹಿನ್ನೆಲೆ ಆಷಾಡದಲ್ಲಿಯೂ ದೇವಸ್ಥಾನಗಳು ಫುಲ್ ಆಗಿವೆ. ಜಿಲ್ಲೆಯ ತೀರ್ಥ ಕ್ಷೇತ್ರಗಳಾದ ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಗಣಪತಿ ದೇವಸ್ಥಾನ ಸೇರಿದಂತೆ ಬಹುತೇಕ ಎಲ್ಲವೂ ಭಕ್ತರಿಂದ ತುಂಬಿ ತುಳುಕುತ್ತಿದೆ.
ದಕ್ಷಿಣ ಕನ್ನಡ: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ(Free Bus Service) ಘೋಷಣೆ ಮಾಡಿದ ಹಿನ್ನಲೆ ಆಷಾಡದಲ್ಲಿ ಖಾಲಿಯಾಗಿರುತ್ತಿದ್ದ ತೀರ್ಥಕ್ಷೇತ್ರಗಳು ಇದೀಗ ಫುಲ್ ರಶ್ಯಾಗಿದೆ. ಜಿಲ್ಲೆಯ ತೀರ್ಥ ಕ್ಷೇತ್ರಗಳಾದ ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಗಣಪತಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಬಹುತೇಕ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದು, ಫ್ರೀ ಬಸ್ನಿಂದಾಗಿ ಅಷಾಡದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಿಗೆ ಆಗಮಿಸುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 24, 2023 10:59 AM