Pink WhatsApp Alert: ನೀವು ಪಿಂಕ್ ವಾಟ್ಸ್​ಆ್ಯಪ್​ ಬಳಸ್ತಾ ಇದ್ದೀರಾ? ಹಾಗಾದ್ರೆ ಈ ವಿಡಿಯೊ ನೋಡಿ!​

|

Updated on: Feb 23, 2024 | 7:38 AM

ಜನರ ಸಹಕಾರವಿಲ್ಲದೆ ಪೊಲೀಸರು ಕೂಡ ವಂಚನೆ ತಡೆಯಲು ವಿಫಲರಾಗುತ್ತಾರೆ. ಅನಧಿಕೃತ ಆ್ಯಪ್ ಬಳಸಬೇಡಿ, ಆಫರ್ ಡಿಸ್ಕೌಂಟ್ ಅಮಿಷಕ್ಕೆ ಬಲಿಯಾಗಬೇಡಿ ಎಂದು ಜನರಿಗೆ ತಿಳಿಹೇಳಿದರೂ, ಮತ್ತೆ ಮತ್ತೆ ಜನರು ಉಚಿತದ ಆಸೆಗೆ ಬಲಿಬೀಳುತ್ತಿದ್ದಾರೆ. ಜನರ ದುರಾಸೆಯನ್ನು ಸೈಬರ್ ವಂಚಕರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇದೇ ರೀತಿಯ ಹಳೆಯ ವಂಚನೆ ಒಂದು ಮತ್ತೆ ಪ್ರಚಾರಕ್ಕೆ ಬಂದಿದ್ದು, ಕರ್ನಾಟಕ ಪೊಲೀಸರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಜನರಿಗೆ ಸೂಚಿಸಿದ್ದಾರೆ.

ಸೈಬರ್ ವಂಚನೆ ಮತ್ತು ಹಗರಣ ಕುರಿತು ಜನರಿಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅದೆಷ್ಟೇ ಎಚ್ಚರಿಕೆ ನೀಡಿದರೂ, ಮತ್ತೆ ಮತ್ತೆ ಮೋಸ ಹೋಗುವುದು ಹಾಗು ಹೊಸ ಹೊಸ ಸ್ವರೂಪದ ಸೈಬರ್ ಕ್ರೈಮ್​ಗೆ ಸಿಲುಕುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಜನರ ಸಹಕಾರವಿಲ್ಲದೆ ಪೊಲೀಸರು ಕೂಡ ವಂಚನೆ ತಡೆಯಲು ವಿಫಲರಾಗುತ್ತಾರೆ. ಅನಧಿಕೃತ ಆ್ಯಪ್ ಬಳಸಬೇಡಿ, ಆಫರ್ ಡಿಸ್ಕೌಂಟ್ ಅಮಿಷಕ್ಕೆ ಬಲಿಯಾಗಬೇಡಿ ಎಂದು ಜನರಿಗೆ ತಿಳಿಹೇಳಿದರೂ, ಮತ್ತೆ ಮತ್ತೆ ಜನರು ಉಚಿತದ ಆಸೆಗೆ ಬಲಿಬೀಳುತ್ತಿದ್ದಾರೆ. ಜನರ ದುರಾಸೆಯನ್ನು ಸೈಬರ್ ವಂಚಕರು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇದೇ ರೀತಿಯ ಹಳೆಯ ವಂಚನೆ ಒಂದು ಮತ್ತೆ ಪ್ರಚಾರಕ್ಕೆ ಬಂದಿದ್ದು, ಕರ್ನಾಟಕ ಪೊಲೀಸರು ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಜನರಿಗೆ ಸೂಚಿಸಿದ್ದಾರೆ.

Follow us on