ಮಂಡ್ಯ: ಧೂರ್ತನೊಬ್ಬ ಕೋಟಿ ರೂ.ಗೆ 25 ಕೋಟಿ ರೂ. ನೀಡ್ತೀನಿ ಅಂದಾಕ್ಷಣ ಹಣ ಕೊಟ್ಟು ಮೋಸಹೋದ ಶೈಕ್ಷಣಿಕ ಸಂಸ್ಥೆ ನಡೆಸುವ ಮಹಿಳೆ!
ನಂತರ ಸೂರ್ಯ, ಮೇರಿಯವರು ತಂದ ಜ್ಯೂಸಲ್ಲಿ ಮತ್ತ ಬರುವ ಔಷಧಿ ಬೆರೆಸಿ ಅದನ್ನು ಕುಡಿಸಿ ಅವರು ಪ್ರಜ್ಞಾಹೀನರಾದ ಬಳಿಕ ದುಡ್ಡಿನೊಂದಿಗೆ ಪರಾರಿಯಾಗುತ್ತಾನೆ. ಮಳವಳ್ಳಿ ಉಪವಿಭಾಗ ಹಲಗೂರು ವೃತ್ತ ಬೆಳಕವಾಡಿ ಠಾಣೆ ಪೊಲೀಸರು ಸೂರ್ಯನನ್ನು ಹಿಡಿದು ಕತ್ತಲು ಕೋಣೆಯಲ್ಲಿ ಹಾಕಿದ್ದಾರೆನ್ನುವುದು ಬೇರೆ ವಿಚಾರ ಮಾರಾಯ್ರೇ.
ಮಂಡ್ಯ: ಅದೇ ಹಳೆಮಾತನ್ನು ಮತ್ತೊಮ್ಮೆ ಹೇಳಬೇಕಾಗಿದೆ: ಮೋಸ ಹೋಗುವವರು ಇರೋವರೆಗೆ ಮೋಸ ಮಾಡುವವರು ಮೋಸದ ಕೃತ್ಯಗಳನ್ನು ಎಸಗುತ್ತಾರೆ. ಮಂಡ್ಯದ ಮಳವಳ್ಳಿ (Malavalli) ತಾಲ್ಲೂಕಿನ ಶಿಂಷಾಪುರದಲ್ಲಿ ಶಾಲೋಮ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (Shalom Educational and Charitable Trust) ನಡೆಸುವ ಎಸ್ ಮೇರಿ (S Mary) ಮಾಹಿತಿ ತಂತ್ರಜ್ಞಾನ ಉತ್ತುಂಗದಲ್ಲಿರುವ ಇವತ್ತಿನ ಜಮಾನಾದಲ್ಲೂ ಅದೆಂಥ ಅಮಾಯಕಿ ಎಂದರೆ, ಯಾವನೋ ಒಬ್ಬ ಧೂರ್ತ ಬಂದು ಒಂದು ಕೋಟಿ ರೂ. ಕೊಟ್ರೆ 25 ಕೋಟಿ ರೂ. ಕೊಡ್ತೀನಿ ಅಂತ ಹೇಳಿದಾಗ ಅವನನ್ನು ದೂಸ್ರಾ ಯೋಚನೆ ಮಾಡದೆ ನಂಬಿ ಬಿಡುತ್ತಾರೆ! ಸೂರ್ಯ (Surya) ಹೆಸರಿನ ದೂರ್ತ ಅವರನ್ನು ನಂಬಿಸಲು ಖೊಟ್ಟಿ, ಪೇಪರ್ ನೋಟುಗಳನ್ನು ತೋರಿಸುತ್ತಾನೆ. ಮೇರಿ ಸರಿ ಅಂತ ಹೇಳಿ 70 ಲಕ್ಷ ರೂ. ನಗದವನ್ನು ಅವನ ಕೈಗೆ ನೀಡುತ್ತಾರೆ. ನಂತರ ಸೂರ್ಯ, ಮೇರಿಯವರು ತಂದ ಜ್ಯೂಸಲ್ಲಿ ಮತ್ತ ಬರುವ ಔಷಧಿ ಬೆರೆಸಿ ಅದನ್ನು ಕುಡಿಸಿ ಅವರು ಪ್ರಜ್ಞಾಹೀನರಾದ ಬಳಿಕ ದುಡ್ಡಿನೊಂದಿಗೆ ಪರಾರಿಯಾಗುತ್ತಾನೆ. ಮಳವಳ್ಳಿ ಉಪವಿಭಾಗ ಹಲಗೂರು ವೃತ್ತ ಬೆಳಕವಾಡಿ ಠಾಣೆ ಪೊಲೀಸರು ಸೂರ್ಯನನ್ನು ಹಿಡಿದು ಕತ್ತಲು ಕೋಣೆಯಲ್ಲಿ ಹಾಕಿದ್ದಾರೆನ್ನುವುದು ಬೇರೆ ವಿಚಾರ ಮಾರಾಯ್ರೇ. ಆದರೆ, ಕೋಟಿಗೆ 25 ಕೋಟಿ ಅಂತ ಹೇಳಿದರೆ ನಂಬ್ತಾರಲ್ಲ, ಅವರಿಗೆ ಏನು ಹೇಳೋದು?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ