PM Modi at 75: ಪ್ರಧಾನಿ ಮೋದಿ ಜನ್ಮದಿನಕ್ಕೆ ಶುಭ ಕೋರಿದ ವ್ಯಾಟಿಕನ್ ಸಿಟಿ ಪೋಪ್ ಲಿಯೋ XIV
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17ರಂದು 75ನೇ ವಸಂತಕ್ಕೆ ಕಾಲಿಟ್ಟರು. ಅವರು ಜನ್ಮದಿನಕ್ಕೆ ದೇಶ, ವಿದೇಶಗಳ ಗಣ್ಯರು ಶುಭಾಶಯ ಕೋರಿದ್ದಾರೆ. ಹಾಗೆಯೇ ಯುರೋಪ್ನ ವ್ಯಾಟಿಕನ್ ಸಿಟಿಯ ಪೋಪ್ ಲಿಯೋ XIV ಅವರು ಕೂಡ ಪ್ರಧಾನಿಗೆ ವಿಶೇಷ ಶುಭಾಶಯ ತಿಳಿಸಿದ್ದಾರೆ. ಬುಧವಾರ ಭಾರತೀಯ ಅಲ್ಪಸಂಖ್ಯಾತರ ಒಕ್ಕೂಟ (IMF)ದ ಸದಸ್ಯರು ಪೋಪ್ ಅವರನ್ನು ಭೇಟಿಯಾಗಿದ್ದರು.
ವ್ಯಾಟಿಕನ್ ಸಿಟಿ, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17ರಂದು 75ನೇ ವಸಂತಕ್ಕೆ ಕಾಲಿಟ್ಟರು. ಅವರು ಜನ್ಮದಿನಕ್ಕೆ ದೇಶ, ವಿದೇಶಗಳ ಗಣ್ಯರು ಶುಭಾಶಯ ಕೋರಿದ್ದಾರೆ. ಹಾಗೆಯೇ ಯುರೋಪ್ನ ವ್ಯಾಟಿಕನ್ ಸಿಟಿಯ ಪೋಪ್ ಲಿಯೋ XIV ಅವರು ಕೂಡ ಪ್ರಧಾನಿಗೆ ವಿಶೇಷ ಶುಭಾಶಯ ತಿಳಿಸಿದ್ದಾರೆ. ಬುಧವಾರ ಭಾರತೀಯ ಅಲ್ಪಸಂಖ್ಯಾತರ ಒಕ್ಕೂಟ (IMF)ದ ಸದಸ್ಯರು ಪೋಪ್ ಅವರನ್ನು ಭೇಟಿಯಾಗಿದ್ದರು.
ಅವರು ಪ್ರಧಾನಿಯವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಸತ್ನಮ್ ಸಿಂಗ್ ಸಂಧು, ಮಾಜಿ ರಾಜತಾಂತ್ರಿಕ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ಭಾರತೀಯ ಅಲ್ಪಸಂಖ್ಯಾತರ ಒಕ್ಕೂಟದ ಸಂಚಾಲಕ ಪ್ರೊ. ಹಿಮಾನಿ ಸೂದ್ ನೇತೃತ್ವದ ಐಎಂಎಫ್ ನಿಯೋಗ ಅಲ್ಲಿಗೆ ಭೇಟಿ ನೀಡಿತ್ತು. ಸಂಸದ ಸತ್ನಮ್ ಸಿಂಗ್ ಸಂಧು ಅವರು ‘ಹಾರ್ಟ್ ಟು ಹಾರ್ಟ್: ರೆವರೆನ್ಸ್ ಆಫ್ ಸಾಗಾ’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಖ್ ಸಮುದಾಯದ ನಡುವಿನ ವಿಶೇಷ ಸಂಬಂಧದ ಕಥೆಯನ್ನು ಹೇಳುತ್ತದೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

