ಆಪರೇಷನ್ ಸಿಂಧೂರದ ಬಳಿಕ ಗುಜರಾತಿಗೆ ಮೋದಿ ಮೊದಲ ಭೇಟಿ; ವಿಶೇಷ ಕ್ಷಣಗಳ ಹೈಲೈಟ್ಸ್ ಇಲ್ಲಿದೆ

Updated on: May 26, 2025 | 7:04 PM

ಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ವಡೋದರಾದಲ್ಲಿ ರೋಡ್ ಶೋ ನಡೆಸಿದರು. ತಮ್ಮ ತವರು ರಾಜ್ಯವಾದ ಗುಜರಾತ್‌ಗೆ ಎರಡು ದಿನಗಳ ಭೇಟಿಯನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ಗುಜರಾತ್‌ನ ವಡೋದರಾದಲ್ಲಿ ರೋಡ್ ಶೋ ನಡೆಸಿದರು. ಆಪರೇಷನ್ ಸಿಂಧೂರ್ ನಂತರ ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿ ಜನಸಮೂಹದತ್ತ ಕೈ ಬೀಸುತ್ತಿದ್ದಂತೆ ಜನರು ಹೂವಿನ ದಳಗಳನ್ನು ಸುರಿಸುತ್ತಿರುವ ರೋಡ್ ಶೋನ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದು.

ವಡೋದರಾ, ಮೇ 26: ಆಪರೇಷನ್ ಸಿಂಧೂರ್ (Operation Sindoor) ನಂತರದ ಮೊದಲ ಭೇಟಿಯಾಗಿ ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಇಂದು ರೋಡ್ ಶೋ ನಡೆಸಿದ್ದಾರೆ. ಮೇ 26-27ರಂದು ಗುಜರಾತ್‌ನಲ್ಲಿ ಇರಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ವಡೋದರಾದಲ್ಲಿ ರೋಡ್ ಶೋ ನಡೆಸಿದರು. ತಮ್ಮ ತವರು ರಾಜ್ಯವಾದ ಗುಜರಾತ್‌ಗೆ ಎರಡು ದಿನಗಳ ಭೇಟಿಯನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ಗುಜರಾತ್‌ನ ವಡೋದರಾದಲ್ಲಿ ರೋಡ್ ಶೋ ನಡೆಸಿದರು. ಆಪರೇಷನ್ ಸಿಂಧೂರ್ ನಂತರ ರಾಜ್ಯಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿ ಜನಸಮೂಹದತ್ತ ಕೈ ಬೀಸುತ್ತಿದ್ದಂತೆ ಜನರು ಹೂವಿನ ದಳಗಳನ್ನು ಸುರಿಸುತ್ತಿರುವ ರೋಡ್ ಶೋನ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ 82,000 ಕೋಟಿ ರೂ. ಮೌಲ್ಯದ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಮೋದಿ, ವಡೋದರಾಗೆ ಧನ್ಯವಾದಗಳು! ಈ ಮಹಾನ್ ನಗರದಲ್ಲಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇದು ಅದ್ಭುತ ರೋಡ್ ಶೋ ಆಗಿತ್ತು. ನನಗೆ ಆಶೀರ್ವಾದಗಳನ್ನು ನೀಡಿದ ಎಲ್ಲರಿಗೂ ಕೃತಜ್ಞತೆಗಳು. ಇದು ಬಹಳ ವಿಶೇಷ ದಿನವಾಗಿತ್ತು! ಎಂದಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ