ಮಣಿಪುರಕ್ಕೆ ಆಗಮಿಸಿದ ಪ್ರಧಾನಿಗೆ ಜನರಿಂದ ಆತ್ಮೀಯ ಸ್ವಾಗತ; ನಿರಾಶ್ರಿತರೊಂದಿಗೆ ಮೋದಿ ಸಂವಾದ
ಮಣಿಪುರ ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಕೇಂದ್ರ ಸರ್ಕಾರದ ಬದ್ಧತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರಾಶ್ರಿತರಿಗೆ ಭರವಸೆ ನೀಡಿದರು. ಕುಕಿ ಪ್ರಾಬಲ್ಯದ ಚುರಾಚಂದ್‌ಪುರ ಮತ್ತು ಮೈಟೈ ಬಹುಸಂಖ್ಯಾತ ಇಂಫಾಲ್‌ನಲ್ಲಿ ಜನಾಂಗೀಯ ಸಂಘರ್ಷದಿಂದ ಸ್ಥಳಾಂತರಗೊಂಡವರನ್ನು ಪ್ರಧಾನಿ ಮೋದಿ ಭೇಟಿಯಾದರು. ಒಟ್ಟಾರೆಯಾಗಿ, ಅವರು ರಾಜ್ಯಕ್ಕೆ 8,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅರ್ಪಿಸಿದರು.
ಇಂಫಾಲ್, ಸೆಪ್ಟೆಂಬರ್ 13: ಮಣಿಪುರದ (Manipur) ಜನಾಂಗೀಯ ಹಿಂಸಾಚಾರದಿಂದಾಗಿ ನಿರಾಶ್ರಿತರಾದ ಹಲವಾರು ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಚುರಾಚಂದ್‌ಪುರದ ಶಾಂತಿ ಮೈದಾನದಲ್ಲಿ ಸಂವಾದ ನಡೆಸಿದ್ದಾರೆ. ಈ ಜನಾಂಗೀಯ ಹಿಂಸಾಚಾರದ ಬಳಿಕ 60,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು. ಇದರಲ್ಲಿ ಸುಮಾರು 40,000 ಕುಕಿ ಜೊ ಸಮುದಾಯ ಮತ್ತು ಸುಮಾರು 20,000 ಮೈತೈಗಳು ಕೂಡ ಸೇರಿದ್ದಾರೆ.
ನಿರಾಶ್ರಿತರಾದ ಜನರಲ್ಲಿ ಅನೇಕರು ಮಣಿಪುರ ರಾಜ್ಯದ ಹೊರಗೆ ಸ್ಥಳಾಂತರಗೊಂಡಿದ್ದರೂ, ಅವರಲ್ಲಿ ಹೆಚ್ಚಿನವರು ಯಾವುದೇ ಆದಾಯದ ಮೂಲಗಳಿಲ್ಲದೆ ಕಳಪೆ ಜೀವನ ಪರಿಸ್ಥಿತಿಗಳಲ್ಲಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಮೇ 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ