ಲಡಾಖ್ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ: 5 ಮೆಗಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಲಡಾಖ್ನಲ್ಲಿ ಸುಮಾರು 3,350 ಕೋಟಿ ರೂ. ಮೌಲ್ಯದ ಐದು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಲೆಹ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್, ನಿಮ್ಮು-ಪದುಮ್-ದಾರ್ಚಾ ಕಾರ್ಯತಂತ್ರದ ರಸ್ತೆ, ಜಲವಿದ್ಯುತ್ ಯೋಜನೆ, ಪೆಟ್ರೋಗ್ಲಿಫ್ ಸಂರಕ್ಷಣಾ ಪಾರ್ಕ್ ಮತ್ತು ಹಿಮ್ ಸರೋವರ ಜಲಸಂರಕ್ಷಣಾ ಕಾಮಗಾರಿಗಳು ಇದರಲ್ಲಿ ಸೇರಿವೆ. ಈ ವೇಳೆ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರಗಳು ಲಡಾಖ್ನ ಕಠಿಣ ಭೌಗೋಳಿಕ ಸವಾಲುಗಳನ್ನು ನೆಪವಾಗಿಟ್ಟು ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದವು. ಆದರೆ 2019 ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ನಂತರ ಕೇಂದ್ರ ಸರ್ಕಾರ ಗರಿಷ್ಠ ಆದ್ಯತೆ ನೀಡಿದೆ ಎಂದರು.
ನವದೆಹಲಿ, ಅಕ್ಟೋಬರ್ 15: ಪ್ರಧಾನಿ ನರೇಂದ್ರ ಮೋದಿ ಲಡಾಖ್ನಲ್ಲಿ ಸುಮಾರು 3,350 ಕೋಟಿ ರೂ. ಮೌಲ್ಯದ ಐದು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಲೆಹ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್, ನಿಮ್ಮು-ಪದುಮ್-ದಾರ್ಚಾ ಕಾರ್ಯತಂತ್ರದ ರಸ್ತೆ, ಜಲವಿದ್ಯುತ್ ಯೋಜನೆ, ಪೆಟ್ರೋಗ್ಲಿಫ್ ಸಂರಕ್ಷಣಾ ಪಾರ್ಕ್ ಮತ್ತು ಹಿಮ್ ಸರೋವರ ಜಲಸಂರಕ್ಷಣಾ ಕಾಮಗಾರಿಗಳು ಇದರಲ್ಲಿ ಸೇರಿವೆ. ಈ ವೇಳೆ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರಗಳು ಲಡಾಖ್ನ ಕಠಿಣ ಭೌಗೋಳಿಕ ಸವಾಲುಗಳನ್ನು ನೆಪವಾಗಿಟ್ಟು ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದವು. ಆದರೆ 2019 ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ನಂತರ ಕೇಂದ್ರ ಸರ್ಕಾರ ಗರಿಷ್ಠ ಆದ್ಯತೆ ನೀಡಿದೆ ಎಂದರು.
2019ರವರೆಗೆ ಕೇವಲ 1,800 ಕಿ.ಮೀ ಇದ್ದ ರಸ್ತೆ ಜಾಲ ಈಗ 4,000 ಕಿ.ಮೀಗೆ ಹೆಚ್ಚಿದೆ. ದೊಡ್ಡ ಸೇತುವೆಗಳ ಸಂಖ್ಯೆ 19ರಿಂದ 75ಕ್ಕೆ ಹಾಗೂ ಹೆಲಿಪ್ಯಾಡ್ಗಳು 7ರಿಂದ 40ಕ್ಕೆ ಏರಿಕೆಯಾಗಿವೆ. ಈ ಹಿಂದೆ ಶೇ. 3.5ರಷ್ಟಿದ್ದ ನಲ್ಲಿ ನೀರು ಸಂಪರ್ಕ ಇಂದು ಶೇ. 99ರಷ್ಟು ಮನೆಗಳನ್ನು ತಲುಪಿದೆ. ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ದ್ವಿಗುಣಗೊಂಡಿದ್ದು, ಕಾರ್ಯತಂತ್ರದ ಮಹತ್ವದ ಜೊಜಿಲಾ ಸುರಂಗ ಕಾಮಗಾರಿ ಶರವೇಗದಲ್ಲಿ ಸಾಗುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ