Video: ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

Updated on: Oct 20, 2025 | 11:56 AM

ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಐಎನ್‌ಎಸ್ ವಿಕ್ರಾಂತ್‌ಗೆ ಭೇಟಿ ನೀಡಿ ಭಾರತೀಯ ನೌಕಾಪಡೆಯ ಪಡೆಗಳೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದರು.ತಮ್ಮ ಭೇಟಿಯ ಸಮಯದಲ್ಲಿ, ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ರಾಷ್ಟ್ರಕ್ಕೆ ದೀಪಾವಳಿಯ ಶುಭಾಶಯಗಳನ್ನು ಸಲ್ಲಿಸಿದರು.

ಪಣಜಿ, ಅಕ್ಟೋಬರ್ 19: ಪ್ರಧಾನಿ ನರೇಂದ್ರ ಮೋದಿ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಐಎನ್‌ಎಸ್ ವಿಕ್ರಾಂತ್‌ಗೆ ಭೇಟಿ ನೀಡಿ ಭಾರತೀಯ ನೌಕಾಪಡೆಯ ಪಡೆಗಳೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದರು.ತಮ್ಮ ಭೇಟಿಯ ಸಮಯದಲ್ಲಿ, ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ರಾಷ್ಟ್ರಕ್ಕೆ ದೀಪಾವಳಿಯ ಶುಭಾಶಯಗಳನ್ನು ಸಲ್ಲಿಸಿದರು.

ತಮ್ಮ ಭೇಟಿಯನ್ನು ಸ್ಮರಣೀಯ ಎಂದು ಕರೆದ ಪ್ರಧಾನಿ, ಭಾರತೀಯ ನೌಕಾಪಡೆಯ ವೀರ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುವ ಅದೃಷ್ಟ ತಮಗೆ ಸಿಕ್ಕಿದೆ ಎಂದು ಹೇಳಿದರು. ಮಾವೋವಾದಿ ನಕ್ಸಲರ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ, ದೇಶದಲ್ಲಿ ಈಗ ಕೇವಲ ಶೇ11 ನಕ್ಸಲಿಸಂ ಪ್ರಭಾವ ಉಳಿದಿದೆ. ಛತ್ತೀಸಗಢ್​ನ 3 ಜಿಲ್ಲೆಗಳಲ್ಲಿ ಮಾತ್ರ ನಕ್ಸಲಿಸಂ ಪ್ರಭಾವ ಇದೆ.100ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲರ್​​ಗಳಿಂದ ಮುಕ್ತಗೊಂಡಿವೆ,ನಕ್ಸಲ್ ಪ್ರಭಾವದ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ