ಕುವೈತ್​​ನಲ್ಲಿ ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ ಮಂಗಲ್ ಸೈನ್ ಹಂಡಾರ

|

Updated on: Dec 21, 2024 | 5:13 PM

ಪ್ರಧಾನಿ ಮೋದಿ ಅವರು ಇಂದು ಕುವೈತ್​ಗೆ ಭೇಟಿ ನೀಡಿದ್ದಾರೆ. ಅಲ್ಲಿ ಮೋದಿ ಅದ್ಧೂರಿ ಸ್ವಾಗತ ಕೂಡ ಸಿಕ್ಕಿದೆ. ಈ ವೇಳೆ ಕುವೈತ್​​ನಲ್ಲಿರುವ ಭಾರತೀಯರು ಮೋದಿ ಅವರನ್ನು ಸ್ವಾಗತಿಸಲು ನಿಂತಿದ್ದರು. ಅಲ್ಲಿ 101 ವರ್ಷದ ಐಎಫ್‌ಎಸ್ ಅಧಿಕಾರಿ ಮಂಗಲ್ ಸೈನ್ ಹಂಡಾ ಕೂಡ ಬಂದಿದ್ದರು. ಈ ವೇಳೆ ಮೋದಿ ಅವರು ಅವರ ಆರೋಗ್ಯ ವಿಚಾರಿಸಿದ್ದಾರೆ. ಹಾಗೂ ಮಂಗಲ್ ಸೈನ್ ಹಂಡಾ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೂಡ ಕೋರಿದ್ದಾರೆ.

ಭಾರತದ ಪ್ರಧಾನಿಯೊಬ್ಬರು 43 ವರ್ಷಗಳ ನಂತರ ಕುವೈತ್​​ಗೆ ಭೇಟಿ ನೀಡಿರುವ ಹೆಗ್ಗಳಿಕೆಯನ್ನು ಪ್ರಧಾನಿ ಮೋದಿ ಅವರು ಪಡೆದುಕೊಂಡಿದ್ದಾರೆ. ಇಂದು ಮೋದಿ ಅವರು ಕುವೈತ್​​​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಪ್ರಧಾನಿ ಮೋದಿ ಅವರು ಡಿಸೆಂಬರ್ 21 ಮತ್ತು 22 ರಂದು ಎರಡು ದಿನಗಳ ಕುವೈತ್​​ಗೆ ಪ್ರವಾಸ ಕೈಗೊಂಡಿದ್ದಾರೆ. ಕುವೈತ್‌ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಮೋದಿ ಈ ಭೇಟಿ ನೀಡಿದ್ದಾರೆ. ಈ ವೇಳೆ 101 ವರ್ಷದ ಐಎಫ್‌ಎಸ್ ಅಧಿಕಾರಿ ಮಂಗಲ್ ಸೈನ್ ಹಂಡಾ ಅವರನ್ನು ಭೇಟಿಯಾಗಿದ್ದಾರೆ. ಇದರ ಜತೆಗೆ ಬ್ದುಲ್ಲಾ ಅಲ್ ಬರೌನ್ ಮತ್ತು ಅಬ್ದುಲ್ ಲತೀಫ್ ಅಲ್ ನೆಸೆಫ್ ಎಂಬುವವರು ಮೋದಿಯನ್ನು ಭೇಟಿಯಾಗಿ, ಅವರಿಗೆ ಅರೇಬಿಕ್ ಭಾಷೆಯಲ್ಲಿ ಅನುವಾದಿಸಿರುವ ರಾಮಾಯಣ ಮತ್ತು ಮಹಾಭಾರತವನ್ನು ನೀಡಿ ಅದಕ್ಕೆ ಅವರಿಂದ ಸಹಿ ಪಡೆದಿದ್ದಾರೆ.