ಪ್ರಧಾನಿ ಮೋದಿ ಜೊತೆಗಿನ ಸಭೆಗೆ ಬ್ಲೇರ್​ ಹೌಸ್​ಗೆ ಆಗಮಿಸಿದ ಟೆಸ್ಲಾ ಸಿಇಒ ಎಲಾನ್ ಮಸ್ಕ್

Updated on: Feb 13, 2025 | 10:35 PM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಎಲಾನ್ ಮಸ್ಕ್ ತನ್ನ ಕುಟುಂಬದೊಂದಿಗೆ ಬ್ಲೇರ್ ಹೌಸ್‌ಗೆ ಆಗಮಿಸಿದ್ದಾರೆ. ಇದಕ್ಕೂ ಮೊದಲು, ಪ್ರಧಾನಿ ಮೋದಿ ವಾಷಿಂಗ್ಟನ್ ಡಿಸಿಯ ಬ್ಲೇರ್ ಹೌಸ್‌ನಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ವಾಷಿಂಗ್ಟನ್: ಎರಡು ದಿನಗಳ ಅಮೆರಿಕ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕರಾದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಲಿದ್ದಾರೆ. ಈ ದ್ವಿಪಕ್ಷೀಯ ಸಭೆಗಾಗಿ ಈಗಾಗಲೇ ಎಲಾನ್ ಮಸ್ಕ್ ಬ್ಲೇರ್​ ಹೌಸ್​ಗೆ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಆಗಮಿಸಿದ್ದಾರೆ. ಈ ಭೇಟಿಯ ಸಮಯದಲ್ಲಿ ಮೋಸಿ- ಎಲಾನ್ ಮಸ್ಕ್ ಇಬ್ಬರೂ ಸ್ಟಾರ್‌ಲಿಂಕ್‌ನ ಭಾರತದಲ್ಲಿ ಪ್ರವೇಶದ ಬಗ್ಗೆ ಚರ್ಚಿಸಬಹುದು ಎನ್ನಲಾಗಿದೆ.

ಮೋದಿ-ಮಸ್ಕ್ ಸಭೆಯು ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಮಹತ್ವದ ಸಭೆಯ ಜೊತೆಗಿನ ಅತ್ಯಂತ ನಿರೀಕ್ಷಿತ ಸಭೆಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಸೇವೆಗಳಿಗಾಗಿ ಭಾರತದ ಮಾರುಕಟ್ಟೆಯಲ್ಲಿ ಸ್ಟಾರ್‌ಲಿಂಕ್‌ನ ಪ್ರವೇಶದ ಬಗ್ಗೆ ಇಬ್ಬರೂ ಚರ್ಚಿಸಬಹುದು ಎನ್ನಲಾಗಿದೆ. ಎಲಾನ್ ಮಸ್ಕ್ ತನ್ನ ಸ್ಟಾರ್‌ಲಿಂಕ್ ಡೇಟಾವನ್ನು ಭಾರತ ದೇಶದಲ್ಲಿ ಸ್ಥಳೀಯವಾಗಿ ಸಂಗ್ರಹಿಸುವುದು ಸೇರಿದಂತೆ ಭಾರತದ ಭದ್ರತಾ ಕಾಳಜಿಗಳ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 13, 2025 10:35 PM