ವಾರಾಣಸಿಯ ನಮೋ ಘಾಟ್‌ನ ಆಗಸದಲ್ಲಿ ವಾಯುಪಡೆಯ ಸಾಹಸ; ಮೋದಿಯ ಮನಸೆಳೆದ ಏರ್ ಶೋ
ವಾರಾಣಸಿಯ ನಮೋ ಘಾಟ್‌ನಲ್ಲಿ 'ವಿಂಗ್ಸ್ ಓವರ್ ಗಂಗಾ' ವಾಯುಪ್ರದರ್ಶನ ನಡೆದಿದೆ. ಗಂಗಾ ನದಿಯ ಮೇಲೆ ಐಎಎಫ್ ಯುದ್ಧ ವಿಮಾನಗಳ ರೋಮಾಂಚಕ ಕಸರತ್ತು ನಡೆಯಿತು. ಇದನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಈ ಏರೋ ಶೋವನ್ನು ಮೆಚ್ಚಿಕೊಂಡಿದ್ದಾರೆ. ನಮೋ ಘಾಟ್‌ನಲ್ಲಿ ನಡೆದ ಈ ಅಭೂತಪೂರ್ವ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಾಕ್ಷಿಯಾದರು.
ವಾರಾಣಸಿ, ಅಕ್ಟೋಬರ್ 25: ಉತ್ತರ ಪ್ರದೇಶದ ಪವಿತ್ರ ನಗರಿ ವಾರಾಣಸಿಯ ನಮೋ ಘಾಟ್‌ನಲ್ಲಿ ಭಾರತೀಯ ವಾಯುಪಡೆಯ (IAF) ‘ವಿಂಗ್ಸ್ ಓವರ್ ಗಂಗಾ’ ಬೃಹತ್ ವೈಮಾನಿಕ ಪ್ರದರ್ಶನ ಅತ್ಯಂತ ವೈಭವದಿಂದ ನೆರವೇರಿತು. ಪವಿತ್ರ ಗಂಗಾ ನದಿಯ ಜಲರಾಶಿಯ ಮೇಲ್ಭಾಗದಲ್ಲಿ ವಾಯುಪಡೆಯ ಯುದ್ಧ ವಿಮಾನಗಳು ನಡೆಸಿದ ರೋಮಾಂಚಕಾರಿ ಸಾಹಸ ಕಸರತ್ತುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವೀಕ್ಷಿಸಿದರು.
ನಮೋ ಘಾಟ್‌ನಲ್ಲಿ ನಡೆದ ಈ ಅಭೂತಪೂರ್ವ ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಾಕ್ಷಿಯಾದರು. ವಾಯುಪಡೆಯ ವಿಮಾನಗಳು ಗಂಗಾ ನದಿಯ ನೀರ ಮೇಲ್ಮೈಗೆ ತೀರಾ ಹತ್ತಿರವಾಗಿ ಹಾರಾಟ ನಡೆಸಿ ವಿವಿಧ ಶೌರ್ಯಪೂರ್ಣ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us