ಉಡುಪಿ ಕಡಲತೀರದಲ್ಲಿ ಮೋದಿಯ ಮರಳಿನ ಕಲಾಕೃತಿ!

Updated on: Nov 27, 2025 | 1:22 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉಡುಪಿಗೆ ಭೇಟಿ ನೀಡಿದ್ದು, ಉಡುಪಿ ಕಡಲತೀರದಲ್ಲಿ ಸ್ಯಾಂಡ್ ಟೀಮ್ ವತಿಯಿಂದ ವಿಶೇಷ ಮರಳು ಶಿಲ್ಪ ಕಲಾಕೃತಿಯನ್ನು ರಚಿಸಲಾಗಿತ್ತು. "ವೆಲ್ಕಮ್ ಟು ಉಡುಪಿ" ಎಂಬ ಥೀಮ್ ಅಡಿಯಲ್ಲಿ ರೂಪುಗೊಂಡಿರುವ ಈ ಕಲಾಕೃತಿಯು, ಶ್ರೀಕೃಷ್ಣನ ಅವತಾರ ಹಾಗೂ ಪ್ರಧಾನಿ ಮೋದಿ ಅವರ ಭಾವಶಿಲ್ಪವನ್ನು ಒಳಗೊಂಡಿದ್ದು, ಮಠದ ಹಿನ್ನೆಲೆ ಮತ್ತು ಗೀತಾ ಸಾರವನ್ನು ಆಧರಿಸಿದೆ. ಹರೀಶ್ ಸಾಗಾ, ಸಂತೋಷ್ ಭಟ್ ಆಲಡಿ, ಮತ್ತು ಉಜ್ವಲ್ ನಿಟ್ಟೆ ಅವರನ್ನೊಳಗೊಂಡ ತಂಡವು ಸತತ ಐದು ಗಂಟೆಗಳ ಕಾಲ ಶ್ರಮವಹಿಸಿ ಈ ಕಲಾಕೃತಿಯನ್ನು ಪೂರ್ಣಗೊಳಿಸಿದೆ.

ಬೆಂಗಳೂರು, ನವೆಂಬರ್ 27: ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಭೇಟಿ ನೀಡಿದ್ದು, ಉಡುಪಿ ಕಡಲತೀರದಲ್ಲಿ ಸ್ಯಾಂಡ್ ಟೀಮ್ ವತಿಯಿಂದ ವಿಶೇಷ ಮರಳು ಕಲಾಕೃತಿಯನ್ನು ರಚಿಸಲಾಗಿತ್ತು. “ವೆಲ್ಕಮ್ ಟು ಉಡುಪಿ” ಎಂಬ ಥೀಮ್ ಅಡಿಯಲ್ಲಿ ರೂಪುಗೊಂಡಿರುವ ಈ ಕಲಾಕೃತಿಯು, ಶ್ರೀಕೃಷ್ಣನ ಅವತಾರ ಹಾಗೂ ಪ್ರಧಾನಿ ಮೋದಿ ಅವರ ಶಿಲ್ಪವನ್ನು ಒಳಗೊಂಡಿದ್ದು, ಮಠದ ಹಿನ್ನೆಲೆ ಮತ್ತು ಗೀತಾ ಸಾರವನ್ನು ಆಧರಿಸಿದೆ. ಹರೀಶ್ ಸಾಗಾ, ಸಂತೋಷ್ ಭಟ್ ಆಲಡಿ, ಮತ್ತು ಉಜ್ವಲ್ ನಿಟ್ಟೆ ಅವರನ್ನೊಳಗೊಂಡ ತಂಡವು ಸತತ ಐದು ಗಂಟೆಗಳ ಕಾಲ ಶ್ರಮವಹಿಸಿ ಈ ಕಲಾಕೃತಿಯನ್ನು ಪೂರ್ಣಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.