PM Narendra Modi in Karnataka: ಬಿಡುವಿಲ್ಲದೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಪ್ರಧಾನಿ ಹೆಲಿಕಾಪ್ಟರ್ನಲ್ಲಿ ದಾವಣಗೆರೆಗೆ ಆಗಮಿಸಿದರು
ದಾವಣಗೆರೆಗೆ ಬರುವ ಮೊದಲು ಅವರು ಚಿಕ್ಕಬಳ್ಳಾಪುರದಲ್ಲಿ ಸತ್ಯಸಾಯಿ ಮಧುಸೂದನ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ಅದಾದ ಬಳಿಕ ಬಹು ನಿರೀಕ್ಷಿತ ಕೆ ಆರ್ ಪುರಂ-ವ್ಹೈಟ್ ಫೀಲ್ಡ್ಸ್ ಮೆಟ್ರೋ ಸಂಚಾರದ ಲೋಕಾರ್ಪಣೆ ಮಾಡಿದರು.
ದಾವಣಗೆರೆ: ಒಂದು ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಈಗ್ಗೆ ಕೆಲ ನಿಮಿಷಗಳ ಮೊದಲು ದಾವಣಗೆರೆಗೆ (Davanagere) ಆಗಮಿಸಿದರು. ಭಾರತೀಯ ವಾಯುಸೇನೆಗೆ (Indian Air Force) ಸೇರಿದ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ನಗರದ ಜಿಎಮ್ಐಟಿ (GMIT) ಮೈದಾನದಲ್ಲಿ ಆಯೋಜಿಸಲಾಗಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿದರು. ಇಲ್ಲಿಗೆ ಬರುವ ಮೊದಲು ಅವರು ಚಿಕ್ಕಬಳ್ಳಾಪುರದಲ್ಲಿ ಸತ್ಯಸಾಯಿ ಮಧುಸೂದನ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ಅದಾದ ಬಳಿಕ ಬಹು ನಿರೀಕ್ಷಿತ ಕೆ ಆರ್ ಪುರಂ-ವ್ಹೈಟ್ ಫೀಲ್ಡ್ಸ್ ಮೆಟ್ರೋ ಸಂಚಾರದ ಲೋಕಾರ್ಪಣೆ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 25, 2023 04:17 PM
Latest Videos